ನೀವು ವ್ಯಾಸಂಗ ಮಾಡಿದ್ದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ: ನಿರ್ಮಲಾ ಸೀತಾರಾಮನ್‌ರನ್ನು ವ್ಯಂಗ್ಯವಾಡಿದ ಖರ್ಗೆ
Update: 2024-12-16 10:40 GMT
ಹೊಸದಿಲ್ಲಿ: ಸಂವಿಧಾನ ಚರ್ಚೆಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ನೀವು ಪದವಿ ಪಡೆದದ್ದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂದು ವ್ಯಂಗ್ಯವಾಡಿದರು. "ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರಜ್ಞರಾಗಿದ್ದರೂ, ಅವರ ಕೆಲಸ ಸರಿಯಿಲ್ಲ" ಎಂದೂ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
"ನನಗೂ ಕೂಡಾ ಹೇಗೆ ಓದಬೇಕೆಂದು ತಿಳಿದಿದೆ. ನಾನು ಮಹಾನಗರ ಪಾಲಿಕೆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆ. ನಿರ್ಮಲಾ ಸೀತಾರಾಮನ್ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ಅವರ ಇಂಗ್ಲಿಷ್ ಚೆನ್ನಾಗಿರುತ್ತದೆ, ಅವರ ಹಿಂದಿ ಚೆನ್ನಾಗಿರುತ್ತದೆ ಎಂಬುದು ಖಚಿತ. ಆದರೆ, ಅವರ ಕೆಲಸ ಸರಿಯಿಲ್ಲ" ಎಂದು ಅವರು ಛೇಡಿಸಿದರು.