ವಿನೇಶ್‌ ಫೋಗಟ್‌ ಒಲಿಂಪಿಕ್ಸ್‌ ಅನರ್ಹತೆ: ವಿನೇಶ್‌ಗೆ ಮಾತ್ರವಲ್ಲ ಇಡೀ ದೇಶಕ್ಕೆ ಅವಮಾನ ಎಂದ ಆಪ್‌ ನಾಯಕ ಸಂಜಯ್‌ ಸಿಂಗ್‌

Update: 2024-08-07 11:39 GMT

ಸಂಜಯ್‌ ಸಿಂಗ್‌ (PTI)

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ವಿನೇಶ್‌ ಫೋಗಟ್‌ ಅವರ ತೂಕ ನಿಗದಿತ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಿದ ಕ್ರಮವನ್ನು ಆಪ್‌ ನಾಯಕ ಸಂಜಯ್‌ ಸಿಂಗ್‌ ಟೀಕಿಸಿದ್ದಾರೆ ಹಾಗೂ ಇದು ವಿನೇಶ್‌ಗೆ ಮಾತ್ರ ಅವಮಾನವಲ್ಲ, ಇಡೀ ದೇಶಕ್ಕೆ ಅವಮಾನ ಎಂದಿದ್ದಾರೆ.

ಈ ಕುರಿತು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ “ವಿನೇಶ್‌ ಅವರು ಇತಿಹಾಸ ಸೃಷ್ಟಿಸುತ್ತಿದ್ದರು. ಇಂತಹ ಸಮಯದಲ್ಲಿ ಅವರು 100 ಗ್ರಾಂ ತೂಕ ಹೆಚ್ಚಿದ್ದಾರೆಂದು ಅವರನ್ನು ಅನರ್ಹಗೊಳಿಸಿದ್ದು ತೀವ್ರ ಅನ್ಯಾಯದ ಕ್ರಮ. ಇಡೀ ದೇಶ ಅವರ ಜೊತೆಗಿದೆ. ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಅಪೀಲನ್ನು ಒಪ್ಪಿಕೊಳ್ಳದೇ ಇದ್ದರೆ ಒಲಿಂಪಿಕ್ಸ್‌ ಅನ್ನು ಬಹಿಷ್ಕರಿಸಬೇಕು,” ಎಂದು ಅವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News