ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ : ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ

Update: 2024-12-20 21:51 IST
Mansukh Mandaviya.

ಮನ್ಸುಖ್ ಮಾಂಡವೀಯ | PC : PTI  

  • whatsapp icon

ಹೊಸದಿಲ್ಲಿ : ಹಲವಾರು ಕಲ್ಯಾಣ ಕಾರ್ಯಕ್ರಮಗಳ ನೆರವಿನ ಮೂಲಕ ಬೀಡಿ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕೆ ಮೋದಿ ಸರಕಾರ ಬದ್ಧವಾಗಿದೆ ಎಂದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ಬುಧವಾರ ‘The Need to Preserve, Protect and Promote Beedi Workers’ Livelihood’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲರೊಂದಿಗೆ ಎಲ್ಲರ ವಿಕಾಸ’ ಮೋದಿ ಸರಕಾರದ ಮಂತ್ರವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಬಡ ಜನರು, ರೈತರು ಹಾಗೂ ಕಾರ್ಮಿಕರ ಕಲ್ಯಾಣ ಮೋದಿ ಸರಕಾರದ ಆದ್ಯತೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ಹೊಸದಿಲ್ಲಿಯ ಟ್ರೈನಿಕೇತನ್ ಫೌಂಡೇಶನ್ ಫಾರ್ ಡೆವಲಪ್ ಮೆಂಟ್ ಸಹಭಾಗಿತ್ವದೊಂದಿಗೆ ಆಲ್ ಇಂಡಿಯಾ ಬೀಡಿ ಇಂಡಸ್ಟ್ರಿ ಫೆಡರೇಶನ್ (AIBIF) ಈ ಕೃತಿಯನ್ನು ಬಿಡುಗಡೆಗೊಳಿಸಿತು. ಈ ಕೃತಿಯನ್ನು ಡಾ. ಅನಿಲಾ ನಾಯರ್ ಹಾಗೂ ಡಾ. ಎಂ.ಎಂ.ರೆಹ್ಮಾನ್ ರಚಿಸಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯಸಭಾ ಸಂಸದ ಪ್ರಫುಲ್ ಭಾಯಿ ಪಟೇಲ್, ಸ್ವದೇಶಿ ಜಾಗರಣ್ ಮಂಚ್ ನ ರಾಷ್ಟ್ರೀಯ ಸಂಚಾಲಕಿ ಡಾ. ಅಶ್ವಿನಿ ಮಹಾಜನ್ ಹಾಗೂ ಭಾರತೀಯ ಮಝ್ದೂರ್ ಸಂಘದ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಬಿ.ಸುರೇಂದ್ರನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News