ಕೈದಿಗಳಿಗಾಗಿ ಬ್ಯಾಂಕ್ ಖಾತೆ

Update: 2016-03-08 09:37 GMT

ಹಾರಾಷ್ಟ್ರದಲ್ಲಿ ಈಗ ಕೈದಿಗಳಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆೆಯಲಾಗುತ್ತಿದೆ. (ಇತ್ತೀಚೆಗಷ್ಟೇ ಬಿಡುಗಡೆಗೊಂಡ ಸಂಜಯ್ ದತ್‌ನ ಸಂಬಳವನ್ನು ಜೈಲ್‌ನ ತಿಜೋರಿಯಲ್ಲಿ ಇರಿಸಲಾಗಿತ್ತು.) ಹೆಚ್ಚುವರಿ ಡಿಜಿ (ಜೈಲ್ ವಿಭಾಗ) ಡಾ. ಭೂಷಣ್ ಉಪಾಧ್ಯಾಯ ಅವರು ಈ ಬಗ್ಗೆ ತಿಳಿಸುತ್ತಾ ನಾಗ್‌ಪುರ ಜೈಲ್‌ನಲ್ಲಿ 140 ಕೈದಿಗಳಿಗೆ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾದ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಈ ಎಲ್ಲಾ ಕೈದಿಗಳಿಗೆ ಎಟಿಎಂ ಕಾರ್ಡ್ ಕೂಡಾ ನೀಡಲಾಗಿದೆ. ಕ್ರಮೇಣ ರಾಜ್ಯದ ಇತರ ಜೈಲುಗಳ ಕೈದಿಗಳಿಗೂ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುವುದು ಎಂದಿದ್ದಾರೆ.

ಸದ್ಯ ಮಹಾರಾಷ್ಟ್ರದ ಜೈಲುಗಳಲ್ಲಿ ಸುಮಾರು ಹತ್ತು ಸಾವಿರ ಅಪರಾ (ಕನ್‌ವಿಕ್ಟ್)ಗಳು ಸಜೆ ಅನುಭವಿಸುತ್ತಿದ್ದಾರೆ. ವಿಚಾರಣಾೀನ ಕೈದಿಗಳ ಸಂಖ್ಯೆ ಹಲವು ಪಟ್ಟು ಹೆಚ್ಚಳವಿದೆ. ವಿಚಾರಣಾೀನ ಕೈದಿಗಳ ಖಾತೆಗಳನ್ನು ತೆರೆಯಲಾಗುವುದಿಲ್ಲ. ಯಾಕೆಂದರೆ ಅವರು ಜಾಮೀನಿನಲ್ಲಿ ಹೊರಬರಬಹುದಾಗಿದೆ. ಕನ್‌ವಿಕ್ಟ್ ಅಪರಾಗಳಿಗೆ ಜೈಲ್‌ನಲ್ಲಿ ಕೆಲಸ ನೀಡಲಾಗುತ್ತದೆ. ಈ ಕೆಲಸಕ್ಕೆ ಪ್ರತೀದಿನ ಸಂಬಳ ಕೊಡಲಾಗುತ್ತದೆ.ಆದರೆ ಹೊರಗಡೆ ಸಿಗುವಷ್ಟು ಸಂಬಳ ಕೊಡೋದಿಲ್ಲ.
 
 
 
ಟ್ರಾಮ್ ಓಡಾಟದ ಹಳಿಗಳು ಬೆಸ್ಟ್ ಮ್ಯೂಸಿಯಂನಲ್ಲಿ
 ಒಂದು ಕಾಲದಲ್ಲಿ ಮುಂಬೈಯ ರಸ್ತೆಗಳಲ್ಲಿ ಟ್ರಾಮ್ ಓಡಾಟ ಭಾರೀ ಸುದ್ದಿ ಮಾಡಿತ್ತು. ಮುಂಬೈಯ ಲ್ೈ ಲೈನ್ ಎಂದರೆ ಟ್ರಾಮ್ ಓಡಾಟ ಎನ್ನುತ್ತಿದ್ದರು ಆವಾಗ. ಇಂದು ಈ ಲ್ೈಲೈನ್ ರಸ್ತೆಯಲ್ಲಿ ಕಾಣಸಿಗುವುದಿಲ್ಲ. ಆದರೆ ಜಮೀನಿನ ಒಳಗಡೆ ಅದರ ಟ್ರ್ಯಾಕ್ (ಹಳಿ) ತನ್ನ ಅಸ್ತಿತ್ವ ಇನ್ನೂ ಅಲ್ಲಲ್ಲಿ ಉಳಿಸಿಕೊಂಡಿದೆ.
ಇದೀಗ ಈ ಟ್ರಾಮ್ ಹಳಿಗಳನ್ನು ಪತ್ತೆ ಹಚ್ಚಲು ಹಾಗೂ ಇವುಗಳನ್ನು ಬೆಸ್ಟ್‌ನ ಆಣಿಕ್ ಡಿಪೊದಲ್ಲಿ ನಿರ್ಮಿಸಲಾದ ಬೆಸ್ಟ್ ಮ್ಯೂಸಿಯಂನಲ್ಲಿ ಇರಿಸಲು ಸಿದ್ಧತೆ ನಡೆದಿದೆ.
ದಕ್ಷಿಣ ಮುಂಬೈಯ ಹುತಾತ್ಮ ಚೌಕ ಪರಿಸರದ ರಸ್ತೆಗಳ ಅಗೆತದ ಸಂದರ್ಭ ಇತ್ತೀಚೆಗೆ ಟ್ರಾಮ್ ಹಳಿಗಳು ಕಂಡು ಬಂತು. ಇವುಗಳನ್ನು ಮ್ಯೂಸಿಯಂನಲ್ಲಿ ಇಡುವಂತೆ ಆದೇಶ ಯುವಸೇನಾ ಪ್ರಮುಖ ಆದಿತ್ಯ ಠಾಕ್ರೆ ನೀಡಿದ್ದರು. ಈ ಆದೇಶದ ನಂತರ ಬೆಸ್ಟ್ ಸಮಿತಿ ಅಧ್ಯಕ್ಷ ಅರುಣ್ ದುಧ್‌ವಡ್ಕರ್ ಅವರು ಹುತಾತ್ಮ ಚೌಕ್‌ನ ನಿರೀಕ್ಷಣೆಗೈದು ಈ ಹಳಿಗಳನ್ನು ಬೆಸ್ಟ್‌ನ ಆಣಿಕ್ ಡಿಪ್ಪೋದ ಮ್ಯೂಸಿಯಂನಲ್ಲಿ ಇರಿಸುವಂತೆ ಸೂಚಿಸಿದರು.
 
 ಪೊಲೀಸರೇ, ನ್ಯಾಯಾಧೀಶರತ್ತ ಚಪ್ಪಲಿ ಎಸೆಯುವವರನ್ನು ಗಮನಿಸಿ

ನ್ಯಾಯಾಲಯದಲ್ಲಿ ತೀರ್ಪು ಬಂದ ನಂತರ ಕೆಲವೊಮ್ಮೆ ನ್ಯಾಯಾೀಶರ ಮೇಲೆ ಬೇಸರಗೊಂಡು ಅವರತ್ತ ಚಪ್ಪಲಿ ಎಸೆಯುತ್ತಿರುವ ಘಟನೆಗಳೂ ಈ ದಿನ ಮುಂಬೈಯಲ್ಲಿ ಆಗಾಗ ಕಾಣಿಸಿಕೊಳ್ಳಲಾರಂಭಿಸಿದೆ. ಈ ಘಟನೆಯ ನಂತರ ನ್ಯಾಯಾಲಯವು ಪೊಲೀಸರಿಗೆ ಈ ಬಗ್ಗೆ ಎಚ್ಚರವಾಗಿರಲು ಸೂಚಿಸಿದೆ. ನ್ಯಾಯಾಲಯದಲ್ಲಿ ಪೊಲೀಸ್ ಠಾಣೆಯಿಂದ ಮತ್ತು ಜೈಲ್‌ನಿಂದ ತರಲಾಗುವ ಕೈದಿಗಳ ಜೊತೆ ಪೊಲೀಸರೂ ಇರುತ್ತಾರೆ. ಇದೀಗ ಯಾವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ತರುತ್ತಾರೋ ಅವರು ನ್ಯಾಯಾಲಯದಲ್ಲಿ ನ್ಯಾಯಾೀಶರ ಮೇಲೆ ಆರೋಪಿಗಳು ಚಪ್ಪಲಿ ಎಸೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕು. ೆಬ್ರವರಿ ಮೂರನೇ ವಾರದಲ್ಲಿ ಇಂತಹ ಎರಡು ಘಟನೆಗಳು ನಡೆದ ನಂತರ ಈ ಎಚ್ಚರಿಕೆ ನೀಡಲಾಗಿದೆ.ತ್ತೀಚೆಗೆ ಕೊಲಬಾ ಪೊಲೀಸ್ ಠಾಣೆಯಿಂದ ಓರ್ವನನ್ನು ನಾಲ್ವರು ಸಹಚರರ ಜೊತೆಗೆ ಕೋರ್ಟ್‌ಗೆ ತರಲಾಗಿತ್ತು. ಈತನಿಗೆ ತಾನು ಬಿಡುಗಡೆಗೊಳ್ಳುವ ಆಶಾಭಾವನೆ ಇತ್ತು. ಆದರೆ ಆತನಿಗೆ ಅಂದು ಜಾಮೀನು ಸಿಗಲಿಲ್ಲ ಆತನ ಕಸ್ಟಡಿ ಅವ ವಿಸ್ತರಿಸಲಾಯಿತು. ಇದರಿಂದ ಸಿಟ್ಟುಗೊಂಡ ಆ ಆರೋಪಿ ನ್ಯಾಯಾೀಶರತ್ತ ಚಪ್ಪಲಿ ಎಸೆದ.ರೋಪಿಗಳನ್ನು ನ್ಯಾಯಾೀಶರ ಮುಂದೆ ಹಾಜರಿ ಪಡಿಸಿದ ನಂತರ ಜೊತೆಗಿದ್ದ ಪೊಲೀಸರು ತಮ್ಮ ಕೆಲಸಗಳಲ್ಲಿ ಮಗ್ನರಾಗುವುದು ಸಹಜ. ಅಲ್ಲಿ ಇಲ್ಲಿ ಮಾತನಾಡುತ್ತಾ ಇರುತ್ತಾರೆ. ಇದರ ಲಾಭವನ್ನು ಆರೋಪಿಗಳು ಬಳಸುತ್ತಾರೆ. ಇದೀಗ ಉನ್ನತ ಮಟ್ಟದ ಅಕಾರಿಗಳ ಮೂಲಕ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದ್ದು ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸುವಾಗ ಪೊಲೀಸರು ಎಚ್ಚರವಾಗಿರಬೇಕು ಎಂದು ಆದೇಶಿಸಲಾಗಿದೆ.
 
 
 ಫ್ಲೈ ಓವರ್ ಕೆಳಗಡೆ ಮಹಿಳಾ ಶೌಚಾಲಯ
ಮುಂಬೈ ಮಹಾನಗರದ ್ಲೆಓವರ್‌ಗಳ ಕೆಳಗಡೆ ಎಲ್ಲೇ ಸ್ಥಳ ಇರಲಿ, ಅಲ್ಲಿ ಮಹಿಳಾ ಶೌಚಾಲಯ ನಿರ್ಮಿಸುವುದಾಗಿ ಮನಪಾ ಕಮಿಷನರ್ ಅಜಯ್ ಮೆಹ್ತಾ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಅತ್ಯಕ ಶೌಚಾಲಯಗಳನ್ನು ನಿರ್ಮಿಸಲಾಗುವುದಂತೆ. ಈ ಬಗ್ಗೆ ಕಮಿಷನರ್ ಮೆಹ್ತಾ ಅವರು ಎಂ.ಎನ್.ಎಸ್.ನ ಮಹಾಕಾರ್ಯದರ್ಶಿ ಶಾಲಿನಿ ಠಾಕ್ರೆ ಅವರಲ್ಲಿ ಚರ್ಚಿಸಿದ್ದಾರೆ. ಈ ವರ್ಷ ಬಜೆಟ್‌ನಲ್ಲಿ ಮಹಿಳಾ ಆಟೋಮ್ಯಾಟಿಕ್ ಟಾಯ್ಲೆಟ್‌ಗಳಿಗಾಗಿ 5 ಕೋಟಿ ರೂ. ಮೊತ್ತ ಇರಿಸಲಾಗಿದೆ.
ಶಾಲಿನಿ ಠಾಕ್ರೆ ತಿಳಿಸಿದಂತೆ ಮುಂಬೈಯಲ್ಲಿ 4,500 ಮಹಿಳಾ ಶೌಚಾಲಯಗಳಿವೆ. ಇದರಲ್ಲಿ ಅಕಾಂಶ ನಗರ ಸೇವಕರು ಅಥವಾ ಶಾಸಕರ ಂಡ್‌ನಿಂದ ನಿರ್ಮಿಸಲಾಗಿದೆ. ಹೀಗಾಗಿ ಟಾಯ್ಲೆಟ್ ಕಟ್ಟಿಸಿದ ನಂತರ ಇದರ ಮೇಲ್ವಿಚಾರಣೆಗೆ ಯಾರೂ ಹೋಗುತ್ತಿಲ್ಲ. ಇದೀಗ ಶೌಚಾಲಯಗಳ ಸರ್ವೆ ನಡೆಸಲು ಕಮಿಷನರ್ ಮುಂದಾಗಿದ್ದಾರೆ.
 
 
 
ವಿಧಾನ ಮಂಡಲ ಅವೇಶನ: ಸ್ವಾತಂತ್ರ್ಯ ಪೂರ್ವದ 170 ಕಾನೂನುಗಳು ರದ್ದುಗೊಳ್ಳುವ ಸಂಭವ!
ಮಹಾರಾಷ್ಟ್ರದ ಆರ್ಥಿಕ ಬಜೆಟ್ ಮಾರ್ಚ್ 18 ರಂದು ಸದನದಲ್ಲಿ ಮಂಡಿಸಲಾಗುವುದು. ವಿಧಾನ ಮಂಡಲದ ಕಾರ್ಯಕಾರಿ ಸಮಿತಿಯ ಬೈಠಾಕ್‌ನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ವಿಧಾನಮಂಡಲದ ಬಜೆಟ್ ಅವೇಶನ ಮಾರ್ಚ್ 9 ರಿಂದ ಆರಂಭವಾಗಲಿದೆ. ಈ ಅವೇಶನ ಎಪ್ರಿಲ್ 13 ರ ತನಕ ನಡೆಯುವುದು. ರಾಜ್ಯದ ವಿತ್ತಮಂತ್ರಿ ಸುೀರ್ ಮುನ್‌ಗಂಟಿವಾರ್ ಮಾರ್ಚ್ 18 ರಂದು ವಿಧಾನ ಸಭೆಯಲ್ಲಿ 2016 -17 ರ ಬಜೆಟ್‌ನ್ನು ಮಂಡಿಸುವರು.
ವಿಧಾನ ಸಭೆಯಲ್ಲಿ ವಿಪಕ್ಷ ನೇತಾ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ವಿಧಾನ ಪರಿಷತ್‌ನ ವಿಪಕ್ಷ ನೇತಾ ಧನಂಜಯ ಮುಂಢೆ ಅವರು ವಿಧಾನ ಮಂಡಲದ ಅವೇಶನದ ಅವ ವಿಸ್ತರಿಸಬೇಕು. ಮಾರ್ಚ್ 9 ರಿಂದ ಎಪ್ರಿಲ್ 13 ರ ತನಕ ಸಮಯ ಬಹಳ ಕಡಿಮೆಯಾಗಲಿದ್ದು ಇದನ್ನು ಎಪ್ರಿಲ್ 30 ರ ತನಕ ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.ಅವೇಶನದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮಾಡಲಾದ ಹಲವು ಕಾನೂನುಗಳನ್ನು ರಾಜ್ಯ ಸರಕಾರ ರದ್ದು ಮಾಡಲು ನಿರ್ಣಯ ಕೈಗೊಂಡಿದೆ. ರಾಜ್ಯದ ವಿ ಮತ್ತು ನ್ಯಾಯ ವಿಭಾಗವು ಮಹಾರಾಷ್ಟ್ರ ಕೋಡ್‌ನ ವ್ಯಾಪ್ತಿಯಲ್ಲಿ ಉಪಯೋಗವಾಗದ ಇಂತಹ 170 ಕಾನೂನುಗಳ ಸೂಚಿ ತಯಾರಿಸಿದೆ. ಅವೇಶನದಲ್ಲಿ ರೈತರ ಆತ್ಮಹತ್ಯೆ, ಬರ ಪೀಡಿತ ಕ್ಷೇತ್ರಗಳ ನಿರ್ಲಕ್ಷ್ಯ, ಬೆಲೆಏರಿಕೆ, ಗೋವಿಂದ ಪಾನ್ಸಾರೆ, ಡಾ. ನರೇಂದ್ರ ದಾಭೋಲ್ಕರ್ ಹಂತಕರನ್ನು ಇನ್ನೂ ಪತ್ತೆ ಮಾಡದಿರುವುದು.... ಇವೆಲ್ಲವನ್ನು ವಿಪಕ್ಷ ಚರ್ಚೆಸಲಿದೆಯಂತೆ.
 
 
ಮುಂಬೈಯಲ್ಲಿ ಪ್ರತೀದಿನ 800 ವಾಹನ ಚಾಲಕರ ವಿರುದ್ಧ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ

ಮುಂಬೈಯ ವಿಭಿನ್ನ ರಸ್ತೆಗಳಲ್ಲಿ ವಾಹನ ಪಾರ್ಕ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲೂ ಪಾರ್ಕ್ ಮಾಡುತ್ತಾರೆ. ಕಳೆದ 2015ರ ನವೆಂಬರ್ ತನಕ ಮುಂಬೈ ಟ್ರಾಫಿಕ್ ಪೊಲೀಸರು ಇಂತಹ 2,90,703 ವಾಹನ ಚಾಲಕರಿಂದ 2,90,70,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ಪ್ರತೀ ದಿನ ರಸ್ತೆಬದಿ ನೋ ಪರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ ಸರಾಸರಿ ಸುಮಾರು 800 ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮುಂಬೈಯಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳದ ಅಭಾವ ಇರುವುದರಿಂದ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಆರ್.ಟಿ.ಐ ಯಲ್ಲಿ ಸಿಕ್ಕಿದ ಮಾಹಿತಿಯಂತೆ 2013 ರಲ್ಲಿ 2,39,592 ವಾಹನ ಚಾಲಕರ ಮೆಲೆ ಕ್ರಮ ಕೈಗೊಳ್ಳಲಾಗಿತ್ತು. ಇದರಲ್ಲಿ 2,35,28,940 ರೂಪಾಯಿ ಮತ್ತು 2014 ರಲ್ಲಿ 2,70,500 ವಾಹನ ಚಾಲಕರಿಂದ 2,85,72,400 ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು.
 
 
 
ಮುಖ್ಯಮಂತ್ರಿಗಿಂತಲೂ ಹೆಚ್ಚು ಸಂಬಳ ಪಡೆಯುವ ಸಿ.ಎಂ.ಓ ದ ಒ.ಎಸ್.ಡಿ.

ಸಿ.ಎಂ.ಒ. ಅರ್ಥಾತ್ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಹೊರಗಿನ ನೌಕರರನ್ನು ಆಫೀಸರ್ ಆನ್ ಸೋಶಿಯಲ್ ಡ್ಯೂಟಿ (ಒ.ಎಸ್.ಡಿ) ಯ ಹುದ್ದೆಯಲ್ಲಿ ನಿಯುಕ್ತಿಗೊಳಿಸುವ ಪ್ರಕರಣ ಈ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗುತ್ತಿದೆ. ಇಂದು ಸಿ.ಎಂ.ಒ.ದಲ್ಲಿ ಡ್ಯೂಟಿಯಲ್ಲಿರುವ ಎಂಟು ಒ.ಎಸ್.ಡಿ.ಯವರ ವೇತನದ ವಿಷಯ ವಿವಾದ ಸೃಷ್ಟಿಸಿದೆ.
ಕಾಂಗ್ರೆಸ್‌ನ ಆರೋಪವೇನೆಂದರೆ ಮುಖ್ಯಮಂತ್ರಿಯವರು ಎಂಟು ಹೊರಗಿನ ಜನರನ್ನು ಒ.ಎಸ್.ಡಿ. ಇರಿಸಿದ್ದಾರೋ ಅವರಿಗೆ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಿಂತಲೂ ಹೆಚ್ಚು ವೇತನ ನೀಡಲಾಗುತ್ತಿದೆಯಂತೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಭಿನ್ನ ವಿಭಾಗಗಳ ಪ್ರಧಾನ ಕಾರ್ಯದರ್ಶಿಗಳ ವೇತನ ಕೂಡಾ ಸಿ.ಎಂ.ಒ.ದ ಒ.ಎಸ್.ಡಿ.ಗಿಂತ ಕಡಿಮೆ ಇದೆಯಂತೆ. ರಾಜ್ಯ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್‌ರು ಸುದ್ದಿಗೋಷ್ಠಿಯಲ್ಲಿ ಇದನ್ನು ಹೇಳಿದ್ದಾರೆ.
ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಹೊರಗಿನ ನೌಕರರನ್ನು ಇರಿಸಿದ್ದು ಅವರೆಲ್ಲ ಸರಕಾರಿ ನೌಕರರಿಗೆ ಕಿರಿಕಿರಿ ಆಗುತ್ತಿದ್ದಾರೆ. ಅವರು ಪ್ರತೀ ವಿಭಾಗದ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾಳೆಯ ದಿನ ಏನಾದರೂ ತಪ್ಪಾದರೆ ಅದರ ಎಲ್ಲಾ ಜವಾಬ್ದಾರಿ ಸರಕಾರಿ ನೌಕರರ ಮೇಲೆ ಹಾಕಲಾಗುತ್ತದೆ. ಮಂತ್ರಿಗಳಿಗೆ ತಮ್ಮ ತಮ್ಮ ವಿಶೇಷ ಜನರ ಜೊತೆಗೆ ಕೆಲಸ ಮಾಡಬೇಕು ಎಂದಾದರೆ ಸರಕಾರಿ ಪ್ರಶಾಸನಿಕ ಅಕಾರಿಗಳ ಆಯ್ಕೆ ಮಾಡುವ ಸಂಸ್ಥೆ ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಶನ್‌ನ್ನು ಬಂದ್ ಮಾಡುವುದು ಒಳಿತಲ್ಲವೇ...? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.ರ್.ಟಿ.ಐ. ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿಹಕ್ಕು ಕಾನೂನಿನಲ್ಲಿ ಈ ಮಾಹಿತಿ ಪಡೆದಿದ್ದು ಬಹಿರಂಗ ಗೊಳಿಸಿದ್ದಾರೆ. ಅನಂತರ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಇದು ಹಿಂದಿನ ಸರಕಾರದಲ್ಲೂ ಇತ್ತು. ಕಾಂಗ್ರೆಸ್ -ಎನ್.ಸಿ.ಪಿ. ಸರಕಾರದಲ್ಲೂ 19 ಜನ ಹೊರಗಿನ ಸಿಬ್ಬಂದಿಯನ್ನು ನಿಯುಕ್ತಿ ಮಾಡಿತ್ತು ಎಂದಿದ್ದಾರೆ.ದರೆ ಆವಾಗಿನ ಸಂಬಳ 30 ರಿಂದ 35 ಸಾವಿರ ರೂ. ಇತ್ತು. ಆದರೆ ಈಗಿನ ಸರಕಾರ ಲಕ್ಷ ರೂಪಾಯಿ ಸಂಬಳ ನೀಡುತ್ತಿರುವುದೂ ಬೆಳಕಿಗೆ ಬಂದಿದೆ.
 
 
2018 ರೊಳಗೆ ಸಮುದ್ರದಲ್ಲಿ ಶಿವಾಜಿ ಸ್ಮಾರಕ ರೆಡಿಯಂತೆ
ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಾಣದ ಕನಸು 2018 ರೊಳಗೆ ಸಾಕಾರಗೊಳ್ಳಬಹುದು. ಈ ಬಗ್ಗೆ ಸಲಹಾ ಸಮಿತಿ ನಿಯುಕ್ತಿಗೊಳಿಸಲು ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್‌ರ ಅಧ್ಯಕ್ಷತೆಯಲ್ಲಿ ರಚಿಸಿದ ಉಚ್ಚಸ್ತರದ ಬೈಠಕ್‌ನಲ್ಲಿ ನಿರ್ಣಯಿಸಲಾಗಿದೆ. ಮುಖ್ಯಮಂತ್ರಿಯವರ ಸರಕಾರಿ ನಿವಾಸ ವರ್ಷಾದಲ್ಲಿ ನಡೆದ ಬೈಠಕ್‌ನಲ್ಲಿ ಪ್ರಮುಖ ಮಂತ್ರಿಗಳು ಉಪಸ್ಥಿತರಿದ್ದರು.
ಶಿವಾಜಿ ಮಹಾರಾಜರ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಿಸಲು ್ರಾನ್ಸ್‌ನ ಕಂಪೆನಿ ಇಜೀಸ್‌ನ್ನು ಸಲಹೆಗಾರನ ರೂಪದಲ್ಲಿ ನಿಯುಕ್ತಿಗೊಳಿಸಲಾಗಿದೆ. ಈ ಕಂಪೆನಿಗೆ ಪ್ರತಿಮೆಯ ಪ್ರಕಲ್ಪಕ್ಕಾಗಿ ಸಲಹೆ ನೀಡುವುದಕ್ಕೆ 83.73 ಕೋಟಿ ರೂಪಾಯಿ ಮೊತ್ತವನ್ನು ಸರಕಾರದ ವತಿಯಿಂದ ನೀಡಲಾಗುವುದು. ವ್ಯವಸ್ಥಾಪನಾ ಸಲಹೆಗಾರ ಸಮಿತಿಗಾಗಿ ನಾಲ್ಕು ಕಂಪೆನಿಗಳು ಟೆಂಡರ್ ತುಂಬಿಸಿದ್ದವು. ಇದರಲ್ಲಿ ಅತಿಕಡಿಮೆ ಮೊತ್ತ ಇಜೀಸಿ ಕಂಪೆನಿ ಕಾಣಿಸಿತ್ತು. ಛತ್ರಪತಿ ಶಿವಾಜಿ ಮಹಾರಾಜನ ಪ್ರತಿಮೆ 192 ಮೀಟರ್ ಎತ್ತರ ಇರುವುದು ಮತ್ತು 42 ಎಕ್ರೆಯಲ್ಲಿ ಸ್ಮಾರಕದ ಕ್ಷೇತ್ರವಿರುವುದು. ಈ ಅಂತಾರಾಷ್ಟ್ರೀಯ ಸ್ಮಾರಕದಲ್ಲಿ ಶಿವಾಜಿಕಾಲದ ಚಿತ್ರಣಗಳ ನಿರ್ಮಾಣ ಮಾಡಲಾಗುವುದು. ಶಿವಾಜಿ ಮಹಾರಾಜನ ಸ್ಮಾರಕದ ಭೂಮಿಪೂಜೆ ಎಪ್ರಿಲ್ 20 ರಿಂದ ಮೇ 10 ರ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಮಾಡಲಾಗುವುದು. ಸ್ಮಾರಕಕ್ಕಾಗಿ 14 ವಿಭಾಗಗಳಿಂದ ಅನುಮತಿ ಪಡೆಯಲಾಗಿದೆ.
ಸರಕಾರದ ಗುರಿ 2018 ರೊಳಗೆ ಶಿವಾಜಿ ಮಹಾರಾಜರ ಸ್ಮಾರಕ ತಯಾರಾಗಲಿದ್ದು 2019 ರಲ್ಲಿ ಸ್ಮಾರಕದ ಉದ್ಘಾಟನೆ ಮಾಡಲಾಗುವುದಂತೆ.
 
 

ಉದ್ಧವ್ ಮತ್ತು ರಾಜ್ ಠಾಕ್ರೆಯವರ ಮರಾಠಿ ಭಾಷಾ ದಿನ
ಮರಾಠಿ ಭಾಷಾ ದಿನವನ್ನು ಈ ಬಾರಿ ಮುಂಬೈಯಲ್ಲಿ ೆ. 27 ರಂದು ಅದ್ದೂರಿಯಾಗಿಯೇ ಆಚರಿಸಿದರು. ಇವತ್ತು ಮರಾಠಿ ಭಾಷಾ ದಿನವಾದರೆ ನಿನ್ನೆ ಏನಿತ್ತು? ನಾಳೆ ಏನು? ಎಂದೇ ಉದ್ಧವ್ ಠಾಕ್ರೆ ಅಂದು ಕೇಳಿದ್ದರು. ಶಿವಸೇನೆಯ ಸ್ವರ್ಣ ಮಹೋತ್ಸವ ವರ್ಷದಲ್ಲಿ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಆಯೋಜಿಸಿದ ಮರಾಠಿ ಭಾಷಾ ದಿವಸದ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಮರಾಠಿ ಭಾಷೆ ಸಾಧು - ಸಂತರ ಭಾಷೆ ಆಗಿದೆ ಎಂದರು.್ಞಾನಪೀಠ ಪುರಸ್ಕಾರ ವಿಜೇತ, ಕವಿಶ್ರೇಷ್ಠ, ಕುಸುಮಾಗ್ರಜ ಅವರ ಜನ್ಮದಿನವನ್ನು ಮರಾಠಿ ಭಾಷಾ ದಿವಸ ಎಂದು ಆಚರಿಸಲಾಗುತ್ತದೆ. ಅಂದು ವೇದಿಕೆಯಲ್ಲಿ ಪ್ರಸಿದ್ಧ ತಬಲಾವಾದಕ ಜಾಕಿರ್ ಹುಸೈನ್ ಕೂಡಾ ಇದ್ದರು. ನ್ನೊಂದೆಡೆ ಮರಾಠಿ ಭಾಷಾ ದಿವಸದ ಪ್ರಯುಕ್ತ ಮಟಾ ಮೈಲ್‌ನ್ನು ಪುಣೆಯಲ್ಲಿ ಉದ್ಘಾಟಿಸಿದ ಮನಸೇ ಅಧ್ಯಕ್ಷ ರಾಜ್‌ಠಾಕ್ರೆ ಅವರಿಗೆ ನಿಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರಲ್ಲ? ಅಂತ ಪ್ರಶ್ನೆ ಹಾಕಲಾಗಿತ್ತು. ಅದಕ್ಕೆ ರಾಜ್‌ಠಾಕ್ರೆ ಉತ್ತರಿಸುತ್ತಾ ಬಾಳಾ ಸಾಹೇಬ್ ಠಾಕ್ರೆ ಮತ್ತು ನನ್ನತಂದೆ ಶ್ರೀಕಾಂತ ಠಾಕ್ರೆ ಅವರು ಕೂಡಾ ಇಂಗ್ಲಿಷ್‌ನಲ್ಲೇ ಓದಿದ್ದು. ಇಬ್ಬರೂ ಓರಿಯಂಟಲ್ ಸ್ಕೂಲ್‌ನ ವಿದ್ಯಾರ್ಥಿಗಳಾಗಿದ್ದರು. ತನ್ನ ಮಕ್ಕಳಿಗೆ ಶಿಕ್ಷಣ ಇಂಗ್ಲಿಷ್‌ನಲ್ಲಿ ನಿಜ. ಆದರೆ ಸಂಸ್ಕಾರ ಮರಾಠಿಯಲ್ಲಿ ಎಂದರು. ನಮ್ಮ ಆಂದೋಲನದಿಂದಾಗಿ ಇಂದು ರೈಲ್ವೆ ಭರ್ತಿಯ ಜಾಹೀರಾತು ಮರಾಠಿ ಪತ್ರಿಕೆಗಳಲ್ಲಿ ಬರುತ್ತಿವೆ. ಮಾತೃ ಭಾಷೆಯಲ್ಲಿ ಪರೀಕ್ಷೆ ಪಡೆಯಲಾಗುತ್ತಿದೆ. 1400 ಮರಾಠಿ ಯುವಕ ್ಫಯುವತಿಯರಿಗೆ ನೌಕರಿ ಸಿಕ್ಕಿದೆ ಎನ್ನುತ್ತಾ ಮರಾಠಿಗಾಗಿ ಪ್ರತೀದಿನ ಆಂದೋಲನ ಮಾಡುವ ಅಗತ್ಯವಿಲ್ಲ. ಹಾಗಿದ್ದರೂ ಮತ್ತೆ ಮರಾಠಿಗಾಗಿ ಆಂದೋಲನ ಮಾಡಬೇಕಾದ ಸಂದರ್ಭ ಬರುತ್ತಿದೆಯೇನೋ..... ಎಂದು ಈಗಿನ ಸರಕಾರದ ಹೆಸರು ಹೇಳದೆ ಟಿವಿ ಪ್ರಶ್ನೆಗಳಿಗೆ ಉತ್ತರಿಸಿದರು.ಘಿಚ್ಟ* * * * * * * * * * * * * * * *ನ್‌ಲೈನ್‌ನಲ್ಲಿ ರತ್ನಗಿರಿ ಹಾಪುಸ್
ರತ್ನಗಿರಿಯ ಪ್ರಸಿದ್ಧ ಹಾಪುಸ್ ಮಾವಿನ ಹಣ್ಣು ಆನ್‌ಲೈನ್‌ನಲ್ಲಿ ಈ ಬಾರಿಯೂ ಉಪಲಬ್ದವಿದೆ. ಉತ್ಪಾದಕರು ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವುದರಿಂದ ಇಲ್ಲಿ ಮಧ್ಯವರ್ತಿಗಳ ಕಾಟವಿಲ್ಲ. ಉತ್ಪಾದಕರು ಈ ದಿನಗಳಲ್ಲಿ ವಾಟ್ಸ್‌ಅಪ್ ಮೊಬೈಲ್ ನಂಬರ್ ನೀಡುತ್ತಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ರತ್ನಗಿರಿಯ ಕೆಲವು ರೈತರು ಒಟ್ಟು ಸೇರಿ ವೆಬ್‌ಸೈಟ್ ಮತ್ತು ವಾಟ್ಸ್‌ಅಪ್‌ನ್ನು ಆರಂಭಿಸಿದ್ದಾರೆ. ಹಾಪುಸ್‌ನ ಅಸಲಿ ಸೀಸನ್ ಎಪ್ರಿಲ್‌ನಲ್ಲಿ ಆರಂಭವಾಗಲಿದೆ. ಆದರೆ ಮಾರಾಟ ಪ್ರಕ್ರಿಯೆ ಈಗಾಗಲೇ ಶುರು ಮಾಡಿದ್ದಾರೆ.ನ್ನೊಂದೆಡೆ ವಿದೇಶಿ ಮಾರುಕಟ್ಟೆಯಲ್ಲೂ ಕೊಂಕಣದ ಹಾಪುಸ್‌ಗೆ ಬೇಡಿಕೆ ಬಂದಿದೆ. ಮಹಾರಾಷ್ಟ್ರ ರಾಜ್ಯ ಕೃಷಿ ಬೋರ್ಡ್ ಕೂಡಾ ತನ್ನ ತಯಾರಿ ಪೂರ್ಣಗೊಳಿಸಿದೆ. ವಿದೇಶಗಳ ಹೊಸ ಮಾರುಕಟ್ಟೆಗಳಿಗೆ ತಲುಪಿಸಲು ಕಂಟೇನರ್ ಕಾರ್ಪೋರೇಶನ್ ಆ್ ಇಂಡಿಯಾ ಕೂಡಾ ತನ್ನ ಸಹಕಾರ ನೀಡಲು ಮುಂದೆ ಬಂದಿದೆ. ಈ ಸೀಸನ್‌ನ ಆರಂಭದಲ್ಲಿ 500 ಟನ್ ಹಾಪುಸ್ ಮಾವಿನ ಹಣ್ಣುಗಳನ್ನು ರ್ತು ಮಾಡುವ ಗುರಿ ಇರಿಸಲಾಗಿದೆ.ಘಿಚ್ಟ* * * * * * * * * * * * * * * ಬೆಕ್ಕುಗಳಿಗೂ ನಸ್‌ಬಂದೀ
ಮುಂಬೈ ಮಹಾನಗರದಲ್ಲಿ ಶ್ವಾನಗಳ ಹೆಚ್ಚಿದ ಸಂಖ್ಯೆ ಭಾರೀ ಕಿರಿಕಿರಿ ಹುಟ್ಟಿಸುತ್ತಿದ್ದು ಅವುಗಳಿಗೆ ನಸ್‌ಬಂದೀ ಮಾಡಲಾಗುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಇದೀಗ ಮುಂಬೈ ಮಹಾನಗರದಲ್ಲಿ ಬೆಕ್ಕುಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಇವುಗಳಿಗೆ ನಸ್‌ಬಂದೀ ಮಾಡುವ ಕುರಿತು ಯೋಚಿಸಲಾಗುತ್ತಿದೆ.
ಕೆಲವು ಪ್ರಾಣಿದಯಾ ಸಂಘಗಳ ಕಾರಣ ಶ್ವಾನಗಳನ್ನು ಕೊಲ್ಲುವ ಬದಲು ಅವುಗಳಿಗೆ ನಸ್‌ಬಂದೀ ಕಾರ್ಯಾಚರಣೆ ಮೂಲಕ ಅವುಗಳ ಸಂಖ್ಯೆ ಕಡಿಮೆ ಮಾಡಲು ಯತ್ನಿಸಲಾಗುತ್ತಿದೆ. ಆದರೆ ಈಗ ಬೆಕ್ಕುಗಳ ಹೆಚ್ಚಿದ ಸಂಖ್ಯೆಗಳ ದೂರುಗಳೂ ಬರುತ್ತಿದ್ದು ಅವುಗಳಿಗೂ ನಸ್‌ಬಂದೀ ಮಾಡುವ ಕುರಿತು ಮಹಾನಗರ ಪಾಲಿಕೆ ಯೋಚಿಸಿದೆ. ಮನಪಾ ನಸ್‌ಬಂದೀ ಯೋಜನೆಯಲ್ಲಿ ಬೆಕ್ಕುಗಳನ್ನೂ ಸೇರಿಸುವ ಕುರಿತಂತೆ ಮನಪಾದ ಎಲ್ಲಾ ಪಾರ್ಟಿಗಳ ಗ್ರೂಪ್‌ಲೀಡರ್‌ಗಳ ಒಪ್ಪಿಗೆಯನ್ನು ಪಡೆದಿದೆ. ಬೆಕ್ಕುಗಳೂ ಒಂದು ಸಲಕ್ಕೆ ನಾಲ್ಕೆದು ಮರಿಗಳಿಗೆ ಜನ್ಮ ನೀಡುತ್ತಿರುವುದೇ ಈ ದೃಶ್ಯಕ್ಕೆ ಕಾರಣವಾಗಿದೆಯಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News