ರಿಷಭ್ ಪಂತ್ ಗೆ ರೂ. 1 ಕೋಟಿ ಹಾಗೂ ತಾಜ್ ಹೋಟೆಲ್ ಗೆ ರೂ. 5.5 ಲಕ್ಷ ವಂಚಿಸಿದ 25 ವರ್ಷದ ಕ್ರಿಕೆಟರ್!!
ಹೊಸದಿಲ್ಲಿ: ಐಪಿಎಲ್ ತಂಡದ ಕ್ರಿಕೆಟಿಗ, ರಣಜಿ ಕ್ರಿಕೆಟಿಗ, ಕರ್ನಾಟಕದ ಎಡಿಜಿಪಿ – ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸಿ, ಮೃಣಾಂಕ್ ಸಿಂಗ್ ಎಂಬ 25 ವರ್ಷದ ಯುವಕನೊಬ್ಬ ಜನರಿಗೆ ನಗದು ಹಾಗೂ ವಸ್ತುಗಳನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಆತ ಖ್ಯಾತ ಕ್ರಿಕೆಟಿಗ ರಿಷಭ್ ಸಿಂಗ್ ಗೂ ಕಳೆದ ಮೇ ತಿಂಗಳಲ್ಲಿ ವಂಚಿಸಿದ್ದು, ಆ ಮೊತ್ತ ರೂ. ಒಂದು ಕೋಟಿಯಾಗಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ರೀತಿ ತಾಜ್ ಹೋಟೆಲ್ ಗೂ ರೂ. 5.5 ಲಕ್ಷ ಬಿಲ್ ಪಾವತಿಸದೆ ವಂಚಿಸಿದ ಕಾರಣಕ್ಕೆ ಮೃಣಾಲ್ ಸಿಂಗ್ ಸದ್ಯ ದಿಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಆತ ಜುಲೈ 22ರಿಂದ 22ರವರೆಗೆ ತಾಜ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ ಜನರನ್ನು ವಂಚಿಸಿದ ಕಾರಣಕ್ಕೆ ಮುಂಬೈ ಹಾಗೂ ಪಂಚಕುಲ ಪೊಲೀಸರು ಮೃಣಾಲ್ ಸಿಂಗ್ ನನ್ನು ಬಂಧಿಸಿದ್ದರು.
ದಿಲ್ಲಿ ಪೊಲೀಸರ ಪ್ರಕಾರ, ತಾಜ್ ಹೋಟೆಲ್ ನ ಭದ್ರತಾ ನಿರ್ದೇಶಕರಿಂದ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಆ ದೂರಿನಲ್ಲಿ “ತನ್ನನ್ನು ತಾನು ಕ್ರಿಕೆಟಿಗ ಎಂದು ಸೋಗು ಹಾಕಿದ್ದ ಮೃಣಾಲ್ ಸಿಂಗ್, ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿ, ಹೋಟೆಲ್ ನ ಬಿಲ್ ಮೊತ್ತವಾದ 5.53 ಲಕ್ಷ ರೂ.ಪಾವತಿಸಿಲ್ಲ” ಎಂದು ಹೇಳಲಾಗಿತ್ತು. ಆತ ನನ್ನ ಬಾಕಿಯನ್ನು ಪ್ರಖ್ಯಾತ ಕ್ರೀಡಾ ಉತ್ಪನ್ನ ಸಂಸ್ಥೆಯು ಪಾವತಿಸಲಿದೆ ಎಂದು ಹೋಟೆಲ್ ವ್ಯವಸ್ಥಾಪಕ ಮಂಡಳಿಗೆ ತಿಳಿಸಿ, ಹೋಟೆಲ್ ತೊರೆದಿದ್ದ. ನಂತರ ಆನ್ ಲೈನ್ ವಹಿವಾಟು ಸಂಖ್ಯೆಯೊಂದನ್ನು ಹೋಟೆಲ್ ಸಿಬ್ಬಂದಿಗಳೊಂದಿಗೆ ಹಂಚಿಕೊಂಡು, ತಾನು ರೂ. 2 ಲಕ್ಷ ಪಾವತಿಸಿದ್ದೇನೆ ಎಂದು ಪ್ರತಿಪಾದಿಸಿದ್ದ. ಆದರೆ, ಆ ವಹಿವಾಟು ನಕಲಿಯಾಗಿತ್ತು” ಎಂದು ಹೇಳಿದ್ದಾರೆ.
ನಾರ್ತ್ ಕ್ಯಾಂಪಸ್ ಕಾಲೇಜಿನಲ್ಲಿ ಬಿ. ಕಾಂ ಪದವಿ ಪಡೆದಿರುವ ಮೃಣಾಲ್ ಸಿಂಗ್, ರಾಜಸ್ಥಾನದಲ್ಲಿ ಎಂಬಿಎ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದಾನೆ. ಆತನ ವಿರುದ್ಧ ಈ ಮುನ್ನ ಜುಹು, ಕರ್ನಲ್ ಹಾಗೂ ಮೊಹಾಲಿಯಲ್ಲಿ ಒಟ್ಟು ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.