ತೆಲಂಗಾಣ: ಹಾಲಿ ಶಾಸಕರ ಸಂಪತ್ತು 65% ಏರಿಕೆ

Update: 2023-11-28 15:59 GMT

ADR \ Photo: X

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮರು ಸ್ಪರ್ಧಿಸುತ್ತಿರುವ 103 ಶಾಸಕರ ಸಂಪತ್ತು 2018 ಮತ್ತು 2023ರ ನಡುವಿನ ಅವಧಿಯಲ್ಲಿ 65 ಶೇಕಡದಷ್ಟು ಏರಿಕೆ ಕಂಡಿದೆ ಎಂದು ಸರಕಾರೇತರ ಸಂಘಟನೆ ‘ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಸೋಮವಾರ ಹೇಳಿದೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.

ಮರುಸ್ಪರ್ಧಿಸುತ್ತಿರುವ ಶಾಸಕರ ಚುನಾವಣಾ ಅಫಿದಾವಿತ್‌ಗಳ ವಿಶ್ಲೇಷಣೆಯನ್ನು ಆಧರಿಸಿದ ವರದಿಯನ್ನು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರ ಬಿಡುಗಡೆಗೊಳಿಸಿದೆ.

2018ರಲ್ಲಿ ಈ ಶಾಸಕರ ಸರಾಸರಿ ಸಂಪತ್ತು 14.44 ಕೋಟಿ ರೂ. ಆಗಿದ್ದರೆ, 2023ರಲ್ಲಿ ಅದು 23.87 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅದು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ, 103 ಶಾಸಕರ ಪೈಕಿ 90 ಮಂದಿಯ ಸಂಪತ್ತಿನಲ್ಲಿ ಹೆಚ್ಚಳವಾಗಿದೆ, ಅದೇ ವೇಳೆ 13 ಶಾಸಕರ ಸಂಪತ್ತಿನಲ್ಲಿ ಇಳಿಕೆಯಾಗಿದೆ ಎಂದು ಅದು ತಿಳಿಸಿದೆ.

ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಗೆ ಸೇರಿದ ಶಾಸಕರ ಸಂಪತ್ತು ಅತಿ ಹೆಚ್ಚು, ಅಂದರೆ 68.56 ಶೇಕಡದಷ್ಟು ಹೆಚ್ಚಿದೆ. ನಂತರದ ಸ್ಥಾನಗಳಲ್ಲಿ ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (58.96%), ಕಾಂಗ್ರೆಸ್ (55.12%) ಮತ್ತು ಭಾರತೀಯ ಜನತಾ ಪಕ್ಷ (9.51%)ದ ಶಾಸಕರುಗಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News