ತನ್ನ ಅತ್ಯಂತ ಸಂಕ್ಷಿಪ್ತ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್

Update: 2024-02-01 17:17 GMT

ನಿರ್ಮಲಾ ಸೀತಾರಾಮನ್ | Photo: PTI

ಹೊಸದಿಲ್ಲಿ : ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಸತ್ತಿನಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ನ್ನು ಮಂಡಿಸಿದ ಸಂದರ್ಭದಲ್ಲಿ ಮಾಡಿದ್ದ 59 ನಿಮಿಷ 15 ಸೆಕೆಂಡ್ ಗಳ ಕಾಲ ಭಾಷಣವನ್ನು ಮಾಡಿದ್ದು,ಇದು ಅವರ ಈವರೆಗಿನ ಅತ್ಯಂತ ಸಂಕ್ಷಿಪ್ತ ಬಜೆಟ್ ಭಾಷಣವಾಗಿತ್ತು.

2019-20ರಲ್ಲಿ ತನ್ನ ಮೊದಲ ಬಜೆಟ್ ಮಂಡಿಸಿದ್ದ ಸೀತಾರಾಮನ್ 2 ಗಂಟೆ 17 ನಿಮಿಷಗಳ ಕಾಲ ಭಾಷಣವನ್ನು ಮಾಡಿದ್ದರು. 2020-21ರಲ್ಲಿ ಅವರ ಬಜೆಟ್ ಭಾಷಣದ ಅವಧಿ 2 ಗಂಟೆ 42 ನಿಮಿಷ ಆಗಿತ್ತು. ಅಸ್ವಸ್ಥತೆಯ ಕಾರಣದಿಂದ ಅವರು ತನ್ನ ಭಾಷಣವನ್ನು ಮೊಟಕುಗೊಳಿಸಿದ್ದು,ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಉಳಿದ ಎರಡು ಪುಟಗಳನ್ನು ಓದಿದ್ದರು.

2022ರ ಬಜೆಟ್ ಮಂಡನೆ ಸಂದರ್ಭ ಸೀತಾರಾಮನ್ ಒಂದೂವರೆ ಗಂಟೆ ಕಾಲ ಭಾಷಣ ಮಾಡಿದ್ದರು

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News