ನಾವು ಉಗ್ರಗಾಮಿಗಳ ಮನೆಯೊಳಗೆ ನುಗ್ಗಿ ಹೊಡೆದೆವು: ಪ್ರಧಾನಿ ಮೋದಿ

Update: 2024-04-11 11:00 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ನಾವು ಉಗ್ರಗಾಮಿಗಳ ಮನೆಯೊಳಗೇ ನುಗ್ಗಿ ಅವರನ್ನು ಹೊಡೆದು ಹಾಕಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರಾಖಂಡದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶವೀಗ ಬಿಕ್ಕಟ್ಟಿನ ವಲಯಗಳಲ್ಲೂ ರಾಷ್ಟ್ರೀಯ ಭದ್ರತೆಯನ್ನು ಖಾತರಿಗೊಳಿಸುವ ಸದೃಡ ಸರಕಾರವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು.

ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಶ್ರೀರಾಮನ ಅಸ್ತಿತ್ವದ ಕುರಿತು ಪ್ರಶ್ನೆಗಯನ್ನೆತ್ತಿತು. ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿತು ಹಾಗೂ ಎಷ್ಟು ಸಾಧ್ಯತವೊ ಅಷ್ಟೂ ಅಡೆತಡೆಯನ್ನು ಸೃಷ್ಟಿಸಿತು. ಹೀಗಿದ್ದೂ ರಾಮ ಮಂದಿರವನ್ನು ನಿರ್ಮಾಣ ಮಾಡಿದವರು ಕಾಂಗ್ರೆಸ್ ಪಕ್ಷದ ಎಲ್ಲ ಪಾಪಗಳನ್ನು ಕ್ಷಮಿಸಿ, ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಆದರೆ, ಕಾಂಗ್ರೆಸ್ ಆ ಕಾರ್ಯಕ್ರಮಕ್ಕೂ ಬಹಿಷ್ಕಾರ ಹಾಕಿತು ಎಂದು ಆರೋಪಿಸಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೋಧರ ಬಳಿ ಬುಲೆಟ್ ಪ್ರೂಫ್ ಜಾಕೆಟ್ ಕೂಡಾ ಇರಲಿಲ್ಲ. ಶತ್ರುಗಳ ಗುಂಡೇಟಿನಿಂದ ತಪ್ಪಿಸಲು ಸಮರ್ಪಕ ವ್ಯವಸ್ಥೆಯನ್ನು ಮಾಡಿರಲಿಲ್ಲ ಎಂದೂ ಅವರು ದೂರಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಧ್ಯವರ್ತಿಗಳು ಹಣವನ್ನು ಕದಿಯುತ್ತಿದ್ದರು. ಆದರೀಗ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News