ಹಿಜಾಬ್ ಧರಿಸಿದ ಮಹಿಳೆಯರ ಸಂಭ್ರಮದ ನೆನಪಿಗೆ ಇಂಗ್ಲೇಂಡಿನಲ್ಲಿ 'ಸ್ಟ್ರೆಂತ್ ಆಫ್ ದಿ ಹಿಜಾಬ್' ಪ್ರತಿಮೆ!

Update: 2023-09-23 15:34 GMT

Photocredit: BBC

ಸ್ಮೆಥ್‌ವಿಕ್ (ಇಂಗ್ಲೆಂಡ್): ಹಿಜಾಬ್‌ಗಳನ್ನು ಧರಿಸುವ ಮಹಿಳೆಯರ ಸಂಭ್ರಮಾಚರಣೆಯನ್ನು ಜಾಗತಿಕವಾಗಿ ನೆನಪಿನಲ್ಲುಳಿಯುವಂತೆ ಮಾಡಲು ಸ್ಮೆಥ್‌ವಿಕ್‌ನ ಬೀದಿಯಲ್ಲಿ ಈ ವರ್ಷದ ಕೊನೆಯಲ್ಲಿ 'ಹಿಜಾಬ್‌ನ ಶಕ್ತಿ' ಶೀರ್ಷಿಕೆಯ ವಿಶಿಷ್ಟವಾದ ಶಿಲ್ಪಕಲೆ ಸಿದ್ಧವಾಗಿದೆ. ಈ ಸ್ಮಾರಕ ಕಲಾಕೃತಿಯು ವಿಶ್ವಾದ್ಯಂತ ಈ ರೀತಿಯ ಮೊದಲನೆಯದು ಎನ್ನಲಾಗಿದೆ. ಹಿಜಾಬ್‌ ಧರಿಸುವ ಮಹಿಳೆಯರಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲದೇ ಅವರ ಉಡುಗೆಯನ್ನು ಲೆಕ್ಕಿಸದೇ ಪ್ರೀತಿಸುವ ಮತ್ತು ಗೌರವಿಸುವ ಅವರ ಹಕ್ಕನ್ನು ಈ ಪ್ರತಿಮೆ ಸಂಕೇತಿಸುತ್ತದೆ.

ಕಲಾವಿದ ಲ್ಯೂಕ್ ಪೆರ್ರಿ ವಿನ್ಯಾಸಗೊಳಿಸಿದ, 'ಹಿಜಾಬ್‌ನ ಶಕ್ತಿ' ಪ್ರತಿಮೆ ಐದು ಮೀಟರ್ ಎತ್ತರವನ್ನು ಹೊಂದಿದೆ. ಅಂದಾಜು ಒಂದು ಟನ್ ತೂಕವಿದೆ. 'ಮಹಿಳೆಯರು ತಾನು ಧರಿಸಲು ಆಯ್ಕೆಮಾಡುವ ಯಾವುದನ್ನಾದರೂ ಪ್ರೀತಿಸುವುದು ಮತ್ತು ಗೌರವಿಸುವುದು ಅವರ ಹಕ್ಕು' ಎಂಬ ಶಕ್ತಿಯುತವಾದ ಸಂದೇಶದೊಂದಿಗೆ ಈ ಪ್ರತಿಮೆ ಕೆತ್ತಲಾಗಿದೆ.

ಬ್ರಾಸ್‌ಹೌಸ್ ಲೇನ್ ಬಳಿ ಈ ಅಸಾಮಾನ್ಯ ಕಲಾಕೃತಿಯ ಸ್ಥಾಪನೆಯನ್ನು ಅಕ್ಟೋಬರ್ ಅಥವಾ ನವೆಂಬರ್ ಆರಂಭದಲ್ಲಿ ಮಾಡಲಾಗುತ್ತದೆ. ಬರ್ಮಿಂಗ್ಹ್ಯಾಮ್‌ನಲ್ಲಿ ಯುದ್ಧಾನಂತರದ ವಲಸೆ ಸಮುದಾಯಗಳ ಶ್ರೀಮಂತ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ಲೆಗಸಿ ವೆಸ್ಟ್ ಮಿಡ್‌ಲ್ಯಾಂಡ್ಸ್‌ ಎಂಬ ನೋಂದಾಯಿತ ಚಾರಿಟಿ ಈ ಕೆಲಸಕ್ಕೆ ಕೈ ಹಾಕಿದೆ.

ಈ ಅಸಾಧಾರಣ ಸೃಷ್ಟಿಯ ಹಿಂದಿನ ಸೃಜನಶೀಲ ಮನಸ್ಸು ಲ್ಯೂಕ್ ಪೆರ್ರಿ ಅವರು BBC ಯೊಂದಿಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. " ಇಸ್ಲಾಮಿಕ್ ನಂಬಿಕೆಯನ್ನು ಪ್ರತಿನಿಧಿಸುವ ಒಂದು ತುಣುಕು ಹಿಜಾಬ್‌. ಅದೇ ಅದರ ಶಕ್ತಿ, ಹಾಗಾಗಿ ಅದು ಬಹಳ ಪ್ರಮುಖವಾದುದು” ಎಂದು ಒತ್ತಿ ಹೇಳಿದರು.

ಈ ಪ್ರಯತ್ನವು ಪೆರಿ ಅವರು ಕೆನನ್ ಬ್ರೌನ್‌ ಅವರೊಡನೆ ಸೇರಿ ವಿನ್ಯಾಸಗೊಳಿಸಿದ್ದ 'ಬ್ಲ್ಯಾಕ್ ಬ್ರಿಟಿಷ್ ಹಿಸ್ಟರಿ ಈಸ್ ಬ್ರಿಟಿಷ್ ಹಿಸ್ಟರಿ' ಶಿಲ್ಪವನ್ನು ಹೋಲುತ್ತದೆ. ಹಿಂದಿನ ಶಿಲ್ಪವು ಸ್ಥಾಪನೆಯ ಸ್ವಲ್ಪ ಸಮಯದ ನಂತರ ವಿರೂಪವಾಯಿತು. ಅದೇನೇ ಇದ್ದರೂ, ಇಂಗ್ಲೇಂಡಿನ ವೈವಿಧ್ಯಮಯ ಸಮುದಾಯದ ಎಲ್ಲಾ ಅಂಶಗಳನ್ನು ಪ್ರತಿನಿಧಿಸುವ ತನ್ನ ಬದ್ಧತೆಯಲ್ಲಿ ಪೆರ್ರಿ ದೃಢವಾಗಿ ಉಳಿದಿದ್ದಾರೆ.

'ಹಿಜಾಬ್‌ನ ಶಕ್ತಿ' ವಿವಾದವನ್ನು ಹುಟ್ಟುಹಾಕಬಹುದು ಎಂದು ಒಪ್ಪಿಕೊಳ್ಳುವಾಗ, ಪೆರ್ರಿ ಏಕತೆ ಮತ್ತು ಪ್ರಾತಿನಿಧ್ಯದ ಪ್ರಾಮುಖ್ಯತೆಯನ್ನು ದೃಢವಾಗಿ ನಂಬುತ್ತಾರೆ. ವಿವಾದಗಳು ಬದಿಗಿರಲಿ, ಶಿಲ್ಪಕ್ಕೆ ಧನಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗಿ ಬರುತ್ತಿದೆ ಎಂದು ಅವರು ಸಂತಸ ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News