ಆರ್‌ಜಿ ಕರ್ ಆಸ್ಪತ್ರೆ ಸಮೀಪ ಸಂದೇಹಾಸ್ಪದ ಬ್ಯಾಗ್ ಪತ್ತೆ

Update: 2024-09-12 15:26 GMT

PC : PTI 

ಕೋಲ್ಕತಾ : ಇಲ್ಲಿನ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಮೀಪ ಗುರುವಾರ ಸಂದೇಹಾಸ್ಪದವಾದ ಬ್ಯಾಗೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿತು.

ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು.

ಆಗಸ್ಟ್ 9ರಿಂದ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು ಟಿ.ವಿ. ದೃಶ್ಯಾವಳಿಯಲ್ಲಿ ಕಂಡು ಬಂದಿದೆ.

ಕಿರಿಯ ವೈದ್ಯರು ಸಾಲ್ಟ್‌ಲೇಕ್‌ನಲ್ಲಿರುವ ಸ್ವಾಸ್ಥ್ಯ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿರುವುದರಿಂದ ಚೀಲ ಪತ್ತೆಯಾದ ಸ್ಥಳ ಪ್ರಸಕ್ತ ಖಾಲಿಯಾಗಿದೆ.

ಇದುವರೆಗೆ ಯಾವುದೇ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News