ವಯನಾಡ್ ಭೂಕುಸಿತ | ತಮ್ಮ ಕುಟುಂಬಗಳನ್ನು ಕಳೆದುಕೊಂಡವರಿಗೆ ಭೂಮಿ ದಾನ ಮಾಡಲು ಮುಂದಾದ ಪಟ್ಟಣಂತಿಟ್ಟ ನಿವಾಸಿ

Update: 2024-08-04 13:13 GMT

 ಶಿಬು ಒರಿಕೊಂಪಿಲ್ | PC : thenewsminute.com

ವಯನಾಡ್ : ವಯನಾಡ್ ನ ಭೀಕರ ಭೂ ಕುಸಿತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಹಾಗೂ ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರಿಗೆ ಆಶ್ರಯ ತಾಣವನ್ನು ನಿರ್ಮಿಸಿಕೊಡಲು ಮುಂದಾಗುವ ಯಾವುದೇ ಸ್ವಯಂಸೇವಕ ಸಂಘಟನೆಗೆ ಒಂದು ಎಕರೆ ಭೂಮಿ ದಾನ ನೀಡುವುದಾಗಿ ಪಟ್ಟಣಂತಿಟ್ಟ ನಿವಾಸಿಯಾದ ಶಿಬು ಒರಿಕೊಂಪಿಲ್ ಎಂಬುವವರು ಪ್ರಕಟಿಸಿದ್ದಾರೆ.

ವಯನಾಡ್ ಭೀಕರ ದುರಂತದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಭೂ ಕುಸಿತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳು ಹಾಗೂ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರಿಗೆ ಸಮುದಾಯ ಭವನ ನಿರ್ಮಿಸಲು ನಾನು ಒಂದು ಎಕರೆ ಜಾಗವನ್ನು ದಾನವಾಗಿ ನೀಡುತ್ತಿದ್ದೇನೆ. ನಾನು ಈ ಭೂಮಿಯನ್ನು ಧಾರ್ಮಿಕ ಸಂಘಟನೆಗಳು ಅಥವಾ ಸ್ವಯಂಸೇವಕ ಸಂಘಟನೆಗಳಿಗೆ ನೀಡಲು ಬಯಸಿದ್ದೇನೆ. ಆದರೆ, ಅವರು ಈ ಬಗ್ಗೆ ಗಂಭೀರವಾಗಿರಬೇಕು ಹಾಗೂ ಅಗತ್ಯ ನಿಧಿಯನ್ನು ಹೊಂದಿರಬೇಕು. ಇಲ್ಲಿ ನಿರ್ಮಾಣವಾಗುವ ಸಮುದಾಯ ಭವನದಲ್ಲಿ ಆಶ್ರಯ ಪಡೆಯುವ ನಿರಾಶ್ರಿತರಿಗೆ ವಂಚನೆಯಾಗಬಾರದು ಎಂಬ ಕಾರಣಕ್ಕೆ ನಾವು ಈ ಸಮುದಾಯ ಭವನದ ಟ್ರಸ್ಟಿಗಳಾಗಿರಬೇಕು ಎಂಬುದೊಂದೇ ನಮ್ಮ ಷರತ್ತಾಗಿದೆ ಎಂದು ಶಿಬು TNM ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶಿಬು ಅವರ ಜಮೀನು ಪಟ್ಟಣಂತಿಟ್ಟುವಿನಲ್ಲಿನ ಚೆನ್ನೀರ್ಕರದ ಐದನೆಯ ವಾರ್ಡ್ ನಲ್ಲಿದ್ದು, ಚೀಕನಲ್ ಕೊಬ್ಬರಿ ಎಣ್ಣೆ ಗಿರಣಿಯಿಂದ ಸುಮಾರು ಒಂದು ಕಿಮೀ ದೂರವಿದೆ. ಸಮುದಾಯ ಭವನ ನಿರ್ಮಿಸಲು ಆಸಕ್ತಿ ಇರುವ ಹಾಗೂ ಅದಕ್ಕಾಗಿ ಅಗತ್ಯ ನಿಧಿಯನ್ನು ಹೊಂದಿರುವ ಯಾವುದೇ ಸಂಘಟನೆಯು ಶಿಬು ಅವರನ್ನು 08921367554 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು.

ಸೌಜನ್ಯ : thenewsminute.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News