ದಕ್ಷಿಣ ಭಾರತ: 123 ವರ್ಷಗಳಲ್ಲಿ ಅಕ್ಟೋಬರ್‌ನಲ್ಲಿ 6ನೇ ಕನಿಷ್ಠ ಮಳೆ

Update: 2023-11-01 14:16 GMT

Photo- PTI

ಹೊಸದಿಲ್ಲಿ: ದಕ್ಷಿಣ ಭಾರತದಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ 123 ವರ್ಷಗಳಲ್ಲೇ ಆರನೇ ಕನಿಷ್ಠ ಪ್ರಮಾಣದ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಐದು ಹವಾಮಾನ ಉಪವಿಭಾಗಗಳನ್ನು ಒಳಗೊಂಡಿರುವ ಈ ವಲಯದಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಕೇವಲ 74.9 ಮಿಲಿಮೀಟರ್ ಮಳೆ ಸುರಿದಿದೆ. ಇದು ವಾಡಿಕೆಗಿಂತ 60% ಕಡಿಮೆಯಾಗಿದೆ.

ಈ ಐದು ಉಪವಿಭಾಗಗಳೆಂದರೆ- ರಾಯಲಸೀಮ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕರೈಕ್ಕಲ್, ಕರಾವಳಿ ಆಂಧ್ರಪ್ರದೇಶ ಮತ್ತು ಯನಮ್ ಹಾಗೂ ಕೇರಳ ಮತ್ತು ಮಾಹೆ.

ಅಕ್ಟೋಬರ್‌ನಲ್ಲಿ ಈ ವಲಯದಲ್ಲಿ ದುರ್ಬಲಗೊಳ್ಳುತ್ತಿರುವ ನೈರುತ್ಯ ಮಾರುತ ಮತ್ತು ಬಲಗೊಳ್ಳುತ್ತಿರುವ ಈಶಾನ್ಯ ಮಾರುತದ ಪ್ರಭಾವದಿಂದಾಗಿ ಮಳೆ ಸುರಿಯುತ್ತದೆ.

ಅಕ್ಟೊಬರ್‌ನಲ್ಲಿ ಈ ವಲಯದಲ್ಲಿ ವಾಡಿಕೆಯ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯು ಭವಿಷ್ಯ ನುಡಿದಿತ್ತು. ಆದರೆ, ಈ ತಿಂಗಳಲ್ಲಿಮಳೆ ಕೊರತೆಯಾಗಿದೆ.

ಮಳೆ ಕೊರತೆಗೆ ಎಲ್ ನಿನೊ ಮತ್ತು ಹಿಂದೂ ಮಹಾಸಾಗರದ ಡೈಪೋಲ್ ಕಾರಣ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News