ಕಾಂಗ್ರೆಸ್‌, ಎನ್‌ಸಿಪಿಯ ಸಿಎಂ ಅಭ್ಯರ್ಥಿ ಬೆಂಬಲಿಸಲು ಸಿದ್ಧ: ಉದ್ಧವ್‌ ಠಾಕ್ರೆ

Update: 2024-08-16 15:18 IST
ಕಾಂಗ್ರೆಸ್‌, ಎನ್‌ಸಿಪಿಯ ಸಿಎಂ ಅಭ್ಯರ್ಥಿ ಬೆಂಬಲಿಸಲು ಸಿದ್ಧ: ಉದ್ಧವ್‌ ಠಾಕ್ರೆ

ಉದ್ಧವ್‌ ಠಾಕ್ರೆ | PC : PTI  

  • whatsapp icon

ಹೊಸದಿಲ್ಲಿ: ಮಹಾ ವಿಕಾಸ್‌ ಅಘಾಡಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ (ಎಸ್‌ಪಿ) ಮುಂದಿಡುವ ಯಾವುದೇ ನಾಯಕನಿಗೆ ಬೆಂಬಲ ವ್ಯಕ್ತಪಡಿಸಲು ತಾನು ಸಿದ್ಧ ಎಂದು ಶಿವಸೇನೆ (ಉದ್ಧವ್‌ ಬಣ) ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಎಂವಿಎ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ರಾಜ್ಯದ ಆತ್ಮಗೌರವ ರಕ್ಷಣೆಗಾಗಿ ಹೋರಾಡುವ ಚುನಾವಣೆಯಾಗಿದೆ ಎಂದು ಹೇಳಿದರು.

“ಮಹಾ ವಿಕಾಸ್‌ ಅಘಾಡಿಯ ಸಿಎಂ ಅಭ್ಯರ್ಥಿಯ ಬಗ್ಗೆ ನಿರ್ಧರಿಸೋಣ. ನಾನು ಅದನ್ನು ಬೆಂಬಲಿಸುತ್ತೇನೆ. ಕಾಂಗ್ರೆಸ್-ಎನ್‌ಸಿಪಿ ತಮ್ಮ ಸಿಎಂ ಅಭ್ಯರ್ಥಿಯನ್ನು ಸೂಚಿಸಲು, ನಾನು ಬೆಂಬಲಿಸುತ್ತೇನೆ, ಏಕೆಂದರೆ ನಾವು ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಿದೆ. “ಜನರಿಗೆ ನಾವು ಬೇಕು, ನೀವಲ್ಲ,” ಎಂದು ಈ “50 ಖೋಕಾಗಳು ಮತ್ತು ಗದ್ದಾರ್‌ಗಳಿಗೆ ನಾನು ಉತ್ತರ ನೀಡಬೇಕಿದೆ,” ಎಂದು ಉದ್ಧವ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News