ಪ್ರಧಾನಿಯ ನೀತಿಯಿಂದ ಉಂಟಾಗಿರುವ ನಿರುದ್ಯೋಗವೇ ಸಂಸತ್ ಭದ್ರತಾ ವೈಫಲ್ಯಕ್ಕೆ ಕಾರಣ: ರಾಹುಲ್ ಗಾಂಧಿ
Update: 2023-12-16 09:10 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯಿಂದಾಗಿ ಉಂಟಾಗಿರುವ ನಿರುದ್ಯೋಗ ಸಮಸ್ಯೆಯು ಸಂಸತ್ ಭದ್ರತಾ ವೈಫಲ್ಯದ ಇತ್ತೀಚಿನ ಘಟನೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ದೇಶದ ನಾಗರಿಕರಿಗೆ ಮೋದಿ ಅವರ ನೀತಿಯಿಂದಾಗಿ ಉದ್ಯೋಗ ದೊರೆಯುತ್ತಿಲ್ಲ. ನಿರುದ್ಯೋಗದ ಕಾರಣದಿಂದಾಗಿಯೇ ಈ ಭದ್ರತಾ ವೈಫಲ್ಯ ಉಂಟಾಗಿದೆ,” ಎಂದು ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್ ಹೇಳಿದರು.
ಪ್ರಸ್ತುತ ದೇಶದ ನಾಗರಿಕರು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ ಎಂದು ರಾಹುಲ್ ಹೇಳಿದರು.
“ಭದ್ರತಾ ವೈಫಲ್ಯ ಸಂಭವಿಸಿದೆ. ಅದು ಏಕಾಯಿತೆಂಬುದು ಪ್ರಶ್ನೆಯಾಗಿದೆ. ಮುಖ್ಯ ಸಮಸ್ಯೆ ನಿರುದ್ಯೋಗದ್ದು. ಪ್ರಧಾನಿಯ ನೀತಿಗಳಿಂದ ಉಂಟಾಗಿರುವ ನಿರುದ್ಯೋಗದ ಜೊತೆಗೆ ಹಣದುಬ್ಬರ ಸಮಸ್ಯೆಯೂ ಭದ್ರತಾ ವೈಫಲ್ಯಕ್ಕೆ ಕಾರಣ,” ಎಂದು ರಾಹುಲ್ ಹೇಳಿದರು.