ಇವಿಎಂ -ವಿವಿಪ್ಯಾಟ್ ಮತಪರಿಶೀಲನೆ: ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್

Update: 2024-04-18 15:38 GMT

PC : PTI

ಹೊಸದಿಲ್ಲಿ: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ದ ಮೂಲಕ ಚಲಾಯಿತವಾದ ಮತಗಳನ್ನು ವಿವಿಪ್ಯಾಟ್ ಯಂತ್ರದಲ್ಲಿ ದಾಖಲಾದ ಸ್ಲಿಪ್‌ಗಳ ಜೊತೆ ತಾಳೆ ಹಾಕುವ ಮೂಲಕ ಅವುಗಳ ಕಾರ್ಯನಿರ್ವಹಣೆಯ ಕುರಿತು ದೃಢಪಡಿಸಿಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಕಾದಿರಿಸಿದೆ.

ಈ ಅರ್ಜಿಗಳ ಕುರಿತು ಚುನಾವಣಾ ಆಯೋಗದ ಉತ್ತರವನ್ನು ಗುರುವಾರ ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತನ್ನ ತೀರ್ಪನ್ನು ಕಾದಿರಿಸಿತು.

ಚುನಾವಣಾ ಆಯೋಗದ ಪರ ವಕೀಲರಾದ ಹಿರಿಯ ನ್ಯಾಯವಾದಿ ಮಣಿಂದರ್ ಸಿಂಗ ಅವರು, ಇವಿಎಂಗಳ ಕಾರ್ಯನಿರ್ವಹಣೆ ಪ್ರಕ್ರಿಯೆ ಬಗ್ಗೆ ನ್ಯಾಯಪೀಠಕ್ಕೆ ವಿವರಣೆಯನ್ನು ನೀಡಿದರು.

ಅರ್ಜಿದಾರರ ಪರವಾಗಿ ವಾದಿಸಿದ ನ್ಯಾಯವಾದಿ ಪ್ರಶಾಂತ ಭೂಷಣ್ ಹಾಗೂ ಹಿರಿಯ ನ್ಯಾಯವಾದಿ ಗೋಪಾಲ ಶಂಕರ ನಾರಾಯಣನ್ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News