NCERTಗೆ ಹೊಸ ಸಂಕಷ್ಟ: ಪಠ್ಯದಿಂದ ಹೆಸರು ಕಿತ್ತುಹಾಕಲು ಲೇಖಕರ ಒತ್ತಾಯ

Update: 2024-06-18 02:57 GMT

ಹೊಸದಿಲ್ಲಿ: NCERT ಪರಿಷ್ಕೃತ ಪಠ್ಯಪುಸ್ತಕಗಳ ಲೇಖಕರ ಪಟ್ಟಿಯಿಂದ ತಮ್ಮ ಹೆಸರು ಕಿತ್ತುಹಾಕುವಂತೆ ಮನವಿ ಮಾಡಿಕೊಂಡಿದ್ದರೂ, ಹೊಸ ಪುಸ್ತಕಗಳಲ್ಲಿ ಹೆಸರು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ತಜ್ಞರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಲ್ಶೀಕರ್ NCERTಗೆ ಪತ್ರ ಬರೆದಿದ್ದಾರೆ.

ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಸೋಮವಾರ ಬರೆದ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

"ರಾಜಕೀಯವಾಗಿ ಪಕ್ಷಪಾತದ ನಿಲುವು ಹೊಂದಿರುವ, ಶೈಕ್ಷಣಿಕವಾಗಿ ಅಸಮರ್ಥನೀಯ ಹಾಗೂ ಶಿಕ್ಷಣಶಾಸ್ತ್ರೀಯವಾಗಿ ನಿಷ್ಕ್ರಿಯವಾಗಿರುವ ರಾಜಕೀಯ ವಿಜ್ಞಾನದ ಪಠ್ಯಗಳನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ತಮ್ಮ ಹೆಸರನ್ನು NCERT ಬಳಸಿಕೊಳ್ಳುವುದು ಬೇಕಿಲ್ಲ" ಎಂದು ಅವರು ಹೇಳಿದ್ದಾರೆ.

ಮಾಜಿ ಮುಖ್ಯ ಸಲಹೆಗಾರರಾಗಿರುವ ಇವರು ಕಳೆದ ವರ್ಷ ಪುಸ್ತಕಗಳಿಂದ ತಮ್ಮ ಹೆಸರು ಕಿತ್ತುಹಾಕುವಂತೆ ಕೋರಿದ್ದರು. ಒಮ್ಮೆ ಹೆಮ್ಮೆಯ ಪ್ರತೀಕವಾಗಿದ್ದ ಪಠ್ಯಪುಸ್ತಕಗಳು ಇಂದು ಮುಜುಗರಕ್ಕೆ ಮೂಲವಾಗುತ್ತಿವೆ. ನಮ್ಮ ಆಕ್ಷೇಪಗಳ ಹೊರತಾಗಿಯೂ, ಪರಿಷ್ಕೃತ ಪಠ್ಯಗಳಲ್ಲಿ ನಮ್ಮ ಹೆಸರನ್ನು ಮುಖ್ಯ ಸಲಹೆಗಾರರು ಎಂದು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News