ಮಥುರಾದ ದೇವಳದಲ್ಲಿ ಏಸಿ ನೀರನ್ನೇ ‘ಪವಿತ್ರ ಜಲ ’ಎಂದು ಸೇವಿಸಿದ ಭಕ್ತರು

Update: 2024-11-04 21:05 IST
Photo of Mathuras Temple

PC :  X 

  • whatsapp icon

ಮಥುರಾ : ಉತ್ತರ ಪ್ರದೇಶದ ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದಲ್ಲಿ ಭಕ್ತರು ಆವರಣದಲ್ಲಿಯ ಆನೆ ಶಿಲ್ಪದಿಂದ ತೊಟ್ಟಿಕ್ಕುತ್ತಿದ್ದ ನೀರನ್ನು ‘ಚರಣ ಅಮೃತ’ ಅಥವಾ ಪವಿತ್ರ ಜಲ ಎಂದು ಭಾವಿಸಿ ಅದನ್ನು ಸೇವಿಸಲು ಸಾಲುಗಟ್ಟಿ ನಿಂತಿದ್ದನ್ನು ತೋರಿಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಅದು ವಾಸ್ತವದಲ್ಲಿ ಗರ್ಭಗುಡಿಯಲ್ಲಿ ಅಳವಡಿಸಿರುವ ಏಸಿಯಿಂದ ಹೊರಬರುತ್ತಿದ್ದ ನೀರು ಆಗಿತ್ತು.

ಭಕ್ತರು ನೀರನ್ನು ಸೇವಿಸಿ ಅದನ್ನು ತಲೆಯ ಮೇಲೆ ಹಾಕಿಕೊಂಡಿದ್ದು ಮಾತ್ರವಲ್ಲ,ಅದನ್ನು ಕೊಂಡೊಯ್ಯಲು ಪೇಪರ್ ಕಪ್ಗಳಲ್ಲಿ ಸಂಗ್ರಹಿಸುತ್ತಿದ್ದನ್ನೂ ವೀಡಿಯೊಗಳು ತೋರಿಸಿವೆ. ನೀರು ಗರ್ಭಗುಡಿಯಲ್ಲಿನ ದೇವತೆಗಳ ಪಾದಗಳಿಂದಲೇ ನೇರವಾಗಿ ಬರುತ್ತಿದೆ ಎಂದು ಭಕ್ತರು ಭಾವಿಸಿದ್ದರು.

ಆನೆಯ ಶಿಲ್ಪದಿಂದ ತೊಟ್ಟಿಕ್ಕುತ್ತಿರುವ ನೀರು ‘ಚರಣ ಅಮೃತ’ ಎಂಬ ವದಂತಿಗಳನ್ನು ಜನರು ಹರಡಿದ್ದಾರೆ. ಜನರು ಈ ತಪ್ಪುಗ್ರಹಿಕೆಯಿಂದ ಹೊರಬರಬೇಕು. ನೀರು ಏಸಿಯಿಂದ ಬರುತ್ತಿದೆ. ಇದು ಪವಿತ್ರ ಜಲ ಅಲ್ಲವೇ ಅಲ್ಲ. ಚರಣ ಅಮೃತ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಅದು ದೇವಸ್ಥಾನದ ಒಳಗೆ ಮಾತ್ರ ಲಭ್ಯ ಎಂದು ದೇವಸ್ಥಾನ ಉಸ್ತುವಾರಿ ಆಶಿಷ್ ಗೋಸ್ವಾಮಿ ತಿಳಿಸಿದರೂ ಭಕ್ತರು ಅದನ್ನು ಕಿವಿಗೇ ಹಾಕಿಕೊಂಡಿರಲಿಲ್ಲ.

ಈ ನಡುವೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಮೂರ್ಖತನ ಉಲ್ಬಣಿಸುತ್ತಿದೆ ಎಂದು ಓರ್ವರು ಹೇಳಿದ್ದರೆ, ಇನ್ನೋರ್ವರು ಕುರುಡು ಅನುಯಾಯಿಗಳಿಗೇನೂ ಕೊರತೆಯಿಲ್ಲ ಎಂದು ಹೇಳಿದ್ದಾರೆ.

ಭಕ್ತರು ತರ್ಕ ಅಥವಾ ವಿಜ್ಞಾನವನ್ನಲ್ಲ, ತಮ್ಮ ನಂಬಿಕೆಯನ್ನು ಮಾತ್ರ ಅನುಸರಿಸಿದ್ದಾರೆ. ಹೀಗಾಗಿ ಇದು ತಮಗೆ ಆಘಾತವನ್ನು ಅಥವಾ ಅಚ್ಚರಿಯನ್ನೂ ಉಂಟು ಮಾಡಿಲ್ಲ ಎಂದು ಇನ್ನು ಕೆಲವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News