ತೆಲಂಗಾಣ: ಹಲವು ಬಿ.ಆರ್.ಎಸ್. ನಾಯಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದ ಕಾಂಗ್ರೆಸ್

Update: 2023-12-03 10:45 GMT

ರೇಣುಕಾ ಚೌಧುರಿ | Photo: PTI  

ಹೊಸದಿಲ್ಲಿ: ತೆಲಂಗಾಣ ವಿಧಾನಸಭೆಯ 119 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಇತ್ತೀಚಿನ ವರದಿಗಳು ಬಂದಾಗ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 58 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ ಹಲವು ಮಂದಿ ಭಾರತ ರಾಷ್ಟ್ರೀಯ ಸಮಿತಿ(ಬಿ.ಆರ್.ಎಸ್.) ಮುಖಂಡರು ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧುರಿ ಹೇಳಿದ್ದಾರೆ.

ಬಿ.ಆರ್.ಎಸ್. ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, "ಹೌದು; ಇಂದಿನ ರಾಜಕೀಯವೇ ಹಾಗೆ. ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಕೆಲವೊಮ್ಮೆ ಅವರು ನಮ್ಮ ಶಾಸಕರನ್ನು ಕರೆದೊಯ್ಯುತ್ತಾರೆ ಮತ್ತೆ ಕೆಲವೊಮ್ಮೆ ಅವರು ಇಲ್ಲಿಗೆ ಬರುತ್ತಾರೆ" ಎಂದು ರೇಣುಕಾ ಚೌಧುರಿ ಉತ್ತರಿಸಿದರು.

"ನಾನು ಒಂದು ವರ್ಷದಿಂದ ಇದನ್ನು ಹೇಳುತ್ತಲೇ ಬಂದಿದ್ದೇನೆ. ಏಕೆಂದರೆ ನಾವು ಸಾರ್ವಜನಿಕರ ನಾಡಿಮಿಡಿತ ಅರಿತಿದ್ದೇವೆ. ದೊಡ್ಡ ಬದಲಾವಣೆ ಸಂಭವಿಸುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೆವು. ಗೆಲುವು ನಮ್ಮದು; ನನಗೆ ವಿಶ್ವಾಸವಿದೆ. ಬಿ.ಆರ್.ಎಸ್.ನಿಂದ ಜನ ಬಸವಳಿದಿದ್ದಾರೆ. ಬಿಜೆಪಿ ಮತ್ತು ಬಿ.ಆರ್.ಎಸ್. ಒಂದೇ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News