ಅಡ್ಡೂರ್ ಸೆಂಟ್ರಲ್ ಕಮಿಟಿ ಮಹಾಸಭೆ: ಅಧ್ಯಕ್ಷರಾಗಿ ಎಂ ಎಸ್ ರಫೀಕ್ ಆಯ್ಕೆ ಪುನರಾಯ್ಕೆ
ದಮ್ಮಾಮ್: ಅಡ್ಡೂರು ಸೆಂಟ್ರಲ್ ಕಮಿಟಿಯ 2024-25ನೆಯ ಸಾಲಿನ ಮಹಾಸಭೆಯು ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಎಂ ಎಸ್ ರಫೀಕ್ ಅವರ ಅಧ್ಯಕ್ಷತೆಯಲ್ಲಿ ಅಲ್ ವಾದಿ ರೆಸಾರ್ಟ್ ಸಫ್ವಾ ದಮ್ಮಾಮ್ ನಲ್ಲಿ ದಿನಾಂಕ 23 ಫೆಬ್ರವರಿ ಶುಕ್ರವಾರದಂದು ನಡೆಯಿತು.
ಶರೀಫ್ ಗೋಳಿಪಡ್ಪು ಅವರ ಖಿರಾಅತ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದಮ್ಮಾಮ್ ಕಮಿಟಿಯು ಅಧ್ಯಕ್ಷರಾದ ನವಾಝ್ ತೋಕೂರು ಅವರು, ಆಗಮಿಸಿದ ಎಲ್ಲಾ ಏರಿಯಾ ಕಮಿಟಿ ಅಧ್ಯಕ್ಷರು, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು .
ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅವರು ವಾರ್ಷಿಕ ವರದಿ ಮಂಡಿಸಿದರು. ಲೆಕ್ಕ ಪರಿಶೋಧಕ ಖಲಂದರ್ ಗುತ್ತು ಅವರು ಮಂಡಿಸಿದ ವಾರ್ಷಿಕ ಹಣಕಾಸಿನ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ಕಮಿಟಿಯ ಏಳಿಗೆಗೆ ಶ್ರಮಿಸಿದವರನ್ನು ಸ್ಮರಿಸಿದ ಎಂ. ಎಸ್ ರಫೀಕ್ ಅವರು, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಳೆ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಕಮಿಟಿಯ ಸಾರಥಿಗಳು:
ಗೌರವಾಧ್ಯಕ್ಷರು :ಸಿದ್ದೀಕ್ KMT
ಅಧ್ಯಕ್ಷರು : ಎಂ ಎಸ್ ರಫೀಕ್
ಉಪಾಧ್ಯಕ್ಷರು : ಎನ್ ರಝಾಕ್ & ರಝಾಕ್ ಕೆಳಗಿನಕೆರೆ
ಪ್ರಧಾನ ಕಾರ್ಯದರ್ಶಿ : ಮನ್ಸೂರ್ ತೋಕೂರ್
ಜೊತೆ ಕಾರ್ಯದರ್ಶಿ: ಖಲಂದರ್ ಗುತ್ತು & ನವಾಝ್ ತೋಕೂರ್
ಖಜಾಂಚಿ :ಶಫೀಕ್
ಲೆಕ್ಕ ಪರಿಶೋಧಕ : ಎ ಎಸ್ ನೂರ್
ಸಲಹೆಗಾರರು : ಎ.ಪಿ ಮುಹಮ್ಮದ್, ಎ ಎಸ್ ರಿಝ್ವಾನ್ , ಇಬ್ರಾಹಿಂ ಪಾಂಡೆಲ್ .
ಎಲ್ಲಾ ಏರಿಯಾ ಕಮಿಟಿಯ 5 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.