ಪತಿ ಮೃತಪಟ್ಟ ಕೆಲ ದಿನಗಳಲ್ಲೇ ಮಕ್ಕಳೊಂದಿಗೆ ವಿಷ ಸೇವಿಸಿದ ಮಹಿಳೆ; ಇಬ್ಬರು ಮಕ್ಕಳು ಮೃತ್ಯು

Update: 2023-09-11 06:23 GMT

ಸಾಂದರ್ಭಿಕ ಚಿತ್ರ (PTI)

ಭುವನೇಶ್ವರ: ಪತಿ ಮೃತಪಟ್ಟ ಕೆಲ ದಿನಗಳಲ್ಲೇ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ವಿಷ ಸೇವಿಸಿದ್ದು, ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು, ಅವರ ತಾಯಿ ಒಡಿಶಾದ ಬಾರ್ಗಢ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ndtv.com ವರದಿ ಮಾಡಿದೆ.

ಈ ಘಟನೆಯು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಂದು ಸೊಹೇಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಮಾಸ್ಟರ್ ಪಡದಲ್ಲಿ ನಡೆದಿದೆ.

ಅರ್ಜುನ್ ಸಾಹು ಎಂಬವರ ಪತ್ನಿ ಕುಮುದಿನಿ ಸಾಹು, ಆಕೆಯ ಪುತ್ರ ಬನ್ಸಿಧರ್ ಸಾಹು ಹಾಗೂ ಪುತ್ರಿ ಸುಬರ್ನಾ ಮಹಾಜನ್ ತಮ್ಮ ನಿವಾಸದಲ್ಲಿ ವಿಷ ಸೇವಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಕುಟುಂಬದ ಮೂವರೂ ಸದಸ್ಯರು ಮನೆಯ ಒಳಗಿನಿಂದ ಬೀಗ ಹಾಕಿಕೊಂಡು ವಿಷ ಸೇವಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ನೆರೆಯವರಿಂದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯ ಬಾಗಿಲು ಒಡೆದು, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಆ ಮೂವರನ್ನೂ ಸೊಹೇಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ ನಂತರ, ಅಲ್ಲಿ ಬನ್ಸಿಧರ್ ಮೃತಪಟ್ಟಿದ್ದಾನೆ.

ಆತನ ಸಹೋದರಿ ಸುಬ್ರನಾಳನ್ನು ಬುರ್ಲಾ ವೈದ್ಯಕೀಯ ಕಾಲೇಜಿಗೆ ಸಾಗಿಸಿದಾಗ, ಅಲ್ಲಿ ಆಕೆ ಮೃತಪಟ್ಟಿದ್ದಾಳೆ. ಕುಮುದಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಆಕೆಗೆ ಬುರ್ಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಸ್ಥಳೀಯರ ಪ್ರಕಾರ, ಸೆಪ್ಟೆಂಬರ್ 6ರಂದು ಅರ್ಜುನ್ ಹೃದಯಾಘಾತದಿಂದ ಮೃತಪಟ್ಟಿದ್ದರು.

ಅರ್ಜುನ್ ಮೃತಪಟ್ಟ ನಂತರ, ಕುಟುಂಬದ ಸದಸ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.”ಒತ್ತಡದಿಂದ ಮಕ್ಕಳು ಆತ್ಮಹತ್ಯೆಯಲ್ಲಿ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಸದ್ಯಕ್ಕೆ ಆತ್ಮಹತ್ಯೆಗೆ ಖಚಿತ ಕಾರಣವನ್ನು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ಪದಂಪುರ್ ಉಪ ವಿಭಾಗದ ಪೊಲೀಸ್ ಅಧಿಕಾರಿ ಬಿಭುಟಿ ಭೋಯಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News