ಪ್ರಧಾನಿ ಮೋದಿ ಅಂಬಾನಿ - ಅದಾನಿಗೆ ಕೊಟ್ಟಷ್ಟೇ ಹಣವನ್ನು ನಾವು ಭಾರತದ ಬಡವರಿಗೆ ನೀಡುತ್ತೇವೆ : ರಾಹುಲ್ ಗಾಂಧಿ

Update: 2024-05-08 15:30 GMT

PC : X@RahulGandhi

ಹೊಸದಿಲ್ಲಿ : ಪ್ರಧಾನಿ ಮೋದಿಯವರೇ ಹೆದರಿಕೆಯಾಯ್ತಾ?. ನೀವು ಅಂಬಾನಿ - ಅದಾನಿಗೆ ಕೊಟ್ಟಷ್ಟೇ ಹಣವನ್ನು ನಾವು ಭಾರತದ ಬಡವರಿಗೆ ನೀಡುತ್ತೇವೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಬುಧವಾರ ಬಿಜೆಪಿಯ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ, ರಾಹುಲ್ ಗಾಂಧಿ ಅವರು ಚುನಾವಣೆ ಘೋಷಣೆಯಾದ ಬಳಿಕ ಅದಾನಿ ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಗೆ ವೀಡಿಯೊ ಮೂಲಕ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ವೀಡಿಯೊದ ಪೂರ್ಣ ಪಾಠ ಇಲ್ಲಿದೆ. “ಮೋದಿಯವರೇ ನಮಸ್ಕಾರ, ಸ್ವಲ್ಪ ಹೆದರಿಕೊಂಡಿರಾ ಹೇಗೆ?, ಸಾಮಾನ್ಯವಾಗಿ ನೀವು ಬಾಗಿಲು ಮುಚ್ಚಿದ ಕೊಠಡಿಗಳಲ್ಲಿ ಅಂಬಾನಿ - ಅದಾನಿ ಬಗ್ಗೆ ಮಾತನಾಡುತ್ತಿದ್ದಿರಿ. ಈಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಅದಾನಿ ಅದಾನಿ - ಅಂಬಾನಿ ಎಂದು ಹೆಸರು ಹೇಳಿದ್ದೀರಿ. ನಿಮಗೆ ಅವರು ಟೆಂಪೋಗಳಲ್ಲಿ ಹಣ ತುಂಬಿ ಕೊಡುತ್ತಾರೆ ಎಂದು ತಿಳಿದಿದೆ. ಇದೇನು ನಿಮ್ಮ ವೈಯುಕ್ತಿಕ ಅನುಭವವೇ?. ಒಂದು ಕೆಲಸ ಮಾಡಿ, ಸಿಬಿಐ – ಈಡಿಯನ್ನು ಅಂಬಾನಿ - ಅದಾನಿ ಬಳಿಗೆ ಕಳುಹಿಸಿ. ಪರಿಶೀಲನೆ ಮಾಡಿಸಿ, ವಿಚಾರಣೆ ಮಾಡಿಸಿ. ಆದಷ್ಟು ಬೇಗ ಮಾಡಿಸಿ. ಹೆದರಿಕೊಳ್ಳಬೇಡಿ ಮೋದಿಯವರೇ” ಎಂದು ರಾಹುಲ್ ಹೇಳಿದ್ದಾರೆ.

“ದೇಶಕ್ಕೆ ಇನ್ನೊಮ್ಮೆ ಹೇಳುತ್ತೇನೆ. ಎಷ್ಟು ಹಣ ನರೇಂದ್ರ ಮೋದಿಯವರು ಇವರಿಗೆಲ್ಲಾ ಕೊಟ್ಟಿದ್ದಾರೋ, ಅಷ್ಟೇ ಹಣವನ್ನು ನಾವು ಹಿಂದೂಸ್ಥಾನದ ಬಡವರಿಗೆ ನೀಡುತ್ತೇವೆ. ಮಹಾಲಕ್ಮೀ ಯೋಜನೆ, ಮೊದಲ ಕೆಲಸದ ಗ್ಯಾರಂಟಿ ಯೋಜನೆ ಇತ್ಯಾದಿ ಯೋಜನೆಗಳ ಮೂಲಕ ಕೋಟ್ಯಂತರ ಲಕ್ಷಾಧಿಪತಿಗಳ್ನು ನಾವು ರೂಪಿಸಲಿದ್ದೇವೆ. ಮೋದಿ 22 ಮಿಲಿಯನೇರ್ ಗಳನ್ನು ಹುಟ್ಟುಹಾಕಿದ್ದಾರೆ. ನಾವು ಕೋಟ್ಯಂತರ ಲಕ್ಷಾಧಿಪತಿಗಳನ್ನು ಹುಟ್ಟು ಹಾಕುತ್ತೇವೆ” ಎಂದು ರಾಹುಲ್ ಗಾಂಧಿಯವರು ವೀಡಿಯೊ ಮೂಲಕ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News