ನೇತಾಜಿಗೆ ಸಂಘಪರಿವಾರ ಎಸಗಿದ ಮಹಾ ಮೋಸ

Update: 2016-02-04 18:12 GMT

ಭಾಗ -1

ಬ್ರಿಟಿಷರ ಆಡಳಿತವನ್ನು ಭಾರತದಲ್ಲಿ ಕೊನೆಗಾಣಿಸಿ ಅವರನ್ನು ದೇಶದಿಂದ ಓಡಿಸಬೇಕೆಂದು ಬಯಸಿದ್ದ ನೇತಾಜಿ ಸುಭಾಶ್ಚಂದ್ರಬೋಸ್‌ರ ಕುರಿತು ಹಿಂದೂತ್ವವಾದಿಗಳಿಗೆ ತುಂಬ ಅಭಿಮಾನವಿದೆ. ಆದರೆ, ಆರೆಸ್ಸೆಸ್‌ನ ರೂವಾರಿ ಕೂಡಾ ಆಗಿದ್ದ ಸಾವರ್ಕರ್‌ರ ನೇತೃತ್ವದ ಹಿಂದೂ ಮಹಾಸಭಾ- ನೇತಾಜಿಯವರ ಈ ಆಕಾಂಕ್ಷೆಗೆ ಹೇಗೆ ಮಹಾ ಮೋಸವನ್ನೆಸಗಿತು ಎನ್ನುವುದರ ಕುರಿತು ಇತಿಹಾಸ ಸ್ವಲ್ಪ ಮಟ್ಟಿಗೆ ಕುರುಡಾಗಿರುವುದಕ್ಕೆ ಕಾರಣವೇನು ಎಂಬುದು ಅಸ್ಪಷ್ಟ. ಈಗ ಲಭ್ಯವಿರುವ ಅನೇಕ ಸಮಕಾಲೀನ ದಾಖಲೆಗಳು ಇದಕ್ಕೆ ಪುಷ್ಟಿಯನ್ನೊದಗಿಸುತ್ತವೆ. ನೇತಾಜಿಯವರು ಬ್ರಿಟಿಷರನ್ನು ಓಡಿಸಿ ಭಾರತವನ್ನು ಸ್ವತಂತ್ರಗೊಳಿಸಲು ವಿದೇಶಿಯರ ಸಹಾಯವನ್ನು ಪಡೆದುಕೊಳ್ಳಲು ಯತ್ನಿಸುತ್ತಿದ್ದರು. ಇದರ ಮೂಲಕ ಭಾರತದ ಈಶಾನ್ಯ ಭಾಗದ ಮೇಲೆ ತಮ್ಮ ಆಝಾದ್ ಹಿಂದೂ ಪೌಜ್ ನಿಂದ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತು. ಆದರೆ ಇದನ್ನು ವಿಫಲಗೊಳಿಸಿದ್ದು ಸಾವರ್ಕರ್ ಬ್ರಿಟಿಷರಿಗೆ ನೀಡಿದ ಪೂರ್ಣ ಸೇನಾ ಸಹಕಾರ ಎಂಬುದು ಕಡಿಮೆ ಜನರಿಗೆ ಗೊತ್ತಿರುವ ವಿಷಯ. ಇದನ್ನು ಅರಿಯಬೇಕೆಂದರೆ ಆ ಕಾಲದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪ್ರಕಟಿಸಿದ ದಾಖಲೆಗಳನ್ನು ಓದಬೇಕಾಗುತ್ತದೆ.

ಆಗ ನಮಗೆ ಹೇಗೆ ಈ ಎರಡು ಸಂಘಟನೆಗಳು ನೇತಾಜಿಯವರ ವಿರುದ್ಧ ಕಾರ್ಯಾಚರಣೆ ನಡೆಸಿ ಬ್ರಿಟಿಷ್ ಸಹಾಯಕವಾಗಿದ್ದವು ಎಂಬುದು ಅರಿವಾಗುತ್ತದೆ. ಹಿಂದೂ ಮಹಾಸಭಾದ 23ನೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ಬಾಗಲ್ಪುರದಲ್ಲಿ ಸಾವರ್ಕರರು 1941 ರಲ್ಲಿ ಹೀಗೆ ನುಡಿದಿದ್ದರು: ದೇಶಾದ್ಯಂತ ಇರುವ ಹಿಂದೂ ಸಂಘಟನೆಗಳು ತಮ್ಮ ಗಮನವನ್ನು ಕೊಡಬೇಕಾದ ಮತ್ತು ತಮ್ಮ ಶಕ್ತಿಯನ್ನು ವ್ಯಯಿಸಬೇಕಾದ ಎರಡನೆ ಅತಿಮುಖ್ಯ ಸಂಗತಿ ಎಂದರೆ- ಅದು ಹಿಂದೂಗಳಲ್ಲಿ ಸೈನಿಕ ಶಕ್ತಿಯನ್ನು ಮೂಡಿಸುವುದು. ಈಗ ಯುದ್ಧವು ನಮ್ಮ ಕಾಲಬುಡಕ್ಕೆ ಬಂದು ತಲುಪಿದೆ. ಇದು ನಮಗೆಲ್ಲ ಒಂದು ಎಚ್ಚರಿಕೆಯೂ ಹೌದು. ಮತ್ತು ಅವಕಾಶ ಕೂಡಾ. ಹಾಗಾಗಿ ಹಿಂದೂ ಮಹಾಸಭಾದ ಪ್ರತಿಯೊಂದು ಹಳ್ಳಿಯ, ಮೂಲೆಯ ಶಾಖೆಗಳಲ್ಲಿಯೂ ಅದರ ಸೈನ್ಯಬಲ ಅಂದರೆ ಹೋರಾಡುವ ಬಣಗಳನ್ನು ರೂಪಿಸುವುದು ನಮಗೆ ಮುಖ್ಯವಾಗಿದೆ. ಮತ್ತು ನಮ್ಮೆಲ್ಲ ಕಾರ್ಯಕರ್ತರೂ ಹಿಂದೂಗಳನ್ನು ಸೇನೆ, ವೈಮಾನಿಕ ಮತ್ತು ನೌಕಾಪಡೆಗಳಿಗೆ ಸೇರುವಂತೆ ಹುರಿದುಂಬಿಸಬೇಕು. ಹಾಗೂ ಅವರನ್ನು ಯುದ್ಧೋಪಕರಣ ತಯಾರಿಕೆಯಲ್ಲಿಯೂ ತೊಡಗುವಂತೆ ಪ್ರಚೋದಿಸಬೇಕು. ಹಿಂದೂತ್ವದ ಪ್ರಚಾರಕರಾಗಿದ್ದ ಸಾವರ್ಕರರು ಯಾವ ಮಟ್ಟಿಗೆ ಬ್ರಿಟಿಷರಿಗೆ ಸಹಾಯ ಮಾಡಲು ಉತ್ಸುಕರಾಗಿದ್ದರು ಎನ್ನುವುದು ಅವರ ಈ ಮುಂದಿನ ಮಾತುಗಳಿಂದ ಸ್ವಷ್ಟವಾಗುತ್ತದೆ.

 ಭಾರತದ ರಕ್ಷಣೆಯ ದೃಷ್ಟಿಯಿಂದ ಹೇಳುವುದಾದರೆ, ಹಿಂದೂಗುಂಪುಗಳು ಒಂದಿನಿತೂ ಆಲೋಚಿಸದೆ, ಈ ಯುದ್ಧದಲ್ಲಿ ಪೂರ್ಣವಾಗಿ ಭಾರತ ಸರಕಾರದ ಜೊತೆಗೆ ಭಾಗಿಯಾಗಬೇಕಾಗುತ್ತದೆ. ಹಿಂದೂಗಳ ಹಿತದೃಷ್ಟಿಯಿಂದ ನಾವು ಸೇನೆ, ನೌಕಾಪಡೆ ಮತ್ತು ವೈಮಾನಿಕ ಪಡೆಗಳನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಸೇರಬೇಕಾಗುತ್ತದೆ. ಈ ಮೂಲಕ ನಾವು ಯುದ್ಧೋಪಕರಣಗಳನ್ನು ತಯಾರಿಸುವ ಪ್ರತಿಯೊಂದು ಉತ್ಪಾದನಾ ಕೇಂದ್ರಕ್ಕೂ ಪ್ರವೇಶ ಪಡೆಯಬಹುದು. ಈ ಯುದ್ಧಕ್ಕೆ ಜಪಾನ್‌ನ ಪ್ರವೇಶ ಬ್ರಿಟಿಷರ ವೈರಿಗಳನ್ನು ನಮ್ಮ ಕಾಲಬುಡಕ್ಕೇ ತಂದುನಿಲ್ಲಿಸಿದೆ. ಇಂಥ ಸಂದರ್ಭದಲ್ಲಿ ನಮಗೆ ಇಷ್ಟವಿರಲಿ ಬಿಡಲಿ ನಾವು ನಮ್ಮ ಮನೆ ಮತ್ತು ಸ್ಥಳವನ್ನು ಕಾಪಾಡಿಕೊಳ್ಳಲೇಬೇಕಾಗುತ್ತದೆ. ಇದಕ್ಕಿರುವ ದಾರಿ ಎಂದರೆ ನಾವು ಬ್ರಿಟಿಷರು ಮಾಡುತ್ತಿರುವ ಪ್ರಯತ್ನದ ಜೊತೆ ಕೈಜೋಡಿಸುವುದು. ಹಾಗಾಗಿ ಹಿಂದೂ ಮಹಾಸಭಾವು - ಮುಖ್ಯವಾಗಿ ಬಂಗಾಲ ಮತ್ತು ಅಸ್ಸಾಂ ನಲ್ಲಿ ಜನರನ್ನು ಸೈನ್ಯಕ್ಕೆ ಸೇರುವಂತೆ ಪ್ರಚೋದಿಸಬೇಕು. ಮತ್ತು ಇದನ್ನು ಆದಷ್ಟು ಶೀಘ್ರವಾಗಿ ಮಾಡಬೇಕು. ನಮ್ಮಲ್ಲಿ ಕಳೆದುಕೊಳ್ಳಲು ಒಂದು ಕ್ಷಣವೂ ಇಲ್ಲ, ಸಾವರ್ಕರರು ಹಿಂದೂಗಳು ಬ್ರಿಟಿಷ್ ಸೈನ್ಯದ ಎಲ್ಲ ವಿಭಾಗಗಳಲ್ಲಿಯೂ ಸಾಗರೋಪಾದಿಯಲ್ಲಿ- ಹಿಂದೂ ಸಂಘಟನೆಗಳ ಹೃದಯದಿಂದ ಸೇರಬೇಕು ಎಂದು ಕರೆಕೊಡುತ್ತ, ಹಾಗೆ ಮಾಡಿದ ಪಕ್ಷದಲ್ಲಿ-
 
 ಈ ಉದ್ದೇಶಕ್ಕೆ ಪೂರ್ಣವಾಗಿ ಬದ್ಧರಾದಾಗ ನಮಗೆ ಪರಿಸ್ಥಿತಿಯ ಪೂರ್ಣ ಲಾಭ ಒದಗುತ್ತದೆ. ಆಗ ಹಿಂದೂ ಕುಲವು ಪೂರ್ಣವಾಗಿ ಸೈನ್ಯದ ಬಲವನ್ನು ಪಡೆದುಕೊಳ್ಳುತ್ತದೆ ಮತ್ತು ಹಿಂದೂ ಸಂಘಟನೆಗಾರರ ಆಕಾಂಕ್ಷೆಯು ಸಾಧಿತವಾಗುತ್ತದೆ. ಮತ್ತು ಹಿಂದೂ ರಾಷ್ಟವು ಇನ್ನೂ ಹೆಚ್ಚು ಶಕ್ತಿಯುತವಾಗಿ ಮೇಲೇಳುತ್ತದೆ. ಯುದ್ಧದ ನಂತರದ ಸನ್ನಿವೇಶದಲ್ಲಿಯೂ ನಮಗೆ ಹೋಲಿಸಲಸಾಧ್ಯವಾದ ಮುನ್ನಡೆಯು ಸಾಧಿತವಾಗಿರುತ್ತದೆ: ಅದು ಆಂತರಿಕ ಹಿಂದೂ ನಾಗರಿಕ ಉತ್ಪಾತವೇ ಇರಲಿ ಅಥವಾ ಸಾಂವಿಧಾನಿಕ ಬಿಕ್ಕಟ್ಟೇ ಇರಲಿ ಅಥವಾ ಶಸ್ತ್ರ ಕ್ರಾಂತಿಯೇ ಇರಲಿ- ನಾವು ಆಗ ಅದಕ್ಕೆ ಪೂರ್ತಿಯಾಗಿ ಸನ್ನದ್ಧರಾಗಿರುತ್ತೇವೆ. ಬಾಗಲ್ಪುರದ ಸಮಾವೇಶದಲ್ಲಿ ಮಾತನಾಡುತ್ತ ಅವರು ಈ ಉದ್ದೇಶವನ್ನು ಇನ್ನಷ್ಟು ಒತ್ತಿ ಹೇಳಿದರು. ಸ್ಪಷ್ಟವಾಗಿಯೇ ತಮ್ಮ ಉದ್ದೇಶವನ್ನು ಸಮರ್ಥಿಸಿ ಹೇಳುತ್ತ ಅವರು ಬ್ರಿಟಿಷರ ಯುದ್ಧತಯಾರಿಗೆ ಕೈಜೋಡಿಸಬೇಕೆಂಬ ಅಭಿಪ್ರಾಯವನ್ನು ಸ್ಫುಟಗೊಳಿಸುತ್ತದೆ:
ಯುದ್ಧಾನಂತರ ಈ ದೇಶದ ಹಣೆಬರಹ ಏನೇ ಆಗಿರಲಿ, ಈಗಿನ ಸಂದರ್ಭವನ್ನು ಎಲ್ಲ ಬಗೆಯಿಂದಲೂ ಪರಿಗಣಿಸಿ ಆಲೋಚಿಸುವುದಾದರೆ, ಹಿಂದೂಗಳಿಗೆ ಇರುವ ಉತ್ತಮ ನಡೆ ಎಂದರೆ ಬ್ರಿಟಿಷರ ಜೊತೆ ಕೈಜೋಡಿಸುವುದು. ಇದರ ಬಗ್ಗೆ ಅನುಮಾನವೇ ಬೇಡ. ಹಿಂದೂಗಳ ಹಿತದೃಷ್ಟಿಯನ್ನು ಒಂದಿನಿತೂ ಬಿಟ್ಟುಕೊಡದೇ ಹಿಂದೂ ಸಂಘಟನೆಗಳು ತಮ್ಮ ಲಾಭಕ್ಕಾಗಿ ಇದನ್ನು ಮಾಡುವುದೆ ಅತ್ಯುತ್ತಮ ನಡೆಯಾಗಿದೆ ಹಾಗೂ ಈ ಮೂಲಕ ಭಾರತದ ರಕ್ಷಣೆಯೂ ಸಾಧ್ಯವಾಗುತ್ತದೆ.
 
ಬಾಗಲ್ಪುರದಲ್ಲಿ ಅವರು ಆಡಿದ ಮಾತುಗಳ ಮುಕ್ತಾಯವೂ ಅವರ ಈ ಅಭಿಪ್ರಾಯವನ್ನೇ ಸಾರಿ ಹೇಳುತ್ತವೆ. ಬ್ರಿಟಿಷರ ಪ್ರಯತ್ನಕ್ಕೆ ಅಡಿಯಾಳಾಗಿ ಸಹಾಯ ಮಾಡುವುದ ಮೂಲಕ ಭಾರತಕ್ಕೆ ಉತ್ತಮ ಭವಿತವ್ಯವಿದೆ ಎಂಬುದು ಅವರ ನಿಲುವಾಗಿತ್ತು. ರಾತ್ರಿಯ ಪೂರ್ಣ ಕತ್ತಲೆಯ ಕಾಲವು ಉದಿಸಿಬರುವ ಬೆಳಕಿಗೆ ಅತಿ ಸಮೀಪದ ಸಮಯವಾಗಿದೆ ಎಂಬ ಹೇಳಿಕೆಯು ನಿಜವೇ ಆಗಿದ್ದರೆ, ಅದು ಇವತ್ತಿನ ಸಂದರ್ಭದಲ್ಲಿ ಪೂರ್ಣವಾಗಿ ಸೂಕ್ತ ಉಕ್ತಿಯಾಗಿದೆ. ಪೂರ್ವದಿಂದ ನಮ್ಮ ಕಾಲಬುಡಕ್ಕೆ ಬಂದಿರುವ ಯುದ್ಧ ಮತ್ತು ಮುಂದೆ ಬಹುಷಃ ಪಶ್ಚಿಮದಿಂದಲೂ ನಮಗೆ ಒದಗಿ ಬರಬಹುದಾದ ಅಪಾಯ ಎರಡನ್ನೂ ಪರಿಗಣಿಸಿದಾಗ ಅದು ತಂದೊಡ್ಡುವ ಅಪಾಯವು ಗಾತ್ರ, ಪರಿಣಾಮ ಮತ್ತು ವಿಕೋಪಗಳೆಲ್ಲದರಲ್ಲಿಯೂ ಅತ್ಯಂತ ಭೀಕರವಾದುದಾಗಿದೆ. ಆದರೆ ಈ ಸನ್ನಿವೇಶವೇ ಹೊಸ ಜಗತ್ತು, ದಿನಗಳ ಉದಯಕ್ಕೂ ಕಾರಣವಾಗುತ್ತದೆ. ಕೇವಲ ಹೊಸತಲ್ಲ ಬದಲು ಉತ್ತಮವಾದ ನಾಳೆಯೂ ಇದರಿಂದಲೇ- ಈ ಗೊಂದಲದ ಜಗತ್ತಿಗೆ ಒದಗಿ ಬರಲಿದೆ. ಕಳೆದುಕೊಂಡ ಎಲ್ಲರೂ ಇದರ ಅಂತ್ಯದಲ್ಲಿ ಇದಕ್ಕಿಂತ ಹೆಚ್ಚಿನದನ್ನು ಪಡೆಯುವರು. ನಾವೂ ಸಹಸರಿಯಾದ ಕಾಲಕ್ಕಾಗಿ ಕಾಯುತ್ತ ನಮ್ಮೆಲ್ಲರ ಒಳಿತಿಗಾಗಿ, ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥಿಸೋಣ .
 
 ನೇತಾಜಿಯವರು ಶಸ್ತ್ರಕ್ರಾಂತಿಯ ಮೂಲಕ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪ್ರಯತ್ನಿಸುತ್ತಿದ್ದಾಗ- ಸಾವರ್ಕರರು ಹೀಗೆ ಬ್ರಿಟಿಷರನ್ನು ಬೆಂಬಲಿಸಿದ್ದರ ಹಿಂದೆ ಸ್ಪಷ್ಟವಾಗಿಯೇ ಉದ್ದೇಶಿಸಿ ರೂಪಿಸಲಾಗಿದ್ದ ಹಿಂದೂತ್ವವಾದಿ ವಿನ್ಯಾಸವಿತ್ತು. ಮದುರಾದಲ್ಲಿ ನಡೆದ 22ನೆ ಹಿಂದೂಮಹಾಸಭಾದ ಸಮಾವೇಶ(1940)ದಲ್ಲಿ ಅವರು ತಮ್ಮ ಆಯ್ಕೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿದ್ದರು. ಅದರ ಹಿಂದೆ ಈ ತರ್ಕವಿತ್ತು. ಅದು ಈ ಯುದ್ಧದಲ್ಲಿ ಬ್ರಿಟಿಷರು ಪೂರ್ತಿ ಸೋಲುವುದು ದುಸ್ಸಾಧ್ಯ. ಹಾಗೆ ಸೋತು ಭಾರತ ಸಾಮ್ರಾಜ್ಯದ ಜೊತೆಗೆ ನಮ್ಮೆಲ್ಲವನ್ನೂ ಜರ್ಮನ್ನರ ಕೈಗೆ ಒಪ್ಪಿಸುವುದು ಆಗದ ಮಾತು. ಹೀಗೆ ಅವರು ಆಡಿದ ಮಾತುಗಳಲ್ಲಿಯೇ ಸಾವರ್ಕರರಿಗೆ ಬ್ರಿಟಿಷರು ಸೋಲುವುದು ಸಾಧ್ಯವೇ ಇಲ್ಲ ಎನ್ನುವ ಅರಿವಿದ್ದದ್ದು ಗೊತ್ತಾಗುತ್ತದೆ. ಮದುರಾದಲ್ಲಿ ಅವರು ಮಾಡಿದ ಅಧ್ಯಕ್ಷಿಯ ಭಾಷಣದಲ್ಲಿಯೇ ಸಾವರ್ಕರರಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕುರಿತು ಇದ್ದ ಪೂರ್ಣ ಸಹಮತ ಅರಿವಿಗೆ ಬರುತ್ತದೆ. ಅವರು ನೇತಾಜಿಯವರು ಭಾರತವನ್ನು ವಿಮೋಚಿಸಲು ಯೋಜಿಸಿದ್ದ ಉಪಾಯವನ್ನೇ ತಿರಸ್ಕರಿಸುತ್ತಾರೆ. ಆಗ ಅವರು ಹೇಳಿದ ಮಾತುಗಳು ಇವು: ಕೇವಲ ನೈತಿಕ ಕಾರಣಗಳಿಂದ ಮಾತ್ರವೇ ಅಲ್ಲ, ಆದರೆ ನಿಜವಾದ ರಾಜಕೀಯ ಕಾರಣಗಳಿಗಾಗಿಯೂ ನಾವು ಕೇವಲ ಹಿಂದೂ ಮಹಾಸಭಾದ ಉದ್ದೇಶಗಳಿಗಾಗಿ ಮಾತ್ರವೇ ಕೆಲಸ ಮಾಡಬೇಕಾಗಿಲ್ಲ. ಈಗಿನ ಸಂದರ್ಭದಲ್ಲಿ ಅದರ ಹೊರತೂ ನಾವು ಯಾವುದೇ ಶಸ್ತ್ರಯುದ್ಧಕ್ಕೆ ಅಣಿಯಾಗಬೇಕಾಗಿದೆ.
 
ಬ್ರಿಟಿಷರಿಗೆ ಸೈನ್ಯ ಸಹಾಯ ಮಾಡಬೇಕಾದುದರ ಕುರಿತು ಅವರ ಮಾತುಗಳಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಅವರು ವಸಾಹತು ದೊರೆಗಳಿಗೆ ತಾವು ಕೊಡಲುಬಯಸುತ್ತಿರುವ ಸಹಾಯದ ಕುರಿತ ವಾದಸರಣಿಯನ್ನು ಸಮರ್ಥಿಸಿಕೊಳ್ಳಲು ಒಂದು ದಿಟ್ಟವಾದ ತರ್ಕವನ್ನು ಮುಂದೊಡ್ಡುತ್ತಾರೆ. ಅವರ ಪ್ರಕಾರ: ಈ ವಿಷಯ ಕುರಿತು ಹಿಂದೆ ಮುಂದೆ ಎಲ್ಲ ಬಗೆಯಲ್ಲು ಆಲೋಚಿಸಿದ ಬಳಿಕ ನನಗೆ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಈ ಯುದ್ಧವು ನಮಗೆ ಕೊಡಮಾಡಿರುವ ಅವಕಾಶವನ್ನು ನಾವು ಬಳಸಿಕೊಳ್ಲಲೇಬೇಕೆಂಬುದು ನನ್ನ ಅಭಿಪ್ರಾಯ.ಈ ಸಂದರ್ಭದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಬೇಕು. ಹಾಗೆ ಮಾಡುವುದರ ಮೂಲಕ ನಮ್ಮ ಜನಕ್ಕೆ ಯುದ್ಧ ಮತ್ತು ಕೈಗಾರಿಕಾ ತರಬೇತಿಯನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂಬುದು ನನ್ನ ನಿಲುವಾಗಿದೆ.
ಎರಡನೆ ಮಹಾಯುದ್ಧ ಆರಂಭವಾದ ಘಳಿಗೆಯಲ್ಲಿ ಬ್ರಿಟಿಷರು ತಮ್ಮ ಸೈನ್ಯಕ್ಕೆ ಹೊಸಬರನ್ನು ನೇಮಿಸಿಕೊಳ್ಳಲು ಅಣಿಯಾಗುತ್ತಿದ್ದಾಗ- ಸಾವರ್ಕರರ ನೇತೃತ್ವದಲ್ಲಿ ಹಿಂದೂಮಹಾಸಭಾವು ಅತಿಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಸೈನ್ಯಕ್ಕೆ ಸೇರಿಸಲು ಉದ್ಯುಕ್ತವಾಯಿತು. ಮಧುರಾದ ಸಮಾವೇಶದಲ್ಲಿಯೂ ಸಾವರ್ಕರರು ಅಲ್ಲಿ ಭಾಗಿಯಾಗಿದ್ದ ಆಮಂತ್ರಿತರಿಗೆ ಈ ಮಾತುಗಳನ್ನೇ ಹೇಳಿದರು:

ಸಹಜವಾಗಿಯೇ, ಹಿಂದೂ ಮಹಾಸಭಾವು ತನಗೆ ಮುಖ್ಯವಾಗಿದ್ದ ಒಲನೊಟವನ್ನು ಪರಿಗಣಿಸಿ ಮತು ರಾಜಕೀಯವನ್ನು ಆಲೋಚಿಸಿದಾಗ ಬ್ರಿಟಿಷರ ಯುದ್ಧ ಪ್ರಯತ್ನಕ್ಕೆ ಕೈಜೋಡಿಸುವುದು ಸೂಕ್ತವೆಂದು ತೋರಿತು. ಎಷ್ಟರಮಟ್ಟಿಗೆ ಇದು ಭಾರತದ ರಕ್ಷಣೆ ಮತ್ತು ಭಾರತದಲ್ಲಿ ಹೊಸ ಸೈನ್ಯವನ್ನು ತಯಾರಿಸಲು ಸಾಧ್ಯವಿದೆಯೋ ಅಷ್ಟರಮಟ್ಟಿಗೆ ನಮಗೆ ಇದರಲ್ಲಿ ಆಸಕ್ತಿಯಿದೆ. ಸಾಧಾರಣ ಭಾರತೀಯರಲ್ಲಿ ಈ ನಡೆಯ ಕುರಿತು ಇದ್ದ ಅಸಮಾಧಾನ ಸಾವರ್ಕರರಿಗೆ ತಿಳಿದಿರಲಿಲ್ಲ ಎಂದೇನೂ ಅಲ್ಲ. ಆದರೆ ಅವರು, ಹಿಂದೂ ಮಹಾಸಭಾವು ಬ್ರಿಟಿಷರ ಯುದ್ಧತಯಾರಿಯೊಂದಿಗೆ ಸೇರಲು ಹೊರಟಿರುವ ಕುರಿತು ಬಂದ ಎಲ್ಲ ಟೀಕೆಯನ್ನೂ ಬೀಸಿಹಾಕಿದರು.
ಭಾರತದ ಸಾರ್ವಜನಿಕರು ಒಂದು ರಾಜಕೀಯ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅವರು ಸಾಧಾರಣವಾಗಿ ತಿಳಿಯುವಂತೆ ಬ್ರಿಟಿಷರ ಆಸಕ್ತಿಗಳಿಗೆ ಭಾರತೀಯರ ಆಸಕ್ತಿಗಳು ಪೂರ್ತಿಯಾಗಿ ವಿರುದ್ಧವಾಗಿರುವುದರಿಂದ ಯಾವುದೇ ಹಂತದಲ್ಲೂ ಅವರೊಂದಿಗೆ ಕೈಜೋಡಿಸುವುದು ಶರಣಾಗತಿ ಎಂದೋ, ರಾಷ್ಟ್ರದ್ರೋಹವೆಂದೋ ಅಥವಾ ಬ್ರಿಟಿಷರ ಕೈಗೊಂಬೆಯಾಗುವುದೆಂದೋ ಜನರು ತಿಳಿದಿದ್ದಾರೆ. ಹಾಗೂ ಬ್ರಿಟಿಷರಿಗೆ ಸಹಾಯ ಮಾಡುವುದು ಎಲ್ಲಕಾಲದಲ್ಲೂ ದೂಷಣಾರ್ಹವೆಂಬುದೂ ಅನೇಕರ ಅಭಿಪ್ರಾಯವಾಗಿದೆ.

 ಒಂದುಕಡೆಯಲ್ಲಿ ಬೋಸರು ಜಪಾನಿಯರಿಗೆ ಮತ್ತು ಜರ್ಮನ್ನರಿಗೆ ಸಹಾಯ ಮಾಡುತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಲು ಪ್ರಯತ್ನಿಸುತ್ತಿದ್ದರೆ, ಸಾವರ್ಕರರು ತಮ್ಮ ವಸಾಹತು ದೊರೆಗಳೊಂದಿಗೇ ನೇರವಾಗಿ ಕೈಜೋಡಿಸಿ ಕುಳಿತಿದ್ದರು. ಇದು ನೇತಾಜಿಯವರಿಗೆ ಮಾಡಿದ ನೇರವಾದ ಮೋಸವಾಗಿತ್ತು. ಸಾವರ್ಕರರು ಹೆಗಲಿಗೆ ಹೆಗಲು ಕೊಟ್ಟು ನಿಂತ ಬ್ರಿಟಿಷರ ಸೈನ್ಯವೇ ಮುಂದೆ ಐ.ಎನ್.ಎ ಯ ಅನೇಕ ಧೈರ್ಯಶಾಲಿ-ವಿರ ಸೈನಿಕರನ್ನು ತರಿದು ಹಾಕಲು ಕಾರಣವಾಯಿತು ಎಂಬುದನ್ನು ನಾವು ಗಮನಿಸಬೇಕು. ತನ್ನ ಹಿಂದೂ ಮಹಾಸಭಾದ ಬೆಂಬಲಿಗರನ್ನು ಹುರಿದುಂಬಿಸುತ್ತ ಸಾವರ್ಕರರು ತಮ್ಮ ಮದುರಾದ ಭಾಷಣದಲ್ಲಿ ಜಪಾನಿನ ಸೈನ್ಯವು ಕ್ಷಣಕ್ಷಣಕ್ಕೂ ಮುನ್ನುಗ್ಗುತ್ತ ಬರುತ್ತಿದ್ದು, ಅದು ಏಶಿಯಾವನ್ನು ಯೂರೋಪಿನ ಕೈಗಳಿಂದ ಮುಕ್ತಮಾಡಲು ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ಬ್ರಿಟಿಷ್ ಸರಕಾರಕ್ಕೆ ನಾವು ಸಹಾಯ ಮಾಡಲು ಬಹಳ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು. ಹಾಗೆಯೇ ಬ್ರಿಟಿಷರ ಯುದ್ಧತಂತ್ರವನ್ನು ಹೊಗಳುತ್ತ ಸಾವರ್ಕರರು ಬ್ರಿಟಿಷರು ಎಂದಿನಂತೆಯೇ ಅತೀ ಬುದ್ಧಿವಂತರು. ಅವರು ಬಹಳ ಹಿಂದೆಯೆ ಈ ಕುರಿತು ಆಲೋಚಿಸಿ, ಒಂದೊಮ್ಮೆ ಜಪಾನ್ ನೊಡನೆ ಯುದ್ಧ ಆರಂಭವಾದರೆ, ಭಾರತವೇ ಈ ಯುದ್ಧತಯಾರಿಯ ಕೇಂದ್ರವಾಗಿರಬೇಕೆಂದು ಆಲೋಚಿಸಿದ್ದರು... ಒಂದಿಪ್ಪತ್ತು ಲಕ್ಷ ಜನ ಸೈನಿಕರ ತುಕಡಿಯೊಂದು ಈ ಯುದ್ಧಕ್ಕಾಗಿ ತಯಾರಾಗಬೇಕಾಗುತ್ತದೆ. ಭಾರತೀಯರ ನೇತೃತ್ವದಲ್ಲಿಯೇ ಇರುವ ಈ ಭಾರತೀಯ ಸೈನಿಕರ ತಂಡವು ಜಪಾನ್ ಯುದ್ಧದಲ್ಲಿ ಮುನ್ನುಗ್ಗುತ್ತ ನಮ್ಮ ಗಡಿಗಳನ್ನು ತಲುಪುವ ವೇಳೆಗೆ ತಯಾರಾಗಿರಬೇಕಾಗುತ್ತದೆ.
 
  ಮುಂದೆ ಐ.ಎನ್.ಎ ಯ ಅನೇಕ ಜನ ಸೈನಿಕರನ್ನು ಕೊಲ್ಲಲಿರುವ ಒಂದು ಸೇನಾತುಕಡಿಗೆ ಜನರನ್ನು ನೇಮಿಸಿಕೊಳ್ಳುವ ಪ್ರಯತ್ನವನ್ನು ಸಾವರ್ಕರರು ಮುಂದಿನ ವರ್ಷಗಳಲ್ಲಿ ಮಾಡಿದರು. ಮದುರಾದ ಹಿಂದೂಮಹಾಸಭಾದ ಸಮಾವೇಶವು ಒಂದು ನಿರ್ಧಾರವನ್ನು ಪ್ರಕಟಿಸುವುದರ ಮೂಲಕ ಅಂತ್ಯಗೊಂಡಿತು. ಆ ನಿರ್ಧಾರವೆಂದರೆ ಆದಷ್ಟೂ ಜನ ಹಿಂದೂಗಳನ್ನು ಸೈನ್ಯ, ನೌಕಾಪಡೆ ಮತ್ತು ವೈಮಾನಿಕದಳಗಳಿಗೆ ಸೇರ್ಪಡೆಯಾಗುವಂತೆ ನೋಡಿಕೊಳ್ಳುವುದು ಎಂದಾಗಿತ್ತು. ಅವರೇ ಹೇಳಿದ ಪ್ರಕಾರ ಕೇವಲ ಹಿಂದೂಮಹಾಸಭಾದ ಪ್ರಯತ್ನದಿಂದಾಗಿಯೇ ಸುಮಾರು 1 ಲಕ್ಷದಷ್ಟು ಹಿಂದೂಗಳು ಬ್ರಿಟಿಷ್ ಸೈನ್ಯಕ್ಕೆ ಕೇವಲ ಒಂದು ವರ್ಷದಲ್ಲಿಯೇ ಭರ್ತಿಯಾದರು. ವಿಚಿತ್ರವೆಂದರೆ, ಸಾವರ್ಕರರ ಈ ಎಲ್ಲ ರಾಷ್ಟ್ರವಿರೋಧಿ ಚಿಂತನೆಗಳ ಹೊರತಾಗಿಯೂ ಅವರನ್ನು ಅನೇಕರು ದೊಡ್ದ ದೇಶಭಕ್ತನೆಂದು ಘೋಷಿಸುತ್ತ ಆರಾಧಿಸುತ್ತಿರುವುದು. ಸ್ವಾತಂತ್ರಪೂರ್ವದ ಹಿಂದೂ ಮಹಾಸಭಾದ ಪ್ರಕಟಣೆಗಳನ್ನು ಓದುವುದರ ಮೂಲಕವೇ ಸಾವರ್ಕರರು ಮತ್ತು ಹಿಂದೂ ಮಹಾಸಭಾವು ಹೇಗೆ ಬ್ರಿಟಿಷರ ಸಹಾಯಕರಾಗಿ ಪರಿವರ್ತಿತರಾಗಿದ್ದರು ಎಂಬುದನ್ನು ಗುರುತಿಸಬಹುದು. 1941ರಲ್ಲಿ ಪ್ರಕಟವಾದ ಈ ಪುಸ್ತಕವೊಂದರ ಹೆಸರೇ ಬಹಳ ಉದ್ದವಿದೆ. ವಿನಾಯಕ ದಾಮೋದರ ಸಾವರ್ಕರರ ಪ್ರಪೊಗಾಂಡಾ: 1937 ಮತ್ತು 41 ರ ನಡುವೆ ಅಧ್ಯಕ್ಷ ಸಾವರ್ಕರರು ಮಾಡಿದ ಪ್ರಪೊಗಾಂಡಾ ಭಾಷಣಗಳ ಉಧೃತ ಭಾಗಗಳು ಎಂಬ ಈ ಪುಸ್ತಕವನ್ನು ಸಂಪಾದಿಸಿದವರು ಎ.ಎಸ್ ಭಿಡೆ. ಅವರು ಸಾವರ್ಕರರ ಆಪ್ತ ಹಿಂಬಾಲಕರಾಗಿದ್ದರು ಎಂಬುದನ್ನು ಅದರ ಮುನ್ನುಡಿಯೇ ಶೃತಪಡಿಸುತ್ತದೆ. ಆದರೆ, ಸಾವರ್ಕಕರು ಗಣನೆಗೆ ತೆಗೆದುಕೊಳ್ಳದಿದ್ದ ಇನ್ನೊಂದು ವಿಷಯವೆಂದರೆ ಯಾವುದೇ ಸ್ವಾಭಿಮಾನಿ ಹಿಂದೂವಿಗೂ ತಮ್ಮನ್ನು ಹೊಸಕಿ ಆಳಿದ ವಸಾಹತು ದೊರೆಗಳ ಸೈನ್ಯಕ್ಕಾಗಿ ದುಡಿಯುವುದು ಒಂದು ಅವಮಾನಕರ ಸಂಗತಿಯಾಗಿತ್ತು ಎಂಬುದನ್ನು ಅರಿಯದೆ ಹೋದದ್ದು. ಭಿಡೆಯವರ ಪುಸ್ತಕವೇ ಈ ಸಂಗತಿಯನ್ನೂ ದಾಖಲಿಸುತ್ತದೆ: ಮಹಾಸಭಾ ಮತ್ತು ಮಹಾಯುದ್ಧ ಎಂಬ ಪ್ರಣಾಳಿಕಾ ರೂಪದ ಟಿಪ್ಪಣಿಯಲ್ಲಿಯೂ ಸಾವರ್ಕರರು ಇದನ್ನು ಬರೆದಿದ್ದರು.
ಬಾರತವನ್ನು ಯಾವುದೇ ಸೈನ್ಯದ ಧಳಿಯಿಂದ ರಕ್ಷಿಸಿಕೊಳ್ಳುವ ಹೊಣೆಯು ಒಟ್ಟಿಗೇ ನಮ್ಮದೂ ಹಾಗೂ ಬ್ರಿಟೀಷರದ್ದೂ ಆಗಿದೆ. ಆದರೆ ದುರದೃಷ್ಟವಶಾತ್ ಈ ಕೆಲಸವನ್ನು ಸಧ್ಯದ ಪರಿಸ್ಥಿತಿಯಲ್ಲಿ ನಾವೊಬ್ಬರೇ ಯಾರ ಸಹಾಯವೂ ಇಲ್ಲದೇ ಮಾಡುವುದು ಅಸಾಧ್ಯವಾಗಿದೆ. ಹಾಗಾಗಿ, ಈ ಸಮಯದಲ್ಲಿ ಭಾರತ ಮತ್ತು ಬ್ರಿಟಿಶರ ನಡುವೆ ಒಂದು ಹೃದಯಪೂರ್ವಕ ಒಪ್ಪಂದ ಸಾಧ್ಯಮಾಡಿಕೊಳ್ಳುವುದು ಅಗತ್ಯವೂ ಸಾಂದರ್ಭಿಕವೂ ಆಗಿದೆ.
 
ಎರಡನೆ ಮಹಾಯುದ್ಧದ ಕಾಲದಲ್ಲಿ ಸುಬಾಶ್ಚಂದ್ರ ಬೋಸರು ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಸೋವಿಯತ್ ರಷ್ಯಾದಂತಹ ದೇಶಗಳಿಂದಲೂ ಸಹಾಯ ಪಡೆದು ಭಾರತವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಆದರೆ ಇಲ್ಲಿ ಸಾವರ್ಕರರು ಬ್ರಿಟಿಷರಿಗೆ ಅಂತಹ ಅಪಾಯಗಳಿಂದ ಸುರಕ್ಷಿತವಾಗಿರುವಂತೆ ಸಲಹೆಗಳನ್ನು ಕೊಡುತ್ತಿದ್ದರು. ನಾವು ಬ್ರಿಟಿಷರಿಗೆ ಈ ವಿಷಯದಲ್ಲಿ ಅವರು ಪೂರ್ಣ ಸಹಕಾರ, ಸಹಾಯಗಳನ್ನೂ ಕೊಡಲು ಮುಂದಾಗಿದ್ದನ್ನೂ ಕಾಣಬಹುದು. ಅವರ ಮುಖ್ಯ ಕಾಳಜಿ ಇದ್ದದ್ದು ಬ್ರಿಟಿಷರನ್ನು ಉಚ್ಚ್ಚಾಟಿಸುವುದರಲ್ಲಿ ಅಲ್ಲ; ಬದಲು ಮುಸ್ಲಿಮರನ್ನು ಓಡಿಸುವುದರಲ್ಲಿಯಾಗಿತ್ತು. ಅವರ ಈ ಮುಂದಿನ ಮಾತುಗಳಲ್ಲಿ ಸಾವರ್ಕರದು ಸತ್ಯಗಳನ್ನು ತಿರುಚಿ ಮುಸ್ಲಿಮ್ ವಿರೋಧಿ ಪರಿಭಾಷೆಯನ್ನು ರೂಪಿಸಿದ್ದನ್ನು ಕಾಣಬಹುದು: ಒಂದೊಮ್ಮೆ ರಷ್ಯಾವು ಇಂಗ್ಲೆಂಡ್‌ನ ವಿರುದ್ಧ ಯುದ್ಧಕ್ಕೆ ಮುಂದಾದರೆ ಅದು ಅಫ್ಘಾನಿಸ್ತಾನದ ಮೂಲಕ ಮುನ್ನುಗ್ಗುತ್ತದೆ.

ಅದು ಇನ್ನೂ ದೊಡ್ಡ ಅಪಾಯ. ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಮರು 1914ರ ಮಹಾಯುದ್ಧದ ಕಾಲದಲ್ಲಿ ಖಲೀಫತ್ ಚಳವಳಿಯ ಮೂಲಕ ನಮಗೆ ಕಲಿಸಿದ ಪಾಠವನ್ನು ನಾವು ಎಂದಿಗೂ ಮರೆಯಕೂಡದು. ಮುಂದೊಮ್ಮೆ ಭಾರತದ ಆಗ್ನೇಯ ದಿಕ್ಕಿನಿಂದ ಬರುವ ದಾಳಿಯು ಸಹಾ ಅದೇ ಬಗೆಯ ಅಪಾಯವನ್ನು ನಮಗೆ ಖಂಡಿತಾ ತಂದೊಡ್ಡುತ್ತದೆ. ಪಂಜಾಬ್, ಸಿಂಧ್ ಗಳಲ್ಲಿರುವ ಮುಸ್ಲಿಮ್ ಬುಡಕಟ್ಟು ಜನರು ಖಂಡಿತವಾಗಿ ಹಿಂದೂಗಳಿಗೆ ಮೋಸಗೈದು ಒಂದು ಅಖಂಡ ಮುಸ್ಲಿಮ್ ಸಾಮ್ರಾಜ್ಯದ ಕಲ್ಪನೆಯನ್ನು ಹೊತ್ತು ಮುಂಬರುತ್ತಾರೆ. ಹಾಗೆಯೇ ಅವರು ಬಲೂಚಿಸ್ತಾನದಿಂದ ಆರಂಭಗೊಂಡ, ದಿಲ್ಲಿ ಕಾಶ್ಮೀರದ ವರೆಗೆ ಹರಡಿದ ಒಂದು ಸ್ವತಂತ್ರ ಮುಸ್ಲಿಮ್ ರಾಷ್ಟ್ರವನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ. ಭಾರತದಲ್ಲಿ ಹರಡಿರುವ ಅನೇಕ ಜವಾಬ್ದಾರಿಯುತ ಮುಸ್ಲಿಮ್ ಸಂಘಟನೆಯಗಳು ತಮ್ಮ ಸಮಾವೇಶದಲ್ಲಿ ಪ್ರಕಟಿಸಿದ ನಿರ್ಧಾರಗಳಿಂದಲೇ ಇದು ನಮ್ಮ ಅರಿವಿಗೆ ಬರಬಲ್ಲದು. ಹಿಂದೂಗಳಿಗೆ ಒದಗಿ ಬರಬಹುದಾದ ಈ ಅಪಾಯವನ್ನು ಹಗುರವಾಗಿ ತೆಗೆದುಕೊಂಡು ಕಡೆಗಣಿಸುವುದು- ಈ ಮುಸ್ಲಿಮ್ ಸಂಘಟನೆಗಳಿಗೆ ಇರುವ ರಾಷ್ಟ್ರವಿರೋಧಿ ಭಾವನೆಗಳನ್ನು ಅರಿತುಕೊಂಡ ನಂತರವೂ ಸುಮ್ಮನಿರುವುದು- ಅಪಾಯಕಾರಿಯಾಗುತ್ತದೆ. ಈ ಬಗೆಯ ತುರ್ತು ಸಂದರ್ಭದಲ್ಲಿ ಬ್ರಿಟಿಷರೊಂದಿಗೆ ಸೇರಿ ತಮ್ಮ ದೇಶದ ಹಿತಾಸಕ್ತಿಯನ್ನು ಗಮನಕ್ಕೆ ತೆಗೆದುಕೊಂಡು ಹೋರಾಡುವುದು ನಿಜಕ್ಕೂ ಮುಖ್ಯವಾಗಿದೆ. ಎ.ಎಸ್.ಭಿಡೆಯವರ ಪುಸ್ತಕದಲ್ಲಿ ಹಿಂದೂ ಮಹಾಸಭಾವು ಅನೇಕ ಸಂಗತಿಗಳ ಕುರಿತು ತೆಗೆದುಕೊಂಡಿದ್ದ ಅಧಿಕೃತ ನಿಲುವುಗಳನ್ನು ದಾಖಲಿಸುತ್ತದೆ. ಅದರಲ್ಲಿಯೇ ನಮಗೆ ತಿಳಿದು ಬರುವುದೆಂದರೆ, ಸಾವರ್ಕರ್ ಮತ್ತು ಹಿಂದೂ ಮಹಾಸಭಾವು ಬ್ರಿಟಿಷರ ಸೈನ ಸೇಮಕಾತಿ ಸಮಿತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದವು ಎಂಬುದು. ಸಾವರ್ಕರರು ತಮ್ಮದೇ ಪದಗಳಲ್ಲಿ ಈ ಒಳ್ಳೆಯ ಬೆಳವಣಿಗೆಯ ಕುರಿತು ಹಿಂದೂ ಮಹಾಸಭಾದ ಗುಂಪುಗಳಿಗೆ ತಿಳಿಸುತ್ತಾರೆ: ಬ್ರಿಟಿಷರ ಸೈನ್ಯ ನೇಮಕಾತಿ ಮಂಡಳಿ ಮತ್ತು ಅಧಿಕಾರಿಗಳೇ, ಉದಾಹಾರಣೆಗೆ ಬಾಂಬೆ ವಿಭಾಗದಲ್ಲಿ, ಹಿಂದೂ ಮಹಾಸಭಾದಿಂದ ಆರಂಭಿಸಲ್ಪಟ್ಟ ಹಿಂದೂ ಸೈನ್ಯಮಂಡಳಿಯ ಜೊ

Writer - ಶಂಸುಲ್ ಇಸ್ಲಾಮ್

contributor

Editor - ಶಂಸುಲ್ ಇಸ್ಲಾಮ್

contributor

Similar News