ಮೊದಲ ಸಿಎಎ ಫಲಾನುಭವಿಗೆ ಪೌರತ್ವ: ಅಸ್ಸಾಂನಲ್ಲಿ ಪ್ರತಿಭಟನೆ

Update: 2024-08-16 10:58 GMT

   ಸಾಂದರ್ಭಿಕ ಚಿತ್ರ

ಗುವಾಹಟಿ: ಬಾಂಗ್ಲಾದೇಶ ಸಂಜಾತ ದೂಲನ್ ದಾಸ್ ಅವರಿಗೆ ಪೌರತ್ವ (ತಿದ್ದುಪಡಿ) ಕಾಯ್ದೆ-2019ರ ಅಡಿಯಲ್ಲಿ ಪೌರತ್ವ ನೀಡುವ ಮುನ್ನ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಿಂದ ಬಂದಿರುವ ಕನಿಷ್ಠ 400 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ.

ಆದರೆ ಇತರಿಗಿಂತ ಭಿನ್ನವಾಗಿ, ಈಶಾನ್ಯ ಭಾರತದಲ್ಲಿ ಸಿಎಎ ಕಾಯ್ದೆಯ ಪ್ರಥಮ ಫಲಾನುಭವಿ ಎಂದು ದೂಲನ್ ದಾಸ್ ಅವರನ್ನು ಬಿಂಬಿಸಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಆಗಸ್ಟ್ 13ರಂದು ಸಂಜೆ 3.41ಕ್ಕೆ ಕೇಂದ್ರ ಸರ್ಕಾರ ದಾಸ್‍ಗೆ ಭಾರತೀಯ ಪೌರತ್ವ ನೀಡಿತ್ತು.

ಅಸ್ಸಾಂ ಅಕಾರ್ಡ್ ಆಫ್ 1985ನ ಆಶಯಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ಬಿಜೆಪಿ ಹಾಗೂ ಅಸ್ಸಾಂನ ಇತರ ಮಿತ್ರಪಕ್ಷಗಳ ವಿರುದ್ಧ ಹಲವು ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದಿವೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ 2014 ಡಿಸೆಂಬರ್ 31ರ ಒಳಗಾಗಿ ದೇಶವನ್ನು ಪ್ರವೇಶಿಸಿದ ಮುಸ್ಲಿಮೇತರರಿಗೆ ತ್ವರಿತಗತಿಯಲ್ಲಿ ಭಾರತೀಯ ಪೌರತ್ವ ನೀಡಲಾಗುತ್ತದೆ. ಆದರೆ ಈ ಕಾನೂನು ಅಸ್ಸಾಂನ 1985ರ ಒಪ್ಪಂದಕ್ಕೆ ವಿರುದ್ಧವಾಗಿದ್ದು, ಇದರ ಅನ್ವಯ 1971ರ ಮಾರ್ಚ್ 25ರ ವೇಳೆಗೆ ಭಾರತದಲ್ಲಿ ಜೀವಿಸುತ್ತಿದ್ದ ವಿದೇಶಿ ನಾಗರಿಕರಿಗೆ ಪೌರತ್ವ ನೀಡಲು ಅವಕಾಶ ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News