ರಾಜಸ್ಥಾನ: ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಗಣತಿ ಭರವಸೆ ನೀಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Update: 2023-11-21 13:22 GMT

ಅಶೋಕ್ ಗೆಹ್ಲೋಟ್ | Photo: PTI 

ಜೈಪುರ: ಮಂಗಳವಾರ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಒಂದು ವೇಳೆ ಅಧಿಕಾರಕ್ಕೆ ಮರಳಿದರೆ, ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಇದರೊಂದಿಗೆ, ಪಂಚಾಯತಿ ಹಂತ ಹಾಗೂ ಇನ್ನಿತರೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ನೇಮಕಾತಿಗೆ ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿಯೂ ಕಾಂಗ್ರೆಸ್ ಭರವಸೆ ನೀಡಿದೆ.

“ನಾವು ಜನರ ಸಲಹೆಯನ್ನು ಆಧರಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ನಾವು 2018ರಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ. 96ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಏಳು ಪ್ರಮುಖ ಭರವಸೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದಾರೆ:

► ಕುಟುಂಬದ ಮಹಿಳಾ ಯಜಮಾನಿಗೆ ವಾರ್ಷಿಕ ರೂ. 10,000 ಗೌರವ ಧನ

► 1.04 ಕೋಟಿ ಕುಟುಂಬಗಳಿಗೆ ರೂ. 500ರ ರಿಯಾಯತಿ ದರದಲ್ಲಿ ಸಿಲಿಂಡರ್ ಪೂರೈಕೆ

► ಗೋಸಾಕಾಣಿಕೆದಾರರಿಂದ ಪ್ರತಿ ಕೆಜಿಗೆ ರೂ. 2ನಂತೆ ಸಗಣಿ ಖರೀದಿ

► ರೂ. 25 ಲಕ್ಷದಿಂದ ರೂ. 50 ಲಕ್ಷ ವಿಮಾ ಮೊತ್ತ ಹೊಂದಿರುವ ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಜಾರಿ

► ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನು ಮರು ಜಾರಿಗೊಳಿಸಲು ಕಾನೂನು ಜಾರಿ

► ಸರ್ಕಾರಿ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್/ಟ್ಯಾಬ್ಲೆಟ್ ಕೊಡುಗೆ

► ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾಗುವ ಕುಟುಂಬಗಳಿಗೆ ರೂ. 15 ಲಕ್ಷ ರವರೆಗೆ ವಿಮಾ ಪರಿಹಾರ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News