ಎನ್‌ಜಿಒ ನಿಧಿ ಪ್ರಕರಣ: ತೀಸ್ತಾ ಸಟಲ್ವಾಡ್ ನಿರೀಕ್ಷಣಾ ಜಾಮೀನು ಎತ್ತಿ ಹಿಡಿದ ಸುಪ್ರೀಂ

Update: 2023-11-01 15:02 GMT

ತೀಸ್ತಾ ಸೆಟಲ್ವಾಡ್‌ (PTI)

ಹೊಸದಿಲ್ಲಿ: ತಮ್ಮ ಸರಕಾರೇತರ ಸಂಸ್ಥೆ ಸಬ್ರಾಂಗ್ ಟ್ರಸ್ಟ್‌ಗೆ ಸಂಬಂಧಿಸಿ 1.4 ಕೋಟಿ ರೂ. ನಿಧಿ ದುರುಪಯೋಗ ಆರೋಪದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸಟಲ್ವಾಡ್ ಹಾಗೂ ಅವರ ಪತಿ ಜಾವೇದ್ ಆನಂದ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಗುಜರಾತ್ ಸರಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದೆ. ಆ ಮೂಲಕ ಅವರ ನಿರೀಕ್ಷಣಾ ಜಾಮಿನನ್ನು ಎತ್ತಿ ಹಿಡಿದೆ.

ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಮೂವರು ಸದಸ್ಯರ ಪೀಠ, ಈ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರೊಂದಿಗೆ ಸಹಕರಿಸುವಂತೆ ಸಟಲ್ವಾಡ್ ಹಾಗೂ ಅವರ ಪತಿಗೆ ಸೂಚಿಸಿದೆ.

ಇಬ್ಬರೂ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಹೆಚ್ಚುವರಿ ಸಾಲಿಸಿಟರ್ ಜರನಲ್ ಎಸ್.ವಿ. ರಾಜು ಅವರ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಸೂಚನೆ ನೀಡಿತು.

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಪಿ.ಕೆ. ಮಿಶ್ರಾ ಅವರನ್ನು ಕೂಡ ಒಳಗೊಂಡ ಪೀಠ, ‘‘ಚಾರ್ಜ್ ಶೀಟ್ ಇನ್ನೂ ಸಲ್ಲಿಕೆಯಾಗಿಲ್ಲ ಎಂದು ಹೇಳಿತು.  

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News