ಚೀತಾವನ್ನು ಮರುಪರಿಚಯಿಸುವ ಸಿದ್ಧತೆ | ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಕೀನ್ಯಾ ನಿಯೋಗ

Update: 2024-05-23 16:57 GMT

ಸಾಂದರ್ಭಿಕ ಚಿತ್ರ | PC : PTI 

 

ಮಂದ್ಸೌರ್: ಚೀತಾವನ್ನು ಮರುಪರಿಚಯಿಸುವ ಸಿದ್ಧತೆಯ ಕುರಿತು ಪರಾಮರ್ಶೆ ನಡೆಸಲು ಕೀನ್ಯಾ ನಿಯೋಗವೊಂದು ಮಧ್ಯಪ್ರದೇಶದ ಗಾಂಧಿಸಾಗರ್ ವನ್ಯಧಾಮಕ್ಕೆ ಭೇಟಿ ನೀಡಿತ್ತು ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರು ಮಂದಿ ಸದಸ್ಯರನ್ನು ಒಳಗೊಂಡಿದ್ದ ನಿಯೋಗವು ಮಂದ್ಸೌರ್ ಹಾಗೂ ನೀಮುಚ್ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ವನ್ಯಧಾಮಕ್ಕೆ ಮೇ 21 ಹಾಗೂ ಮೇ 22ರಂದು ಭೇಟಿ ನೀಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

1952ರಲ್ಲಿ ಭಾರತದಲ್ಲಿ ಅಳಿದು ಹೋಗಿವೆ ಎಂದು ಘೋಷಿಸಲಾಗಿದ್ದ ಚೀತಾಗಳನ್ನು ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮರುಪರಿಚಯಿಸಲಾಗಿತ್ತು. ಇದೀಗ ಸರಕಾರವು ಚೀತಾಗಳನ್ನು ಗಾಂಧಿಸಾಗರ ವನ್ಯಧಾಮಕ್ಕೂ ಕರೆ ತರಲು ಯೋಜಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News