ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಹಿಂದೆ ಶರದ್ ಪವಾರ್ ಇದ್ದಾರೆ : ರಾಜ್ ಠಾಕ್ರೆ
ರಾಜ್ಯದಲ್ಲಿ ನಡೆದಿರುವುದು ಅತ್ಯಂತ ಅಸಹ್ಯಕರವಾಗಿದೆ....ಇದು ರಾಜ್ಯದ ಮತದಾರರಿಗೆ ಮಾಡಿದ ಅವಮಾನ ಹೊರತು ಬೇರೇನೂ ಅಲ್ಲ
ಪುಣೆ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳಿಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಶೀರ್ವಾದವಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಶರದ್ ಪವಾರ್ ನೇತೃತ್ವದ ಪಕ್ಷವನ್ನು ಒಡೆದು ರವಿವಾರ ಎನ್ ಸಿಪಿ ನಾಯಕ ಅಜಿತ್ ಪವಾರ್ ಹಾಗೂ ಇತರ ಎಂಟು ಶಾಸಕರು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡಿರುವ ಕುರಿತು ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನಡೆದಿರುವುದು ಅತ್ಯಂತ ಅಸಹ್ಯಕರವಾಗಿದೆ....ಇದು ರಾಜ್ಯದ ಮತದಾರರಿಗೆ ಮಾಡಿದ ಅವಮಾನ ಹೊರತು ಬೇರೇನೂ ಅಲ್ಲಎಂದು ರಾಜ್ ಠಾಕ್ರೆ ಹೇಳಿದ್ದಾರೆ.
"ಶರದ್ ಪವಾರ್ ಇಂತಹದ್ದೆಲ್ಲವನ್ನೂ ಮಹಾರಾಷ್ಟ್ರದಲ್ಲಿ ಆರಂಭಿಸಿದರು. ಅವರು ಮೊದಲ ಬಾರಿಗೆ 1978 ರಲ್ಲಿ 'ಪುಲೋದ್' (ಪುರೋಗಾಮಿ ಲೋಕಶಾಹಿ ದಳ) ಸರಕಾರದ ಮೇಲೆ ಇದನ್ನು ಪ್ರಯೋಗಿಸಿದರು. ಮಹಾರಾಷ್ಟ್ರವು ಎಂದಿಗೂ ಇಂತಹ ರಾಜಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿರಲಿಲ್ಲ. ಇವೆಲ್ಲವೂ ಪವಾರ್ ರಿಂದ ಆರಂಭವಾಯಿತು ಹಾಗೂ ಅವರಿಂದಲೇ ಕೊನೆಗೊಂಡಿದೆ. ಇತ್ತೀಚಿನ ಬೆಳವಣಿಗೆಗಳ ಹಿಂದೆ ಶರದ್ ಪವಾರ್ ಅವರ ಕೈವಾಡವಿದೆ’’ ಎಂದು ಎಂಎನ್ಎಸ್ ಮುಖ್ಯಸ್ಥ ಹೇಳಿದ್ದಾರೆ
"ಪ್ರಫುಲ್ ಪಟೇಲ್, ದಿಲೀಪ್ ವಾಲ್ಸೆ-ಪಾಟೀಲ್ ಹಾಗೂ ಛಗನ್ ಭುಜಬಲ್ ಅವರು ಅಜಿತ್ ಪವಾರ್ ಅವರೊಂದಿಗೆ (ತಮ್ಮ ಸ್ವಂತ ಹಾಗೂ ಪವಾರ್ ಹಿರಿಯರ ಆಶೀರ್ವಾದವಿಲ್ಲದೆ) ಹೋಗುವವರಲ್ಲ" ಎಂದು ಠಾಕ್ರೆ ಹೇಳಿದರು.
..