ಭಾರತೀಯ ಆರ್ಥಿಕತೆಯು ಕಳೆದೊಂದು ದಶಕದಲ್ಲಿ ಗಾಢವಾದ ಧನಾತ್ಮಕ ರೂಪಾಂತರವನ್ನು ಕಂಡಿದೆ : ನಿರ್ಮಲಾ ಸೀತಾರಾಮನ್

Update: 2024-02-01 14:30 GMT

ನಿರ್ಮಲಾ ಸೀತಾರಾಮನ್ | Photo: PTI

ಹೊಸದಿಲ್ಲಿ: ಭಾರತೀಯ ಆರ್ಥಿಕತೆಯು ಕಳೆದ 10 ವರ್ಷಗಳಲ್ಲಿ ಗಾಢವಾದ ಧನಾತ್ಮಕ ರೂಪಾಂತರವನ್ನು ಕಂಡಿದೆ ಎಂದು ಗುರುವಾರ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತೀಯರು ಭರವಸೆ ಮತ್ತು ಆಯ್ಕೆಗಳೊಂದಿಗೆ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ ಎಂದರು.

ರಚನಾತ್ಮಕ ಸುಧಾರಣೆಗಳು,ಜನಪರ ಕಾರ್ಯಕ್ರಮಗಳು ಮತ್ತು ಉದ್ಯೋಗಾವಕಾಶಗಳು ಆರ್ಥಿಕತೆಯು ಹೊಸ ಚೈತನ್ಯವನ್ನು ಪಡೆದುಕೊಳ್ಳಲು ನೆರವಾಗಿವೆ ಎಂದು ಅವರು ಹೇಳಿದರು.

2020-21ರಲ್ಲಿ ಶೇ.5.8ರಷ್ಟು ಸಂಕುಚಿತಗೊಂಡಿದ್ದ ಆರ್ಥಿಕತೆಯು 2021-22ರಲ್ಲಿ ಶೇ.9.1ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.

ಭಾರತಿಯ ಆರ್ಥಿಕತೆಯು ಮುಂದಿನ ಮೂರು ವರ್ಷಗಳಲ್ಲಿ ಪ್ರಸ್ತುತ 3.7 ಲಕ್ಷ ಕೋಟಿ ಡಾಲರ್ ಗಳಿಂದ 5 ಲಕ್ಷ ಕೋಟಿ ರೂ.ಗಳ ಜಿಡಿಪಿಯೊಂದಿಗೆ ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿತ್ತ ಸಚಿವಾಲಯವು ತನ್ನ ಇತ್ತೀಚಿನ ಮಾಸಿಕ ಆರ್ಥಿಕ ಪರಾಮರ್ಶೆಯಲ್ಲಿ ಹೇಳಿತ್ತು. ಮುಂದಿನ ಆರೇಳು ವರ್ಷಗಳಲ್ಲಿ (2030ರ ವೇಳೆಗೆ) ಏಳು ಲಕ್ಷ ಕೋಟಿ ಡಾಲರ್ ಗಳ ಆರ್ಥಿಕತೆಯಾಗಲು ಅದು ಬಯಸಿದೆ ಎಂದೂ ಅದು ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News