ಉದ್ಧವ್ ಠಾಕ್ರೆಯ ಬ್ಯಾಗ್ ತಪಾಸಣೆ‌ ಕುರಿತ ಶಿವಸೇನೆಯ ಆರೋಪಕ್ಕೆ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿದ ಬಿಜೆಪಿ

Update: 2024-11-13 07:07 GMT

Screengrab:X/@BJP4Maharashtra

ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಕಾವೇರಿದ್ದು, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಬ್ಯಾಗ್ ವನ್ನು ಚುನಾವಣಾ ಆಯೋಗ ತಪಾಸಣೆ ನಡೆಸಿರುವುದರ ವಿರುದ್ಧ ಶಿವಸೇನೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ಪಕ್ಷಪಾತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ. ಇದರ ಬೆನ್ನಿಗೇ ಶಿವಸೇನೆಯ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಲಗೇಜನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ಮಾಡುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಇದಕ್ಕೂ ಮುನ್ನ, "ನಾನು ನಿಮ್ಮನ್ನು ತಡೆಯುವುದಿಲ್ಲ. ನೀವು ನಿಮ್ಮ ಜವಾಬ್ದಾರಿಯನ್ನು ಪಾಲಿಸುತ್ತಿದ್ದೀರಿ. ನಿಮಗೇನು ಬೇಕೋ ಅದರ ಹುಡುಕಾಟ ನಡೆಸಿ. ಆದರೆ, ನೀವು ದೇವೇಂದ್ರ ಫಡ್ನವಿಸ್, ನರೇಂದ್ರ ಮೋದಿ ಅಥವಾ ಅಮಿತ್ ಶಾರ ಚೀಲಗಳನ್ನೂ ತಪಾಸಣೆ ನಡೆಸಿದ್ದೀರಾ?" ಎಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಉದ್ಧವ್ ಠಾಕ್ರೆ ಪ್ರಶ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಅದಕ್ಕೆ ಪ್ರತಿಯಾಗಿ ಬುಧವಾರ ಬಿಜೆಪಿಯು ಕೊಲ್ಹಾಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೇವೇಂದ್ರ ಫಡ್ನವಿಸ್ ಅವರ ಲಗೇಜನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ ವಿಡಿಯೊವನ್ನು ಹಂಚಿಕೊಂಡಿದೆ.

ಈ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರ ಬಿಜೆಪಿ ಘಟಕವು, "ಕೆಲವು ನಾಯಕರು ಕೇವಲ ಊಹಾಪೋಹಗಳನ್ನಷ್ಟೆ ಸೃಷ್ಟಿಸುತ್ತಾರೆ" ಎಂದು ಉದ್ಧವ್ ಠಾಕ್ರೆ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡಿದೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News