ಶ್ರೀರಾಮಚರಿತ ಮಾನಸ ವಿವಾದ: ಸ್ವಾಮಿ ಪ್ರಸಾದ ಮೌರ್ಯ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ

Update: 2024-01-25 12:12 GMT

ಸುಪ್ರೀಂ ಕೋರ್ಟ್ ̧  ಸ್ವಾಮಿ ಪ್ರಸಾದ ಮೌರ್ಯ | Photo: PTI 

ಹೊಸದಿಲ್ಲಿ: ಶ್ರೀರಾಮಚರಿತ ಮಾನಸವನ್ನು ಅವಮಾನಿಸಿದ ಮತ್ತು ಅದರ ಪುಟಗಳನ್ನು ಹರಿಯುವಂತೆ ಹಾಗೂ ಸುಡುವಂತೆ ಜನರನ್ನು ಪ್ರಚೋದಿಸಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಅವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳಿಗೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ತಡೆಯಾಜ್ಞೆಯನ್ನು ನೀಡಿದೆ.

‘ಈ ವಿಷಯಗಳ ಬಗ್ಗೆ ನೀವೇಕೆ ಅಷ್ಟೊಂದು ತಳಮಳಗೊಂಡಿದ್ದೀರಿ?ಇದು ವ್ಯಾಖ್ಯಾನದ ವಿಷಯವಾಗಿದೆ. ಇದು ಅವರ ಚಿಂತನೆಯಾಗಿದೆ. ಇದು ಹೇಗೆ ಅಪರಾಧವಾಗುತ್ತದೆ? ಪ್ರತಿಗಳನ್ನು ಸುಟ್ಟಿದ್ದಕ್ಕೆ ಅವರನ್ನು ಹೊಣೆಯಾಗಿಸುವಂತಿಲ್ಲ ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಉತ್ತರ ಪ್ರದೇಶ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶರಣದೇವ ಸಿಂಗ್ ಠಾಕೂರ್ ಅವರಿಗೆ ಹೇಳಿತು.

ಮೌರ್ಯ ಸಲ್ಲಿಸಿದ ವಿಶೇಷ ರಜಾ ಅರ್ಜಿಯನ್ನು ಪರಿಶೀಲಿಸಲು ಸಮ್ಮತಿಸಿದ ಪೀಠವು ಉತ್ತರ ಪ್ರದೇಶ ಸರಕಾರ ಮತ್ತು ದೂರುದಾರರಿಗೆ ನೋಟಿಸ್ ಗಳನ್ನು ಹೊರಡಿಸಿತು. ನೋಟಿಸ್ ಗಳಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಅದು ಸೂಚಿಸಿತು.

ತುಳಸಿದಾಸರ ಶ್ರೀರಾಮಚರಿತ ಮಾನಸದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೌರ್ಯ ಮತ್ತು ಇತರ ಎಸ್ಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನ್ನ ವಿರುದ್ಧದ ಎಫ್ಐಆರ್ ಅನ್ನು ಪ್ರಶ್ನಿಸಿ ಮೌರ್ಯ ಅಲಹಾಬಾದ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ದೋಷಾರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳನ್ನು ಪುನರ್ಪರಿಶೀಲಿಸಿದ್ದ ಅದು ಮೌರ್ಯ ವಿರುದ್ಧದ ಆರೋಪಗಳಿಗೆ ಮೇಲ್ನೋಟಕ್ಕೆ ಸಮರ್ಥನೆ ಕಂಡು ಬರುತ್ತಿದೆ ಎಂದು ಹೇಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ವಿರುದ್ಧ ಮೌರ್ಯ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News