ನಾಳೆ ಸಂಸತ್ತಿನಲ್ಲಿ ಸರ್ವ ಪಕ್ಷಗಳ ಸಭೆ
Update: 2024-01-29 16:39 GMT
ಹೊಸದಿಲ್ಲಿ : ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಗಳವಾರ ಸರ್ವ ಪಕ್ಷಗಳ ಸಭೆ ಕರೆದಿದೆ.
ಇದು ಈ ಬಾರಿ ಜನವರಿ 31ರಿಂದ ಫೆಬ್ರವರಿ 9ರ ನಡುವೆ ನಡೆಯುವ ಸಣ್ಣ ಅಧಿವೇಶನವಾಗಿದ್ದು, ಲೋಕಸಭಾ ಚುನಾವಣೆಗೆ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ನೂತನ ಸರಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ರಾಷ್ಟ್ರಪತಿ ಮುರ್ಮು ಅವರ ಭಾಷಣದೊಂದಿಗೆ ಈ ಅಧಿವೇಶನ ಆರಂಭವಾಗಲಿದೆ.