'ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ್' ಕಾನೂನುಬಾಹಿರ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

Update: 2023-12-27 12:20 GMT

ಕೇಂದ್ರ ಗೃಹ ಸಚಿವಾಲಯ | Photo: PTI 

ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯವು ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ್‌ (ಮಸರತ್‌ ಆಲಂ ಬಣ) ಎಂಎಲ್‌ಜೆಕೆ-ಎಂಎ ಅನ್ನು ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸಿದೆ.

“ಈ ಸಂಘಟನೆ ಮತ್ತು ಅದರ ಸದಸ್ಯರು ದೇಶ-ವಿರೋದಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಉಗ್ರವಾದ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆಗಾಗಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಸರ್ಕಾರದ ಸಂದೇಶವು ಸ್ಪಷ್ಟವಾಗಿದೆ. ದೇಶದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಯ ವಿರುದ್ಧ ಕಾರ್ಯಾಚರಿಸುವ ಯಾರೇ ಆಗಲಿ ಅವರನ್ನು ಬಿಟ್ಟುಬಿಡುವ ಪ್ರಶ್ನೆಯಿಲ್ಲ ಅವರು ಕಾನೂನು ಕ್ರಮವನ್ನು ಎದುರಿಸಬೇಕಿದೆ,” ಎಂದು ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಕಾನೂನುಬಾಹಿರ ಎಂದು ಘೋಷಿಸಲಾಗಿರುವ ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ್‌ (ಮಸರತ್‌ ಆಲಂ ಬಣ) ಎಂಎಲ್‌ಜೆಕೆ-ಎಂಎ 2010ರಲ್ಲಿ ಕಣಿವೆಯಲ್ಲಿ ಸ್ವಾತಂತ್ರ್ಯ ಪರ ಹೋರಾಟಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮಸರತ್ ಆಲಂ ಅವರನ್ನು ಹಾಗೂ ಇನ್ನೂ ಇತರರನ್ನು ಪ್ರತಿಭಟನೆಗಳ ನಂತರ ಬಂಧಿಸಲಾಗಿತ್ತು, 2015ರಲ್ಲಿ ಮೆಹಬೂಬಾ ಮುಫ್ತಿ ಸರ್ಕಾರ ಆಲಂ ಅವರನ್ನು ಬಿಡುಗಡೆಗೊಳಿಸಿತ್ತು. ಇದೇ ಕಾರಣಕ್ಕೆ ಆಗಿನ ಪಿಡಿಪಿ-ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News