ಪ್ರ್ರಜ್ಞಾನ್ ರೋವರ್ ನ ಎರಡೂ ಪೇಲೋಡ್ ಗಳಿಗೆ ಚಾಲನೆ

Update: 2023-08-26 16:04 GMT

ಪ್ರಜ್ಞಾನ್ ರೋವರ್ | Photo: twitter \ @isro

ಬೆಂಗಳೂರು: ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ನಡಿಗೆಯನ್ನು ಆರಂಭಿಸಿದ ಮರುದಿನವೇ ಸುಮಾರು ಎಂಟು ಮೀಟರ್ ಗಳ ಸಂಚಾರವನ್ನು ನಡೆಸಿದೆ. ಹಾಗೂ ಅದರ ಎರಡೂ ಪೇಲೋಡ್ ಗಳು ಚಾಲನೆಗೊಂಡಿವೆ. ಗುರುವಾರ ಮುಂಜಾನೆ ವಿಕ್ರಮ್ ಲ್ಯಾಂಡರ್ ನೌಕೆಯಿಂದ ಪ್ರಜ್ಞಾನ್ ರೋವರ್ ಚಂದ್ರನ ನೆಲಕ್ಕೆ ಇಳಿದಿದ್ದು, ಅನ್ವೇಷಣೆಯನ್ನು ಆರಂಭಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಸ್ರೋ , ರೋವರ್ನ ಎಲ್ಲಾ ಯೋಜಿತ ಚಲನವಲನಗಳನ್ನು ದೃಢೀಕರಿಸಲಾಗಿದೆ. ರೋವರ್ ಯಶಸ್ವಿಯಾಗಿ 8 ಮೀಟರ್ಗಳ ಅಂತರವನ್ನು ಕ್ರಮಿಸಿದೆ. ರೋವರ್ ನ ಪೇಲೋಡ್ ಗಳಾದ ಲಿಬ್ಸ್ (ಲೇಸರ್ ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್) ಹಾಗೂ ಎಪಿಎಕ್ಸ್ (ಅಲ್ಫಾ ಪಾರ್ಟಿಕಕಲ್ ಎಕ್ಸ್ರೇ ಸ್ಪೆಕ್ಟೋಮೀಟರ್ ) ಪೇಲೋಡ್ ಗಳನ್ನು ಚಾಲನೆಗೊಳಿಸಲಾಗಿದೆ. ಪ್ರೊಪಲ್ಶನ್ ಮೊಡ್ಯೂಲ್, ಲ್ಯಾಂಡರ್ ಹಾಗೂ ರೋವರ್ ನಲ್ಲಿರುವ ಎಲ್ಲಾ ಪೇಲೋಡ್ ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

‘‘ಪ್ರಗ್ಯಾನ್ ರೋವರ್ ನೌಕೆಯು ಮೆಟ್ಟಲೇಣಿ(ರ್ಯಾಂಪ್) ಮೂಲಕ ಇಳಿಯುತ್ತಿರುವ ಹಾಗೂ ರೋವರ್ ನಲ್ಲಿರುವ ಸೌರಫಲಕದ ನಿಯೋಜನೆಯ ಕುರಿತ ವೀಡಿಯೊವನ್ನು ಇಸ್ರೋ ತನ್ನ ವೆಬ್ಸೈಟ್ ನಲ್ಲಿ ಪ್ರಸಾರಮಾಡಿದೆ. ಸೌರಫಲಕವು ರೋವರ್ ಗೆ ವಿದ್ಯುತ್ತನ್ನು ಉತ್ಪಾದಿಸಿಕೊಡುತ್ತದೆ ’’ ಎಂದು ಇಸ್ರೋ ತಿಳಿಸಿದೆ. 

ಪ್ರಜ್ಞಾನ್ ರೋವರ್ ನಲ್ಲಿಇರುವ ಎಪಿಎಕ್ಸ್ ಎಸ್ ಚಂದ್ರನ ನೆಲದ ರಾಸಾಯನಿಕ ಹಾಗೂ ಖನಿಜ ಸಂಯೋಜನೆಗಳ ಅಧ್ಯಯನ ನಡೆಸಲಿದೆ. ಎಲ್ಐಬಿಎಸ್ ಪೇಲೋಡ್ ಲ್ಯಾಂಡರ್ ಇಳಿದಿರುವ ಸ್ಥಳದ ಆಸುಪಾಸಿನಲ್ಲಿರುವ ಚಂದ್ರನ ಮಣ್ಣು ಹಾಗೂ ಬಂಡೆಗಲ್ಲುಗಳ ಭೌತಿಕ ಸಂಯೋಜನೆಗಳ ಸಂಶೋಧನೆ ನಡೆಸಲಿದೆ.

ವಿಕ್ರಮ್ ಲ್ಯಾಂಡರ್ ನ ಪೇಲೋಡ್ ಗಳನ್ನು ಗುರುವಾರ ಬೆಳಗ್ಗೆ ಚಾಲನೆಗೊಳಿಸಲಾಗಿದೆ. ಅರರಲ್ಲಿನ ರಂಭಾ-ಎಲ್ಪಿ (ಲ್ಯಾಂಗ್ಮುಯಿರ್ ಪ್ರೋಬ್) ಪೇಲೋಡ್, ಚಂದ್ರನ ಮೇಲ್ಮೈಯಲ್ಲಿನ ಪ್ಲಾಸ್ಮಾ (ಐಯೋನ್ ಗಳು ಹಾಗೂ ಇಲೆಕ್ಟ್ರಾನ್ ಗಳ) ಸಾಂಧ್ರತೆ ಹಾಗೂ ಕಾಲಾನುಕ್ರಮದಲ್ಲಿ ಅದರ ಪರಿವರ್ತನೆಗಳ ಮಾಪನವನ್ನು ಅದು ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News