ವಸ್ತ್ರ ಸಂಹಿತೆಗೆ ಇತಿ ಮಿತಿ ಇರಲಿ
ಕೆಲವು ಶಾಲಾ ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಕಂಪೆನಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಸಮವಸ್ತ್ರದ ಹೆಸರಿನಲ್ಲಿ ವಸ್ತ್ರ ಸಂಹಿತೆ ಇರುತ್ತದೆ. ಶಾಲೆ ಕಾಲೇಜುಗಳಲ್ಲಿ ಶಿಸ್ತಿನ ಸಂಗಡ ಮಕ್ಕಳಲ್ಲಿ ಸಮಾನತೆಯ ಭಾವವನ್ನು ಮೂಡಿಸಲು ಮತ್ತು ಮೇಲು-ಕೀಳು, ಬಡವ- ಬಲ್ಲಿದ ಎನ್ನುವ ಭೇದ ಭಾವವನ್ನು ಅಳಿಸಿಹಾಕಲು ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ. ಉಳಿದ ಕಡೆ ಸಾಮಾನ್ಯವಾಗಿ ಶಿಸ್ತಿನ ಹೆಸರಿನಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ಆದರೆ, ಇದನ್ನು ಈ ಆಫೀಸುಗಳಿಗೆ ಯಾವುದಾದರೂ ಕೆಲಸದ ಮೇಲೆ ಬರುವವರಿಗೂ ಅನ್ವಯಿಸುವೂದು ತೀರಾ ವಿಚಿತ್ರ ಮತ್ತು ಖಂಡನೀಯ.
ಇತ್ತೀಚೆಗೆ ಬೆಂಗಳೂರು ಸಮೀಪದ ಶಾಲೆಯೊಂದರಲ್ಲಿ, ತನ್ನ ಮೊಮ್ಮಗನ ಶುಲ್ಕ ಕಟ್ಟಲು ಬಂದ ರೈತ, ಆತ ಪ್ಯಾಂಟ್ ಧರಿಸದೇ, ಚಡ್ಡಿಯಲ್ಲಿ ಬಂದಿರುವನೆಂದು ಒಳಗೆ ಬಿಡಲಿಲ್ಲವಂತೆ ಮತ್ತು ಚಡ್ಡಿಯಲ್ಲಿ ಬಂದವರನ್ನು ಒಳಗೆ ಬಿಡಬಾರದೆಂದು ಶಾಲೆಯ ಆಡಳಿತ ವರ್ಗದ ನಿಯಮಾವಳಿ ಇದೆ ಎಂದು ಆತನಿಗೆ ಹೇಳಲಾಯಿತಂತೆ. ಈ ಪ್ರಕರಣ ಮಾಧ್ಯಮದವರ ಕಣ್ಣಿಗೆ ಬಿದ್ದು ದೊಡ್ಡ ರಂಪಾಟವಾಗಿ ಆಡಳಿತವರ್ಗದವರು ಪ್ರಕರಣ ಹತೋಟಿ ತಪ್ಪಿ ನಿಯಂತ್ರಣ ಕಳೆದುಕೊಳ್ಳುವ ಮೊದಲು ಎಚ್ಚೆತ್ತು ಭೇಷರತ್ ಕ್ಷಮೆ ಕೇಳಿದ್ದು, ಪ್ರಕರಣ ಅಲ್ಲಿಗೆ ಕೊನೆಗೊಂಡಿತು. ಇದು ಆ ಶಾಲೆಯವರ ದೊಡ್ಡತನ ಮತ್ತು ಸಣ್ಣ ವಿಷಯವನ್ನು ದೊಡ್ಡದು ಮಾಡಿ ಸಂಸ್ಥೆಯ ವರ್ಚಸ್ಸನ್ನು ಕೆಡಿಸಿಕೊಳ್ಳದಿರುವ ಮುತ್ಸದ್ಧಿತನವೂ ಇರಬಹುದು. ಸಾಮಾನ್ಯವಾಗಿ ಇಂತಹ ಶಾಲೆಯವರು ತಮ್ಮ ನೀತಿ ನಿಯಮಾವಳಿಗಳಿಗೇ ಗಟ್ಟಿಯಾಗಿ ಅಂಟಿಕೊಳ್ಳುತ್ತಾರೆ.
ವಸ್ತ್ರ ಸಂಹಿತೆ ಭಾರತದಲ್ಲಿ ನಿನ್ನೆ ಮೊನ್ನೆಯ ಬೆಳವಣಿಗೆಯಲ್ಲ. ಇಂಗ್ಲಿಷರ ವಸಾಹತುಶಾಹಿ ಆಡಳಿತದಲ್ಲಿಯೇ ಇದನ್ನು ಕಾಣಬಹುದು. ಶಿಸ್ತಿಗೆ ಹೆಸರಾದ ಇಂಗ್ಲಿಷರು ಇದನ್ನು ಭಾರತದಲ್ಲಿ ಕೂಡಾ ಹಂತ ಹಂತವಾಗಿ ಜಾರಿಗೊಳಿಸಿದರು. ಆವರ ಆಡಳಿತ, ಸೈನ್ಯ, ಕ್ಲಬ್ ಮತ್ತು ಇಗರ್ಜಿಗಳಲ್ಲಿ ಮೊದ ಮೊದಲು ಕಂಡುಬಂದ ಇದು, ಕಾಲಕ್ರಮೇಣ ಭಾರತೀಯರ ಜನಜೀವನದಲ್ಲಿಯೂ ಸ್ಥಾನ ಪಡೆಯಿತು. ಬಹುಶ: ಇದರಲ್ಲಿ ಭಾರತೀಯರು ಯಾವುದೇ ಅಕ್ಷೇಪವಾದುದನ್ನು ಕಾಣಲಿಲ್ಲವೇನೋ? ದಿನನಿತ್ಯದ ಜೀವನದಲ್ಲಿ, ಬದುಕಿನಲ್ಲಿ, ಶಿಸ್ತನ್ನು ಅಳವಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಇದನ್ನು ತಕರಾರಿಲ್ಲದೇ ಒಪ್ಪಿಕೊಳ್ಳಲಾಯಿತು ಮತ್ತು ಇದರಲ್ಲಿ ಯಾವುದೇ ಅಗೋಚರ ಅಜೆಂಡಾವನ್ನು ಕಾಣುವ ಪ್ರಯತ್ನವನ್ನೂ ಮಾಡಲಿಲ್ಲ.
ಇಂಗ್ಲಿಷರು ಬಿಟ್ಟು ಹೋದ ವಸ್ತ್ರ ಸಂಹಿತೆ, ಅವರು ದೇಶ ಬಿಟ್ಟುಹೋದ ಮೇಲೆ, ಬದಲಾದ ಸಾಮಾಜಿಕ - ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತು ವಾತಾವರಣದಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಆದರೆ, ಇವುಗಳಿಗೆ ಬದಲಾವಣೆಯ ಗಾಳಿ ಬೀಸದಿರುವುದು ತುಂಬಾ ವಿಚಿತ್ರ. ಅವರು ಬಿಟ್ಟುಹೋದ ಕೆಲವು ಪರಂಪರೆಗಳನ್ನು ಹಾಗೆಯೇ ಉಳಿಸಿಕೊಂಡದ್ದು ಕೆಲವು ಸಮಸ್ಯೆ ಮತ್ತು ವಿವಾದಗಳಿಗೆ ಕಾರಣವಾಗಿದೆ. ಹಾಗೆಯೇ ಇವುಗಳಿಗೆ ಬದಲಾವಣೆಯನ್ನು ತರುವ ಬದಲಿಗೆ ಇವುಗಳ ವ್ಯಾಪ್ತಿಯನ್ನು ವಿಸ್ತರಿಸುವ ಕೆಲಸವೂ ನಡೆಯಿತು.
ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಸ್ಲಿಪ್ಪರ್ ಹಾಕಿಕೊಂಡು ಬಂದವರಿಗೆ ಒಳ ಬಿಡಲಿಲ್ಲವಂತೆ. ಹಾಗೆಯೇ ತಮಿಳುನಾಡಿನಲ್ಲಿ ನ್ಯಾಯಾಂಗದ ದೊಡ್ಡ ವ್ಯಕ್ತಿಯೊಬ್ಬರು ಧೋತಿಯಲ್ಲಿ ಕ್ಲಬ್‌ಗೆ ಹೋದಾಗ, ಧೋತಿ ಉಟ್ಟವರಿಗೆ ಪ್ರವೇಶ ಇಲ್ಲವೆಂದು ಅವರನ್ನು ತಡೆಯಲಾಯಿತಂತೆ. ತಮಿಳುನಾಡು ಇದನ್ನು ಕರ್ನಾಟಕದಂತೆ ನಿರ್ಲಕ್ಷಿಸದೇ, ತುಂಬಾ ಗಂಭೀರವಾಗಿ ಪರಿಗಣಿಸಿತು. ಕೊಲ್ಕಾತ್ತಾದಲ್ಲೂ ಇಂತಹ ಪ್ರಕರಣ ನಡೆದ ವರದಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಈ ಪ್ರಕರಣಗಳು ದೇಶಾದ್ಯಂತ ಸಾಕಷ್ಟು ರಾದ್ಧಾಂತ ಎಬ್ಬಿಸಿದ್ದು, ವಸ್ತ್ರ ಸಂಹಿತೆ, ್ಛ್ಟಛಿಛಿಟಞ ಠಿಟ ಡಿಛಿಚ್ಟ ಡಿಠಿ ಟ್ಠ ್ಝಜಿಛಿ ಮತ್ತು ವಸಾಹತುಶಾಹಿಗಳನ್ನು, ಅವರು ದೇಶಬಿಟ್ಟು ಹೋದ ಮೇಲೂ ಅನುಸರಿಸುವ ಬಗೆಗೆ ಸಾಕಷ್ಟು ವಾದ, ವಿವಾದ, ಚರ್ಚೆ ದೇಶಾದ್ಯಂತ ನಡೆಯಿತು. ಈ ಪ್ರಕರಣವನ್ನು ತಮ್ಮ ನಾಡು ನುಡಿ ಮತ್ತು ಸಂಸ್ಕೃತಿಗೆ ಆದ ಅವಮಾನವೆಂದು ಪರಿಗಣಿಸಿದ ತಮಿಳುನಾಡು, ತಮ್ಮ ನಾಡು ನುಡಿ ಮತ್ತು ಸಂಸ್ಕೃತಿಯನ್ನು ಇನ್ನಿತರರಿಗಿಂತ ಹೆಚ್ಚು ಪ್ರೀತಿಸುವ ಮತ್ತು ಆರಾಧಿಸುವ ಪರಂಪರೆಗೆ ಅನುಗುಣವಾಗಿ, ಒಂದು ತಿಂಗಳಿನಲ್ಲಿಯೇ ಕ್ಲಬ್‌ಗಳಲ್ಲಿರುವ ವಸಾಹತುಶಾಹಿ ವಸ್ತ್ರ ಸಂಹಿತೆಗೆ ತನ್ನಿಚ್ಚೆಯಂತೆ ಬದಲಾವಣೆ ತರುವ ಕಾನೂನನ್ನು ಮಾಡಿತು ಮತ್ತು ಅಪಾರ ಜನಮನ್ನಣೆಯನ್ನೂ ಗಳಿಸಿತು.
ವಸ್ತ್ರ ಸಂಹಿತೆಯನ್ನು ರೂಢಿಸಿಕೊಳ್ಳುವಲ್ಲಿ ಯಾವುದೇ ತಪ್ಪಿಲ್ಲ. ಪರಿಸರಕ್ಕೆ ಮತ್ತು ಸದಾ ಬದಲಾಗುತ್ತಿರುವ ಚಿಂತನೆಗೆ ಅನುಗುಣವಾಗಿ ಅದನ್ನು ಮಾರ್ಪಡಿಸಿಕೊಳ್ಳಬೇಕು. ಅಜ್ಜ ನೆಟ್ಟ ಆಲದ ಮರವೆನ್ನುವ ಒಂದೇ ಕಾರಣಕ್ಕೆ ಸದಾ ಅದಕ್ಕೇ ಜೋತು ಬೀಳುವುದು ಬದಲಾಗುತ್ತಿರುವ ಸಾಮಾಜಿಕ ಚಿಂತನೆಯಲ್ಲಿ ಟ್ಠಠಿಠಿಛಿ ್ಚಟ್ಞ್ಚಛಿಠಿ ಎಂದು ಅನಿಸುತ್ತದೆ. ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾದ ತಿರುವು. ಅತಿಯಾದ ್ಟಜಿಜಜಿಠಿಯನ್ನು ಬಿಟ್ಟು ಸ್ವಲ್ಪ ್ಛ್ಝಛ್ಡಿಜಿಚಿಜ್ಝಿಜಿಠಿ ಅಳವಡಿಸಿಕೊಂಡರೆ ವಿವಾದಗಳನ್ನು ತಪ್ಪಿಸಬಹುದು.
ಶಿಸ್ತಿನ ಹೆಸರಿನಲ್ಲಿ, ಯಾವುದೋ ನಿಯಮಾವಳಿಯ ಅಡಿಯಲ್ಲಿ, ಮೊಮ್ಮಗನ ಶಾಲಾ ಶುಲ್ಕ ತುಂಬಲು ಬಂದ ಹಳ್ಳಿ ಹೈದನಿಗೂ ಚಡ್ಡಿ ಬಿಟ್ಟು ಪ್ಯಾಂಟ್‌ನಲ್ಲಿ ಬರಬೇಕೆಂದು ತಾಕೀತು ಮಾಡಿದರೆ, ಪ್ರಜ್ಞಾವಂತ ಜನತೆಯಿಂದ ತರಾಟೆಗೆ ಒಳಪಡಬೇಕಾಗುತ್ತದೆ.ಬದಲಾವಣೆಯ ಹರಿಕಾರರು ಮಾರ್ಮಿಕವಾಗಿ ಏಟು ಕೊಡುತ್ತಾರೆ. ಕೆಲವು ವಿಷಯಗಳಲ್ಲಿ ಸ್ಥಾನ, ಸ್ಥಳ, ಸಮಯವನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಹೆಜ್ಜೆ ಇಡಬೇಕಾಗುತ್ತದೆ. ಹೆಣ್ಣು ಮಕ್ಕಳೆಲ್ಲ ಚಡ್ಡಿ ಧರಿಸಿ ಓಡಾಡಿಕೊಂಡಿರುವಾಗ, ಹೊಲದಲ್ಲಿ ಬೆವರು ಸುರಿಸುವ ರೈತನು ಚಡ್ಡಿಯಲ್ಲಿ ಬರಬಾರದೇ ಎಂದು ಮುಗ್ಧವಾಗಿ, ಅದರೆ ಅಷ್ಟೇ ಖಡಕ್ ಆಗಿ ಆ ರೈತ ಪ್ರಶ್ನಿಸಿದಾಗ ಸಂಬಂಧಪಟ್ಟವರು ಮತ್ತು ಮಾಧ್ಯಮದವರು ದಂಗಾದರಂತೆ. ವಸ್ತ್ರ ಸಂಹಿತೆ ಗೌರವಾನ್ವಿತವಾಗಿ ಬಟ್ಟೆ ಧರಿಸಿ ಬರಬೇಕು ಎನ್ನುವುದಕ್ಕೆ ಸೀಮಿತವಾಗಿದ್ದರೆ, ಅದು ಅರ್ಥ ಪೂರ್ಣವಾಗಿರುತ್ತದೆ.