ಪಶ್ಚಿಮಬಂಗಾಳದ ನೂತನ ಡಿಜಿಪಿಯಾಗಿ ಸಂಜಯ್ ಮುಖರ್ಜಿ ನೇಮಕ
Update: 2024-03-19 17:09 GMT
ಕೋಲ್ಕತಾ: ಪಶ್ಚಿಮಬಂಗಾಳದ ನೂತನ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ರಾಗಿ 1989ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಸಂಜಯ್ ಮುಖರ್ಜಿ ಅವರನ್ನು ಭಾರತೀಯ ಚುನಾವಣಾ ಆಯೋಗ ಮಂಗಳವಾರ ನೇಮಕ ಮಾಡಿದೆ.
ಲೋಕಸಭೆ ಚುನಾವಣೆ ಪೂರ್ಣಗೊಳ್ಳುವ ವರೆಗೆ ಸಂಜಯ್ ಮುಖರ್ಜಿ ಅವರು ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಮಧ್ಯಂತರ ಕ್ರಮವಾಗಿ ಡಿಜಿಪಿ (ಹೋಮ್ ಗಾರ್ಡ್) ವಿವೇಕ್ ಸಹಾಯ್ ಅವರ ಹೆಸರನ್ನು ಘೋಷಿಸಿದ ದಿನದ ಬಳಿಕ ನೂತನ ನೇಮಕಾತಿ ನಡೆದಿದೆ.
ಚುನಾವಣಾ ಆಯೋಗ ಕಾರ್ಯಕಾರಿ ಡಿಜಿಪಿ ರಾಜೀವ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿದ ಬಳಿಕ ರಾಜ್ಯ ಪೊಲೀಸ್ಗೆ ಹೊಸ ಡಿಜಿಪಿಯ ಹುಡುಕಾಟ ಅನಿವಾರ್ಯವಾಗಿತ್ತು.