ಉತ್ತರಪ್ರದೇಶ | ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್‌ಗೆ ʼನೀಲಿ ಡ್ರಮ್ʼ ಉಡುಗೊರೆ ನೀಡಿದ ಎಸ್ಪಿ ನಾಯಕ!

Update: 2025-04-03 14:09 IST
ಉತ್ತರಪ್ರದೇಶ | ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್‌ಗೆ ʼನೀಲಿ ಡ್ರಮ್ʼ ಉಡುಗೊರೆ ನೀಡಿದ ಎಸ್ಪಿ ನಾಯಕ!

Photo:X/@amrishsonu

  • whatsapp icon

ಲಕ್ನೋ : ಸಮಾಜವಾದಿ ಪಕ್ಷದ ವಕ್ತಾರರೋರ್ವರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ನೀಲಿ ಡ್ರಮ್ ಉಡುಗೊರೆಯಾಗಿ ನೀಡಿದರು. ಮೀರತ್ ಕೊಲೆ ಪ್ರಕರಣದ ಬಳಿಕ ಈ ಅಪರೂಪದ ಉಡುಗೊರೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳ ಹಿಂದೆ ಮೀರತ್‌ನಲ್ಲಿ ನೇವಿ ಅಧಿಕಾರಿ ಸೌರಭ್ ರಜಪೂತ್ ಕೊಲೆ ನಡೆದಿತ್ತು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ ತನ್ನ 6 ವರ್ಷದ ಮಗಳ ಹುಟ್ಟುಹಬ್ಬ ಆಚರಣೆಗೆಂದು ಭಾರತಕ್ಕೆ ಬಂದಿದ್ದರು. ಆತನನ್ನು ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆ ಮಾಡಿ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು. ಪ್ರಕರಣ ದೇಶದಲ್ಲಿ ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸೌರಭ್ ಅವರ ಕತ್ತರಿಸಿದ ದೇಹದ ಭಾಗಗಳು ಪತ್ತೆಯಾದ ನೀಲಿ ಡ್ರಮ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿತ್ತು.

ಲಕ್ನೋದಲ್ಲಿ ನಡೆದ ‘ಲಾಂತ್ರಾಣಿ ಹಾಸ್ಯ ಉತ್ಸವ’ ಕಾರ್ಯಕ್ರಮದಲ್ಲಿ ಎಸ್ಪಿ ನಾಯಕ ದೀಪಕ್ ರಂಜನ್ ಉತ್ತರಪ್ರದೇಶದ ಉಪಮುಖ್ಯಮಂತ್ರಿಗಳಿಗೆ ನೀಲಿ ಡ್ರಮ್ ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದರು. ದೀಪಕ್ ರಂಜನ್ ಡ್ರಮ್ ನೀಡುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಸೌರಭ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾನನ್ನು ಬಂಧಿಸಲಾಗಿದೆ. ಮುಸ್ಕಾನ್, ಸೌರಭ್‌ನನ್ನು ಕೊಲೆ ಮಾಡಿದ ಬಳಿಕ ಆತನ ದೇಹವನ್ನು ತುಂಡರಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿದ್ದಳು. ಈ ಭಯಾನಕ ಅಪರಾಧದ ಬಳಿಕ ಉತ್ತರ ಪ್ರದೇಶದಲ್ಲಿ ನೀಲಿ ಡ್ರಮ್‌ಗಳ ಮಾರಾಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಜನರು ನೀಲಿ ಡ್ರಮ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News