ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ ಸಾಧ್ಯತೆ

Update: 2023-08-06 16:01 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಒಪ್ಪಿತ ಸೂತ್ರದಂತೆ ಕೇಂದ್ರ ಸರಕಾರವು ತನ್ನ ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿಎ)ಯನ್ನು ಈಗಿನ ಶೇ.42ರಿಂದ ಶೇ.45ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಸಚಿವಾಲಯದ ಲೇಬರ್ ಬ್ಯೂರೊ ಪ್ರತಿ ತಿಂಗಳು ಪ್ರಕಟಿಸುವ ಇತ್ತೀಚಿನ ಕೈಗಾರಿಕಾ ಕಾರ್ಮಿಕರಿಗಾಗಿ ಬಳಕೆದಾರ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲು)ದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

‘2023, ಜೂನ್ ತಿಂಗಳಿಗೆ ಸಿಪಿಐ-ಐಡಬ್ಲ್ಯು ಜು.31ರಂದು ಬಿಡುಗಡೆಗೊಂಡಿದೆ. ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಏರಿಕೆಗಾಗಿ ನಾವು ಆಗ್ರಹಿಸುತ್ತಿದ್ದೇವೆ. ಆದರೆ ತುಟ್ಟಿಭತ್ಯೆ ಲೆಕ್ಕಾಚಾರವು ಶೇ.3ಕ್ಕಿಂತ ಕೊಂಚ ಹೆಚ್ಚಾಗುತ್ತದೆ. ಸರಕಾರವು ತುಟ್ಟಿಭತ್ಯೆ ಏರಿಕೆಗಾಗಿ ಪೂರ್ಣಾಂಕವನ್ನು ಮಾತ್ರ ಪರಿಗಣಿಸುತ್ತದೆ. ಹೀಗಾಗಿ ತುಟ್ಟಿಭತ್ಯೆ ಶೇ.3ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಲ್ ಇಂಡಿಯಾ ರೇಲ್ವೆಮೆನ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ ಮಿಶ್ರಾ ತಿಳಿಸಿದರು. ತುಟ್ಟಿಭತ್ಯೆ ಏರಿಕೆಯು 2023,ಜು.1ರಿಂದ ಪೂರ್ವಾನ್ವಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News