"ಚಾರಿತ್ರ್ಯ ಹರಣದ ಪ್ರಯತ್ನ": ಹಿಂಡೆನ್ ಬರ್ಗ್ ವರದಿಯ ಆರೋಪ ನಿರಾಕರಿಸಿದ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್

Update: 2024-08-11 05:45 GMT

ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ (Photo: PTI)

ಮುಂಬೈ: ಇತ್ತೀಚಿನ ಹಿಂಡೆನ್ ಬರ್ಗ್ ವರದಿಯು ಆಧಾರರಹಿತ ಆರೋಪ ಎಂದು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹೇಳಿದ್ದಾರೆ. ಕಿರು ಅವಧಿಯ ಮಾರಾಟ ಕಂಪನಿಯ ವಿರುದ್ಧ ಸೆಬಿ ಕ್ರಮ ಕೈಗೊಂಡಿದ್ದರಿಂದ ಚಾರಿತ್ರ್ಯ ಹರಣ ಮಾಡುವ ಪ್ರಯತ್ನ ನಡೆದಿದೆ ಎಂದು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧಾವಲ್ ಬುಚ್ ಇಬ್ಬರೂ ಆರೋಪಿಸಿದ್ದಾರೆ.

ಉದ್ಯಮ ದಿಗ್ಗಜ ಗೌತಮ ಅದಾನಿಯನ್ನು ಗುರಿಯಾಗಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಅಮೆರಿಕ ಮೂಲದ ಹಿಂಡೆನ್ ಬರ್ಗ್ ರಿಸರ್ಚ್, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು ಎಂದು ಶನಿವಾರ ಆರೋಪಿಸಿದೆ.

ಪ್ರಾಧಿಕಾರಗಳು ಬಯಸಿದರೆ ಯಾವುದೇ ಬಗೆಯ ಆರ್ಥಿಕ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ಧವಿದ್ದೇವೆ ಎಂದೂ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಬಿ ಮುಖ್ಯಸ್ಥೆಯ ಪ್ರಕಟಣೆಯ ಸಾರಾಂಶ ಈ ಕೆಳಗಿನಂತಿದೆ:

ನಮ್ಮ ವಿರುದ್ಧ ಆಗಸ್ಟ್ 10, 2024ರಂದು ಹಿಂಡೆನ್ ಬರ್ಗ್ ವರದಿಯಲ್ಲಿ ಮಾಡಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ, ವರದಿಯಲ್ಲಿ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ತಿಳಿಸಲು ಬಯಸುತ್ತೇವೆ. ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮ ಬದುಕು  ತೆರೆದ ಪುಸ್ತಕದಂತಿದೆ. ಅಗತ್ಯವಿರುವ ದಾಖಲೆಗಳನ್ನು ಹಲವಾರು ವರ್ಷಗಳಿಂದ ಸೆಬಿಗೆ ಒದಗಿಸುತ್ತಾ ಬರಲಾಗುತ್ತಿದೆ. ನಾವು ಖಾಸಗಿ ವ್ಯಕ್ತಿಗಳಾಗಿದ್ದಾಗಿನ ಅವಧಿಗೆ ಸಂಬಂಧಿಸಿದ ದಾಖಲೆಗಳಿಂದ ಹಿಡಿದು ಯಾವುದೇ ಮತ್ತು ಎಲ್ಲ ಆರ್ಥಿಕ ದಾಖಲೆಗಳನ್ನು ಯಾವುದೇ ಪ್ರಾಧಿಕಾರ ಬಯಸಿದರೂ, ಅದರ ಮುಂದೆ ಬಹಿರಂಗಪಡಿಸಲು ಸಿದ್ಧ. ಇದರೊಂದಿಗೆ, ಸಂಪೂರ್ಣ ಪಾರದರ್ಶಕತೆ ಹಿತಾಸಕ್ತಿಯಿಂದ ನಾವು ಮುಂದಿನ ದಿನಗಳಲ್ಲಿ ವಿಸ್ತೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ.

ಮಾಧುರಿ ಪುರಿ ಬುಚ್, ಧಾವಲ್ ಬುಚ್

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News