“ಹೇಯವಾದ ಯುದ್ಧವನ್ನು ಭಾರತ ಬೆಂಬಲಿಸುತ್ತಿರುವುದು ಲಜ್ಜೆಗೇಡು”

Update: 2023-11-10 17:04 GMT

Photo: PTI

ಕೋಲ್ಕತಾ : ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಹೀನಾಯವಾದ ದಾಳಿಯನ್ನು ಕೇಂದ್ರ ಸರಕಾರವು ಬೆಂಬಲಿಸುತ್ತಿರುವುದನ್ನು ಮಲಯಾಳಂ ಲೇಖಕಿ ಸಾರಾ ಜೋಸೆಫ್ ಅವರು ಶುಕ್ರವಾರ ಖಂಡಿಸಿದ್ದಾರೆ .

‘‘ ಇತಿಹಾಸವನ್ನು ಬದಲಿಸಲಾಗಿದೆ. ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಹೇಯವಾದ ಯುದ್ಧದಲ್ಲಿ ಭಾರತವು ಕೈಜೋಡಿಸಿದೆ ಎಂಬುದನ್ನು ಯೋಚಿಸಲು ನನಗೆ ನಾಚಿಕೆಯಾಗುತ್ತದೆ. ರಾಷ್ಟ್ರೀಯ ಚಳವಳಿಯೊಂದಿಗೆ ನಾವು ಬೆಳೆದಂತಹ ನನ್ನ ಯೌವನದ ದಿನಗಳನ್ನು ನಾನು ನೆನಪಿಸಿಕೊಳ್ಳತ್ತೇನೆ. ಆಗ ರಾಷ್ಟ್ರನಿರ್ಮಾಣವೊಂದೇ ನಮಗೆ ಸರ್ವಸ್ವವಾಗಿತ್ತು. ಆದರೆ ಈಗ ಏನಾಗುತ್ತಿದೆಯೆಂಬುದನ್ನು ನೀವೇ ನೋಡಿ. ಇದು ಬಡ ಆಟೋರಿಕ್ಷಾ ಚಾಲಕನ ಸಂಪಾದನೆಯೊಂದಿಗೆ ಆದಾನಿಯ ಸಂಪತ್ತನ್ನು ಸೇರಿಸಿ ದೇಶದ ಜಿಡಿಪಿಯನ್ನು ಲೆಕ್ಕಹಾಕಲಾಗುತ್ತದೆ” ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಸಮಸ್ಯೆಗಳಿಗೆ ನೇರವಾದ ಪರಿಹಾರಗಳನ್ನು ಮುಂದಿಡಲು ಬರಹಗಾರರಿಗೆ ಸಾಧ್ಯವಿಲ್ಲವೆಂಬುದನ್ನು ಸಾರಾ ಜೋಸೆಫ್ ಒಪ್ಪಿಕೊಂಡರು.ಭಾರತ ಸೇರಿದಂತೆ ಜಗತ್ತಿನಾದ್ಯಂತ ನಡೆಯುತ್ತಿರುವ ವಿಮೋಚನಾ ಚಳವಳಿಗಳಲ್ಲಿ ಮಹಿಳೆಯರ ಹೋರಾಟದ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಮಹಿಳೆಯರಿಗೆ ಮತದಾನದ ಹಕ್ಕು ದೊರೆತಾಗ ಆಕೆ ಮೊದಲ ಬಾರಿಗೆ ಸಮಾನತೆಯ ಅನುಭವನ್ನು ಪಡೆದಳು. ವಿಮೋಚನೆ ಮತ್ತು ಸುಧಾರಣೆಯ ನಡುವಿನ ವ್ಯತ್ಯಾಸವನ್ನು ಆಕೆ ಗಮನಿಸಿದಳು. ಸಮಾಜದಲ್ಲಿನ ಎಲ್ಲಾ ಅಸಮಾನತೆಗಳು ನಿರ್ಮೂಲವಾಗುವ ತನಕ ಮಹಿಳಾ ಬರವಣಿಗೆಯು ವಿಕಸನಗೊಳ್ಳುತ್ತಲೇ ಇರುವ ಪ್ರಕ್ರಿಯೆಯಾಗಿರುತ್ತದೆ ಎಂದು ಸಾರಾ ಜೋಸೆಫ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News