ಚಾಕೊಲೇಟ್‌ಗಳಲ್ಲಿ ಸೀಸ, ಕ್ಯಾಡ್ಮಿಯಮ್ ಅಪಾಯಕಾರಿ ಪ್ರಮಾಣದಲ್ಲಿ ಬಳಕೆ!
ಹೊಸದಿಲ್ಲಿ: ಬಹುತೇಕ ಚಾಕೊಲೇಟ್ ಉತ್ಪನ್ನಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಸೀಸ ಮತ್ತು ಕ್ಯಾಡ್ಮಿಯಮ್ ಇರುವುದು ಇತ್ತೀಚೆಗೆ ನಡೆಸಲಾಗಿರುವ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಸಾಮಾಜಿಕ ಸೇವಾ ಉದ್ದೇಶದ ಸಂಘಟನೆ ಕನ್ಸ್ಯೂಮರ್ ರಿಪೋರ್ಟ್ಸ್ ಹೇಳಿದೆ.
ತಾನು ಪರೀಕ್ಷೆ ನಡೆಸಿರುವ ಚಾಕೊಲೇಟ್ ಉತ್ಪನ್ನಗಳ ಮೂರನೇ ಒಂದರಲ್ಲಿ ಈ ಭಾರ ಲೋಹಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ.
ನಿಮ್ಮ ಉತ್ಪನ್ನಗಳಲ್ಲಿ ಈ ಲೋಹಗಳ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಅಮೆರಿಕದ ಅತ್ಯಂತ ದೊಡ್ಡ ಚಾಕೊಲೇಟ್ ತಯಾರಿಕಾ ಕಂಪೆನಿಗಳ ಪೈಕಿ ಒಂದಾಗಿರುವ ಹರ್ಶಿಗೆ ಅದು ಕರೆ ನೀಡಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.
ಡಾರ್ಕ್ ಚಾಕೊಲೇಟ್ ಬಾರ್‌ಗಳು, ಮಿಲ್ಕ್ ಚಾಕೊಲೇಟ್ ಬಾರ್‌ಗಳು, ಕೋಕೊ ಪುಡಿ, ಚಾಕೊಲೇಟ್ ಚಿಪ್ಸ್‌ಗಳು, ಬ್ರೌನೀ ಮತ್ತು ಚಾಕೊಲೇಟ್ ಕೇಕ್‌ಗಳು ಸೇರಿದಂತೆ ಏಳು ವಿಭಾಗಗಳ 48 ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ, 16 ಉತ್ಪನ್ನಗಳಲ್ಲಿ ಸೀಸ, ಕ್ಯಾಡ್ಮಿಯಮ್ ಅಥವಾ ಎರಡೂ ಲೋಹಗಳು ಹಾನಿಕಾರಕ ಮಟ್ಟಗಳಲ್ಲಿ ಪತ್ತೆಯಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ.
ಸೀಸ ಮತ್ತು ಕ್ಯಾಡ್ಮಿಯಮ್‌ಗಳನ್ನು ದೀರ್ಘ ಕಾಲ ಸೇವಿಸಿದರೆ ನರಮಂಡಲದ ಸಮಸ್ಯೆ, ರೋಗನಿರೋಧಕ ವ್ಯವಸ್ಥೆಯಲ್ಲಿ ಏರುಪೇರು ಮತ್ತು ಮೂತ್ರಪಿಂಡ ಹಾನಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರಬಹುದಾಗಿದೆ. ಈ ಅಪಾಯಗಳು ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಮತ್ತು ಎಳೆಯ ಮಕ್ಕಳನ್ನು ಹೆಚ್ಚಾಗಿ ಕಾಡುತ್ತವೆ.