ಮುಂದಿನ ಸರಕಾರವು ಅನುತ್ಪಾದಕ ಜಿಎಸ್‌ಟಿ ಸಮಸ್ಯೆಯನ್ನು ಸುಧಾರಿಸಬೇಕು: 13ನೇ ಹಣಕಾಸು ಆಯೋಗದ ಅಧ್ಯಕ್ಷ ಆಗ್ರಹ

Update: 2024-04-07 17:07 GMT

ಸಾಂದರ್ಭಿಕ ಚಿತ್ರ Photo: PTI

ಹೊಸದಿಲ್ಲಿ : ಅನಗತ್ಯವಾಗಿ ಸಂಕೀರ್ಣವಾಗಿರುವ ಸರಕುಗಳು ಹಾಗೂ ಸೇವಾ ತೆರಿಗೆ(GST)ಯನ್ನು ಮುಂದಿನ ಸರಕಾರವು ತಕ್ಷಣವೇ ಸುಧಾರಿಸಬೇಕು ಎಂದು ಭಾರತದ ತೆರಿಗೆ ಸುಧಾರಣೆಗಳ ಶಿಲ್ಪಿ ಹಾಗೂ ಹದಿಮೂರನೆ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ವಿಜಯ್ ಕೇಳ್ಕರ್ ಆಗ್ರಹಿಸಿದ್ದಾರೆ. ಜಿಎಸ್‌ಟಿಯ ತೆರಿಗೆ ದರವನ್ನು ಒಂದೇ ಹಂತದ ಶೇ. 12ಕ್ಕೆ ನಿಗದಿಗೊಳಿಸಿ, ಅದರಿಂದ ಬರುವ ಆದಾಯವನ್ನು ಸ್ಥಳೀಯ ಸರಕಾರಗಳು ಹಾಗೂ ಮಹಾನಗರ ಪಾಲಿಕೆಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪರೋಕ್ಷ ತೆರಿಗೆಗಳಿಗಾಗಿ ಜುಲೈ, 2017ರಂದು ಸ್ಥಾಪಿಸಲಾಗಿರುವ ಉನ್ನತ ನಿರ್ಣಯ ಸಮಿತಿಯಾದ ಜಿಎಸ್‌ಟಿ ಮಂಡಳಿಗೆ ಸ್ವತಂತ್ರ ಕಾರ್ಯಾಲಯವನ್ನು ಸ್ಥಾಪಿಸುವುದನ್ನೂ ವಿಜಯ್ ಕೇಳ್ಕರ್ ಆಕ್ಷೇಪಿಸಿದ್ದಾರೆ. ಕಾರ್ಯಾಲಯವನ್ನು ಚಲಾಯಿಸಲು ಕೇಂದ್ರ ಸರಕಾರವು ಮಾಡಿಕೊಂಡಿರುವ ಹಾಲಿ ವ್ಯವಸ್ಥೆಗಳು ರಾಜ್ಯಗಳ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರ ಈ ಆಕ್ಷೇಪ ವ್ಯಕ್ತವಾಗಿದೆ.

ಜಿಎಸ್‌ಟಿ ಯುಗವನ್ನು ಅದರ ಅತ್ಯಂತ ಸಹಜ ಗಮ್ಯಕ್ಕೆ ತೆಗೆದುಕೊಂಡು ಹೋಗಲು ಸಾಮಾನ್ಯ ತೆರಿಗೆ ದರಗಳನ್ನು ಹೊಂದಿರುವ ಜಿಎಸ್‌ಟಿ ಸ್ವರೂಪದ ಸರಳೀಕರಣ ಆರ್ಥಿಕ ಸುಧಾರಣೆಗೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದಾಯ ತಟಸ್ಥತೆಯನ್ನು ನಿರ್ವಹಿಸುವ ಬೃಹತ್ ಉದ್ದೇಶದಿಂದ ತೆರಿಗೆ ದರಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿರುವ ಅವರು, ಭಾರತದಲ್ಲಿನ ತೆರಿಗೆ ಸ್ವರೂಪವು ಅನುತ್ಪಾದಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಿಎಸ್‌ಟಿ ಆದಾಯವನ್ನು ಸಂವಿಧಾನಕ್ಕೆ ತಂದಿರುವ 73 ಹಾಗೂ 74ನೇ ತಿದ್ದುಪಡಿಯ ಪ್ರಕಾರ, ಸರಕಾರದೊಂದಗಿನ ಮೂರನೆಯ ಪಾಲುದಾರರೊಂದಿಗೆ ಹಂಚಿಕೊಳ್ಳಬೇಕು ಎಂದೂ ಹಿರಿಯ ಅರ್ಥಶಾಸ್ತ್ರಜ್ಞರಾದ ವಿಜಯ್ ಕೇಳ್ಕರ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News