ರಾಜ್ಯಪಾಲರ ಅಂಕಿತ ವಿಳಂಬ ಪ್ರಶ್ನಿಸಿ ಕೇರಳ, ತ.ನಾ. ಅರ್ಜಿ: ಸುಪ್ರೀಂ ಕೋರ್ಟ್ ನಿಂದ ವಿಚಾರಣೆ

Update: 2023-11-19 16:27 GMT

 ಸುಪ್ರೀಂ ಕೋರ್ಟ್ | Photo: PTI

ಹೊಸದಿಲ್ಲಿ: ಮಸೂದೆಗಳಿಗೆ ಅಂಕಿತ ಹಾಕುವಲ್ಲಿ ರಾಜ್ಯಪಾಲರ ವಿಳಂಬದ ಕುರಿತ ತಮಿಳುನಾಡು ಹಾಗೂ ಕೇರಳ ಸರಕಾರದ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿಪಾಲಾ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಪಟ್ಟಿ ಮಾಡಿದೆ. 

ವಿಧಾನ ಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವಲ್ಲಿ ಸಂಬಂಧಿತ ರಾಜ್ಯಪಾಲರರು ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿ ತಮಿಳುನಾಡು ಹಾಗೂ ಕೇರಳ ಸರಕಾರಗಳು ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಯನ್ನು ನವೆಂಬರ್ 20ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಪಟ್ಟಿ ಮಾಡಿದೆ. 

ರಾಜ್ಯಪಾಲ ಆರ್.ಎನ್. ರವಿ ಅವರು ಹಿಂದಿರುಗಿಸಿದ 10 ಮಸೂದೆಗಳನ್ನು ನವೆಂಬರ್ 18ರಂದು ವಿಶೇಷ ಬೈಠಕ್ ನಲ್ಲಿ ತಮಿಳುನಾಡು ವಿಧಾನ ಸಭೆ   ಮರು ಅಂಗೀಕರಿಸಿತ್ತು.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News