ರಾಹುಲ್ ಗಾಂಧಿಯವರ ‘ಸಂವಿಧಾನ ಬದಲಾವಣೆ’ ಹೇಳಿಕೆ: ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವ ಅಠವಳೆ ದೂರು
Update: 2024-05-09 15:29 GMT
ಮುಂಬೈ : ಬಿಜೆಪಿಯು ದೇಶದ ಸಂವಿಧಾನವನ್ನು ಬದಲಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಗಾಗ್ಗೆ ಆರೋಪಿಸುವುದನ್ನು ಆಕ್ಷೇಪಿಸಿ ತಾನು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಕೇಂದ್ರದ ಸಹಾಯಕ ಸಾಮಾಜಿಕ ನ್ಯಾಯ ಸಚಿವ ರಾಮದಾಸ ಅಠವಳೆ ಅವರು ತಿಳಿಸಿದ್ದಾರೆ.
ರಾಹುಲ್ ಈ ಹೇಳಿಕೆಯನ್ನು ನೀಡುವುದನ್ನು ನಿಷೇಧಿಸಬೇಕು ಮತ್ತು ಅವರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಮುಖ ದಲಿತ ನಾಯಕ ಹಾಗೂ ಬಿಜೆಪಿಯ ಮಿತ್ರ ಅಠವಳೆ ಹೇಳಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಲು ಯೋಜಿಸಿದೆ ಎಂದು ರಾಹುಲ್ ಆಗಾಗ್ಗೆ ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಆರೋಪಗಳನ್ನು ಹಲವಾರು ಸಲ ನಿರಾಕರಿಸಿದ್ದಾರೆ ಎಂದೂ ಅವರು ತಿಳಿಸಿದರು.