ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಶೂನ್ಯ ಸಹನೆ ನೀತಿ: ಪ್ರಧಾನಿ ಮೋದಿ

Update: 2023-08-12 16:14 GMT

 ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ: ಭಾರತವು ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಶೂನ್ಯ ಸಹನೆ ನೀತಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅವರು ಕೋಲ್ಕತಾದಲ್ಲಿ ನಡೆದ ಜಿ20 ಭ್ರಷ್ಟಾಚಾರ ವಿರೋಧಿ ಸಚಿವ ಮಟ್ಟದ ಸಭೆಯನ್ನು ಆನ್ಲೈನ್ ಮೂಲಕ ಉದ್ದೇಶಿಸಿ ಮಾತನಾಡುತ್ತಿದ್ದರು.

‘‘ಭಾರತವು ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಶೂನ್ಯ ಸಹನೆ ನೀತಿಯನ್ನು ಹೊಂದಿದೆ. ಪಾರದರ್ಶಕ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆಯೊಂದನ್ನು ಹೊಂದಲು ಭಾರತವು ತಂತ್ರಜ್ಞಾನ ಮತ್ತು ಇ-ಆಡಳಿತವನ್ನು ಬಳಸಿಕೊಳ್ಳುತ್ತಿದೆ’’ ಎಂದು ಅವರು ಹೇಳಿದರು.

ರವೀಂದ್ರನಾಥ ಟಾಗೋರ್ ರ ಬರಹಗಳನ್ನು ಉಲ್ಲೇಖಿಸಿ ಪ್ರಧಾನಿ, ‘‘ದುರಾಶೆಯು ನಮ್ಮನ್ನು ಸತ್ಯವನ್ನು ಅರಿಯುವುದರಿಂದ ತಡೆಯುತ್ತದೆ, ಹಾಗಾಗಿ ನಾವು ದುರಾಶೆ ಹೊಂದಬಾರದು’’ ಎಂದರು.

ಪ್ರಾಚೀನ ಭಾರತೀಯ ಪುರಾಣದಿಂದ ‘ಮಾ ಗೃಧಾ’ ಎಂಬ ಮಾತನ್ನು ಅವರು ಉಲ್ಲೇಖಿಸಿದರು. ‘ಮಾ ಗೃಧಾ’ ಅಂದರೆ ‘‘ಎಲ್ಲಿಯೂ ದುರಾಶೆ ಇರದಿರಲಿ’’.

ಭ್ರಷ್ಟಾಚಾರದ ಹೆಚ್ಚಿನ ಪರಿಣಾಮ ಬೀಳುವುದು ಬಡವರು ಮತ್ತು ದುರ್ಬಲ ವರ್ಗದವರ ಮೇಲೆ ಎಂದು ಪ್ರಧಾನಿ ಹೇಳಿದರು. ‘‘ಭ್ರಷ್ಟಾಚಾರವು ಸಂಪನ್ಮೂಲಗಳ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ, ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುತ್ತದೆ, ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಜನರ ಜೀವನ ಮಟ್ಟವನ್ನು ಇಳಿಸುತ್ತದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News