ಪಾಕಿಸ್ತಾನದ ದುಷ್ಕರ್ಮ ತಮ್ಮದೇ ಸಮಾಜವನ್ನು ನುಂಗುತ್ತಿದೆ: ಜೈ ಶಂಕರ್

Update: 2024-09-29 04:21 GMT

ಎಸ್. ಜೈಶಂಕರ್ | PC :PTI

ಹೊಸದಿಲ್ಲಿ: ವಿಶ್ವಸಂಸ್ಥೆಯ ಸಮಾನ್ಯ ಅಧಿವೇಶನದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, "ಇತರರ ಭೂಮಿಯನ್ನು ಕಬಳಿಸಲು ಅಪೇಕ್ಷಿಸುವ ನಿಷ್ಕ್ರಿಯ ದೇಶದ ಪ್ರಯತ್ನವನ್ನು ಜಗಜ್ಜಾಹೀರು ಮಾಡಬೇಕು ಮತ್ತು ತಡೆಯಬೇಕು" ಎಂದು ತಿರುಗೇಟು ನೀಡಿದರು.

ಹಿಂದೂ ಪರಮಾಧಿಕಾರದ ಅಜೆಂಡಾ ಬಗ್ಗೆ ಮಾತನಾಡಿದ್ದ ಷರೀಫ್, ಕಾಶ್ಮೀರದ ಜನತೆ ಸ್ವಾತಂತ್ರ್ಯಕ್ಕಾಗಿ ಫೆಲಸ್ತೀನಿಯರಂತೆ ಹೋರಾಡಿದ್ದಾರೆ ಎಂಬ ಟೀಕೆಯನ್ನು ಅಲ್ಲಗಳೆದ ಜೈಶಂಕರ್, ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ನೀತಿ ಎಂದಿಗೂ ಯಶಸ್ವಿಯಾಗುವುದಿಲ್ಲ ಮತ್ತು ಇದು ನಿರ್ಭೀತಿ ಹೊರತಾಗಿ ಬೇರೇನೂ ಅಲ್ಲ ಎಂದು ಹೇಳಿದರು.

"ನಮ್ಮ ನಡುವೆ ಇತ್ಯರ್ಥವಾಗಬೇಕಿರುವ ವಿಷಯವೆಂದರೆ, ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾರತೀಯ ಭೂಭಾಗವನ್ನು ತೆರವುಗೊಳಿಸುವುದು ಮತ್ತು ಸುಧೀರ್ಘ ಅವಧಿಯಿಂದ ಭಯೋತ್ಪಾದನೆ ಜತೆಗೆ ಆ ದೇಶ ಹೊಂದಿರುವ ಬಾಂಧವ್ಯವನ್ನು ತ್ಯಜಿಸುವುದು" ಎಂದು ಸ್ಪಷ್ಟಪಡಿಸಿದರು. ಭಯೋತ್ಪಾದನೆಯ ಯಾವುದೇ ರೂಪಾಂತರದ ವಿರುದ್ಧ ಇಡೀ ಜಗತ್ತು ಹೋರಾಡಬೇಕು ಎಂದು ಸಲಹೆ ಮಾಡಿದರು.

"ಇಂದು ಪಾಕಿಸ್ತಾನದ ದುಷ್ಕರ್ಮಗಳು ತನ್ನದೇ ಸಮಾಜವನ್ನು ನುಂಗುತ್ತಿವೆ. ಇದಕ್ಕಾಗಿ ಜಗತ್ತನ್ನು ದೂಷಿಸಲಾಗದು. ಅದು ಅವರ ಕರ್ಮದ ಫಲ" ಎಂದು ಛೇಡಿಸಿದರು. ದುರಾದೃಷ್ಟವಶಾತ್ ಅವರ ದುಷ್ಕರ್ಮಗಳು ಇತರರನ್ನು, ವಿಶೇಷವಾಗಿ ನೆರೆ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ವ್ಯವಸ್ಥೆ ಮತಾಂಧತೆಯನ್ನು ಜನರಲ್ಲಿ ಬೆಳೆಸಿದರೆ, ಅದರ ಜಿಡಿಪಿಯನ್ನು ತೀವ್ರಗಾಮಿತ್ವ ಮತ್ತು ಭಯೋತ್ಪಾದನೆಯ ರಫ್ತು ಮಾನದಂಡದಲ್ಲಿ ಅಳೆಯಬೇಕಾಗುತ್ತದೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News