ಅಂತ್ಯ ಸಂಸ್ಕಾರ ಸರಕಾರಿ ಗೌರವಗಳೊಂದಿಗೆ ಜರಗಲಿ

Update: 2016-03-21 17:03 GMT

ಮೇಯರ್ ಪರಿಷತ್‌ನ ಬೇಡಿಕೆ

ಮಹಾರಾಷ್ಟ್ರದ ಎಲ್ಲಾ ಮೇಯರ್‌ಗಳು ಒಟ್ಟುಗೂಡಿ ಮುಖ್ಯಮಂತ್ರಿಯವರಿಗೆ ಒಂದು ಮನವಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಮೇಯರ್‌ಗಳ ಬೇಡಿಕೆ ಏನೆಂದರೆ ಅವರ ಅಂತ್ಯಸಂಸ್ಕಾರ ಸರಕಾರಿ ಗೌರವಗಳೊಂದಿಗೆ ನಡೆಯಬೇಕಂತೆ. ಇದು ಇವರೆಲ್ಲರ ಇಚ್ಛೆ ಆಗಿದೆಯಂತೆ. ಮಹಾರಾಷ್ಟ್ರದಾದ್ಯಂತ 26 ಮೇಯರ್‌ಗಳಿದ್ದಾರೆ. ಮೇಯರ್‌ಗಳು ಶಹರದ ಪ್ರಥಮ ನಾಗರಿಕರೆಂದು ಗೌರವಿಸಲಾಗುತ್ತದೆ. ಈ ಗೌರವ ಬಿಟ್ಟರೆ ಮೇಯರ್‌ಗಳಿಗೆ ಬೇರೆ ಯಾವ ಗೌರವವೂ ಸಿಗುವುದಿಲ್ಲ.

ಕೆಲವು ವರ್ಷದ ಮೊದಲು ಮೇಯರ್‌ಗಳಿಗೆ ವಿಶೇಷ ಸಮ್ಮಾನ ನೀಡಲಾಗಿತ್ತು. ಅದರಲ್ಲಿ ಮೇಯರ್ ಪರಿಷತ್ ರಚಿಸಲಾಗಿತ್ತು. ಶಹರದ ಎಲ್ಲಾ ಕೆಲಸ ಕಾರ್ಯಗಳ ಜವಾಬ್ದಾರಿ ಮೇಯರ್‌ಗೆ ಸಿಕ್ಕಿತ್ತು. ಕೇಂದ್ರ ಮತ್ತು ರಾಜ್ಯದ ರೀತಿಯಲ್ಲಿ ಪ್ರಶಾಸನಿಕ ಅ ಕಾರಿಗಳ ಕೈಯಿಂದ ಕೆಲಸ ಕಾರ್ಯಗಳ ಜವಾಬ್ದಾರಿ ಸೆಳೆದು ಮೇಯರ್‌ಗೆ ನೀಡ ಲಾಗಿತ್ತು. ಆದರೆ ವೈಯಕ್ತಿಕ ರಾಜಕೀಯ ದ್ವೇಷಗಳ ಕಾರಣ ಎರಡೂವರೆ ವರ್ಷಗಳಲ್ಲೇ ಮೇಯರ್‌ಗಳಿಗೆ ಸಿಕ್ಕಿದ ಅಕಾರವನ್ನು ವಾಪಸು ಪಡೆಯಲಾಗಿತ್ತು. ಎರಡೂವರೆ ವರ್ಷದ ನಂತರ ಮತ್ತೆ ಮೇಯರ್‌ನ್ನು ಒಂದು ರಬ್ಬರ್ ಸ್ಟ್ಯಾಂಪ್ ಆಗಿ ಇರಿಸಲಾಯಿತು.

ಇದೀಗ ಎಪ್ರಿಲ್‌ನಲ್ಲಿ ಜರಗುವ ಮೇಯರ್ ಪರಿಷತ್‌ನಲ್ಲಿ ರಾಜ್ಯದ ಎಲ್ಲಾ ಮೇಯರ್‌ಗಳು ಜೊತೆಯಾಗಿ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಅವರನ್ನು ಭೇಟಿಯಾಗಿ ತಮ್ಮ ಗೌರವಧನ ಹೆಚ್ಚಿಸುವ ಜೊತೆಗೆ ತಮ್ಮ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವದ ಜೊತೆಗೆ ನಡೆಸುವಂತೆ ಬೇಡಿಕೆ ಇರಿಸಲಿದ್ದಾರೆ. ಮೇಯರ್‌ಗಳು ಹೇಳುವಂತೆ ಯಾವ ರೀತಿಯ ಗೌರವ ಮೇಯರ್ ಆದ ನಂತರ ಸಿಗುವುದೋ ಅದೇ ರೀತಿಯ ಗೌರವ ತಮ್ಮ ಅಂತ್ಯ ಸಂಸ್ಕಾರದಲ್ಲೂ ಸಿಗಬೇಕಂತೆ.

ಮಹಾರಾಷ್ಟ್ರ ಸರಕಾರದ ನೂತನ ಪರ್ಯಟನ ನೀತಿ ಘೋಷಣೆ

ಮಹಾರಾಷ್ಟ್ರ ಸರಕಾರವು ವಿಧಾನಮಂಡಲದ ಬಜೆಟ್ ಅವೇಶನದಲ್ಲಿ ರಾಜ್ಯದ ನೂತನ ಪರ್ಯಟನ ನೀತಿ ಯನ್ನು ಘೋಷಿಸಿದೆ. ರಾಜ್ಯ ಮಂತ್ರಿ ಮಂಡಲದ ಒಪ್ಪಿಗೆ ಕೂಡಾ ಇದಕ್ಕೆ ಸಿಕ್ಕಿದ್ದಾಗಿ ಮುಖ್ಯಮಂತ್ರಿ ಹೇಳಿದರು. ಹೊಸನೀತಿಯ ಅನ್ವಯ ಮಹಾರಾಷ್ಟ್ರದಲ್ಲಿ ಪರ್ಯಟನೆಗೂ ಉದ್ಯೋಗ ಕ್ಷೇತ್ರಕ್ಕೆ ಸಿಗುವಂತಹ ಸೌಲಭ್ಯಗಳು ದೊರೆಯಲಿದೆ. ಹೊಸ ಪರ್ಯಟನ ನೀತಿಯ ಗುರಿ ಅಂದರೆ ರಾಜ್ಯದಲ್ಲಿ ಪರ್ಯಟನ ಕ್ಷೇತ್ರದಲ್ಲಿ 30 ಸಾವಿರ ಕೋಟಿ ರೂಪಾಯಿಯ ಹೂಡಿಕೆಯನ್ನು ಆಕರ್ಷಿ ಸುವುದು. ಹಾಗೂ ಮಹಾರಾಷ್ಟ್ರವನ್ನು ಸರ್ವಶ್ರೇಷ್ಠ ಪರ್ಯಟನ ಸ್ಥಳವಾಗಿಸಲು ಪ್ರೋತ್ಸಾಹಿಸುವುದು ಎನ್ನುತ್ತಾರೆ ಮುಖ್ಯಮಂತ್ರಿ. ಹೊಸ ಪರ್ಯಟನ ನೀತಿಯಲ್ಲಿ ಏನಿದೆ? ಹತ್ತು ಪರ್ಯಟನ ಸ್ಥಳಗಳಲ್ಲಿ ಪ್ರವಾಸಿ ಪೊಲೀಸರ ನಿಯುಕ್ತಿ, ಅವರಿಗೆ ವಿಶೇಷ ತರಬೇತಿ, ಪರ್ಯಟನೆಗೆ ಸಂಬಂಸಿ ಮಾಹಿತಿ ನೀಡಲಾಗುವುದು. ಗೈಡ್ ಮತ್ತು ಟ್ಯಾಕ್ಸಿ ಚಾಲಕರಿಗೆ ಪರ್ಯಟಕ ಫ್ರೆಂಡ್ಲಿ ಎನ್ನಿಸಿಕೊಳ್ಳುವಂತೆ ತರಬೇತಿ ನೀಡಲಾಗುವುದು. ಪರ್ಯಟನ ವಿಕಾಸ ಪಠ್ಯಕ್ರಮಕ್ಕಾಗಿ ಪ್ರತಿ ವ್ಯಕ್ತಿಗೆ 12,500 ರೂಪಾಯಿ ಮತ್ತು ಗೈಡ್ ಟ್ರೆನಿಂಗ್‌ಗಾಗಿ 5 ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಈ ಹೊಸ ನೀತಿಯಲ್ಲಿ ಕಾಲಕಾಲಕ್ಕೆ ವಿಶೇಷ ಪರ್ಯಟನ ಕ್ಷೇತ್ರ, ವಿಶೇಷ ಪರ್ಯಟನ ಜಿಲ್ಲೆಯನ್ನು ಸೂಚಿತಗೊಳಿಸಲಾಗುವುದು. ಇದರಲ್ಲಿ ಧಾರ್ಮಿಕ ಪರ್ಯಟನ, ಚಿಕಿತ್ಸಾ ಪರ್ಯಟನ, ಪ್ರಕೃತಿ ಪರ್ಯಟನ, ಕೃಷಿ ಪರ್ಯಟನ ಇಂತಹವುಗಳ ಸಮಾವೇಶ ಇರುವುದು. ಕೃಷಿ ಪರ್ಯಟನ ಕೇಂದ್ರಗಳಿಗೆ ಶೈಕ್ಷಣಿಕ ಪ್ರವಾಸ ಕೊಂಡೊಯ್ಯುವುದು ಶಾಲೆಗಳಿಗೆ ಅನಿವಾರ್ಯ ಎಂದು ಮಾಡಲಾಗುವುದು. ಪ್ರವಾಸಿಗರಿಗೆ ಮಾಹಿತಿ ಮತ್ತು ಸುರಕ್ಷೆ ನೀಡುವುದಕ್ಕೆ ಮೊಬೈಲ್ ಆ್ಯಪ್ ಸೌಲಭ್ಯ ಇತ್ಯಾದಿಗಳನ್ನು ಈ ನೀತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

504 ಬಾಲವಾಡಿಗಳು ಇನ್ನು ಮುಂಬೈ ಮನಪಾ ಮೇಲ್ವಿಚಾರಣೆಯಲ್ಲಿ!

ಮುಂಬೈ ಮಹಾನಗರ ಪಾಲಿಕೆಯ ಪಾರ್ಟಿ ನೇತಾರರ ಬೈಠಕ್‌ನಲ್ಲಿ ಮನಪಾ ಶಿಕ್ಷಣ ವಿಭಾಗದ ವ್ಯಾಪ್ತಿಗೆ ಬರುವ 504 ಬಾಲವಾಡಿಗಳನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡಿಸಿ, ಈ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಮಹಾನಗರ ಪಾಲಿಕೆಯ ಎಲ್ಲಾ ಸೌಲಭ್ಯಗಳನ್ನು ಉಪಲಬ್ಧ ಗೊಳಿಸುವ ಬಗ್ಗೆ ವಿಚಾರವಿಮರ್ಶೆಗಳು ನಡೆಯುತ್ತಿವೆ. ಈ ತನಕ ಪ್ರಾಥಮಿಕ ವಿಭಾಗ, ಮಹಾನಗರ ಪಾಲಿಕೆಯು ನಿಯುಕ್ತಿಗೊಳಿಸಿದ ಒಂದು ಸಂಸ್ಥೆಯು ಇದನ್ನು ಸಂಚಾಲನೆ ಮಾಡುತ್ತಿದೆ. ಹಾಗಾಗಿ ಯಾವುದೇ ಸೌಲಭ್ಯ ಇವರಿಗೆ ದೊರೆಯುತ್ತಿಲ್ಲ. ಇದೀಗ ಈ 504 ಬಾಲವಾಡಿಗಳನ್ನು ಸ್ವತಹ ಮಹಾನಗರ ಪಾಲಿಕೆಯೇ ತನ್ನ ಕೈಗೆತ್ತಿಕೊಳ್ಳಲಿದೆ. ಅನಂತರ ಈ ಬಾಲವಾಡಿಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ, ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಮನಪಾ ಸಿಬ್ಬಂದಿಗೆ ನೀಡಲಾಗುವ ರಜೆ, ಪೆನ್ಶನ್... ಇಂತಹ ಲಾಭಗಳು ದೊರೆಯಲಿವೆ. ಮಹಾನಗರಪಾಲಿಕೆ ಶಾಲೆಗಳಲ್ಲಿ ಕ್ಲಾರ್ಕ್ ಹುದ್ದೆ ಇಲ್ಲದ ಕಾರಣ ಈ ಬಾಲವಾಡಿಗಳಲ್ಲಿ ದುಡಿಯುವ ಮುಖ್ಯ ಅಧ್ಯಾಪಕಿಯರು, ಶಿಕ್ಷಕರಿಗೆ ಇಲ್ಲಿ ಕ್ಲಾರ್ಕ್ ಕೆಲಸ ಕೂಡಾ ಮಾಡಬೇಕಾಗುತ್ತದೆ.

ಇತ್ತೀಚೆಗೆ ನಡೆದ ಬೈಠಕ್‌ನಲ್ಲಿ ಈ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಲಾಗಿದ್ದು ಶಾಲೆಗಳಲ್ಲಿ ಕ್ಲಾರ್ಕ್ ಹುದ್ದೆ ನಿಯುಕ್ತಿ ಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಶೀಘ್ರವೇ ಕ್ಲಾರ್ಕ್ ಹುದ್ದೆಗೆ ಭರ್ತಿಗೊಳಿಸುವುದಾಗಿ ಭರವಸೆ ಸಿಕ್ಕಿದೆ ಎನ್ನುತ್ತಾರೆ ಶಿಕ್ಷಕ ಸಂಘದ ಉಪಾಧ್ಯಕ್ಷ ಆನಂದ ಪವಾರ್.

ಸಾಮಾನ್ಯ ಕಾರ್ಯಕ್ರಮಗಳಿಗೆ ಪೊಲೀಸ್ ಅನುಮತಿಯ ಬೇಕಿಲ್ಲ

ಮುಂಬೈಯಲ್ಲಿ ಶಾಸೀಯ ಸಂಗೀತ ಕಾರ್ಯಕ್ರಮ, ನೃತ್ಯ, ನಾಟಕ, ಗಜಲ್ ಕಾರ್ಯ ಕ್ರಮ, ವಾರ್ಷಿಕ ಸಮಾರಂಭ, ಶಾಲಾ/ಕಾಲೇಜುಗಳ ವಾರ್ಷಿಕೋತ್ಸವ... ಇತ್ಯಾದಿ ಇತ್ಯಾದಿ ಚಿಕ್ಕ ಚಿಕ್ಕ ಕಾರ್ಯಕ್ರಮಗಳಿಗಾಗಿ ಪೊಲೀಸರ ಅನುಮತಿ ಪಡೆಯಬೇಕಾಗಿದೆ.

ಆದರೆ ಇದೀಗ ಇಂತಹ ಚಿಕ್ಕ ಕಾರ್ಯಕ್ರಮಗಳಿಗೆ ಪೊಲೀಸರ ಅನುಮತಿ ಪಡೆಯುವ ಆವಶ್ಯಕತೆ ಇಲ್ಲ. ರಾಜ್ಯ ಸರಕಾರವು ಈ ಸಂಬಂಧವಾಗಿ ಒಂದು ಆದೇಶ ಹೊರಡಿಸಿದೆ. ಈ ಹೊಸ ಆದೇಶದಂತೆ ಇಂತಹ ಸಾಮಾನ್ಯ ಕಾರ್ಯಕ್ರಮಗಳಿಗೆ ಪೊಲೀಸರ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಡ್ಯಾನ್ಸ್‌ಬಾರ್, ಆರ್ಕೆಸ್ಟ್ರಾ ಬಾರ್, ಕ್ಯಾಬರೆ ಡ್ಯಾನ್ಸ್, ಡಿಸ್ಕೋಥೆಕ್, ಸ್ನೂಕರ್ ಆಟ.... ಇತ್ಯಾದಿಗಳಿಗೆ ಮೊದಲಿನಂತೆ ಪೊಲೀಸ್ ಅನುಮತಿ ಪಡೆಯಬೇಕು.

ಮುಂಬೈಯಲ್ಲೀಗ ಅಕ್ರಮ-ಸಕ್ರಮ ಕಟ್ಟಡಗಳ ಚರ್ಚೆ

ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಸಿಎಂ ದೇವೇಂದ್ರ ಡ್ನವೀಸ್ ಅವರು 31 ಡಿಸೆಂಬರ್ 2015 ರ ತನಕದ ರಾಜ್ಯದ 2 ಲಕ್ಷ ಅನಕೃತ ನಿರ್ಮಾಣಗಳನ್ನು ಅಕೃತ ಗೊಳಿಸುವ ಘೋಷಣೆಗೆ ಈಗ ನಾನಾ ಕಡೆಯಿಂದ ವಿವಿಧ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಈ ಅಕ್ರಮ - ಸಕ್ರಮ ಇಂದು ಮುಂಬೈಯಲ್ಲಿ ಭಾರೀ ಚರ್ಚೆ ಹುಟ್ಟಿಸುತ್ತಿದೆ.

ನವಿ ಮುಂಬೈ, ದಿಘಾ, ಥಾಣೆ, ವಸಾ-ವಿರಾರ್ ಮತ್ತು ಪುಣೆಯ ಪಿಂಪ್ರಿ ಚಿಂಚ್‌ವಡ್‌ನ ಜನರು ಈ ಘೋಷಣೆಯಿಂದ ನೆಮ್ಮದಿಯ ಉಸಿರು ಬಿಡುವಂತಾಗಿದೆ ಎನ್ನುತ್ತಿದ್ದಾರೆ. ಹೈಕೋರ್ಟ್ ಅನಕೃತ ಕಟ್ಟಡಗಳನ್ನು ಉರುಳಿಸಲು ಆದೇಶ ನೀಡಿತ್ತು. ಇಂತಹ ಸ್ಥಿತಿಯಲ್ಲಿ ರಾಜ್ಯ ಸರಕಾರದ ಈ ನಿರ್ಣಯ ಅನೇಕರಿಗೆ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ. ಅನಕೃತ ಕಟ್ಟಡಗಳನ್ನು ಮುಂದಿಟ್ಟು ರಚಿಸಿದ ಸಮಿತಿ ತನ್ನ ವರದಿ ನೀಡಿದ್ದು ಕ್ಯಾಬಿನೆಟ್ ಮಂಜೂರು ಮಾಡಿದೆ. ಆದರೆ ವಿರೋಧ ಪಕ್ಷದವರು ಈ ನಿರ್ಧಾರವನ್ನು ಬಿಲ್ಡರ್‌ಗಳ ಜೊತೆಗಿನ ಒಪ್ಪಂದ ಆಗಿದೆ ಎಂದು ಟೀಕಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪ್ರಮುಖ ರಾಜ್‌ಠಾಕ್ರೆ ಅವರು ರಾಜ್ಯ ಸರಕಾರವು ಬಿಲ್ಡರ್‌ಗಳ ಜೊತೆಗೆ ಒಪ್ಪಂದ ಮಾಡಿರುವುದೇ ಈ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ನಿರ್ಧರಿಸಿರುವುದಕ್ಕೆ ಕಾರಣ ಎಂದು ಆರೋ ಪಿಸಿದ್ದಾರೆ . ಬಿಲ್ಡರ್‌ಗಳು ಜನಸಾಮಾನ್ಯರನ್ನು ಸದಾ ಶೋಷಣೆ ಮಾಡುತ್ತಾ ಬಂದಿದ್ದಾರೆ. ಕಾನೂನನ್ನು ಕ್ಕರಿಸಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಹಾಗಿರುವಾಗ ಸರಕಾರ ಯಾವ ಆಧಾರದಲ್ಲಿ ಇಂತಹ ಅಕ್ರಮ ಕಟ್ಟಡಗ ಳನ್ನು ಸಕ್ರಮ ಮಾಡಲು ಮುಂದಾಗಿದೆ? ಮಹಾರಾಷ್ಟ್ರ ಸರಕಾರ ಜನ ಸಾಮಾನ್ಯರ ಏಳಿಗೆಯ ಬದಲು ಬಿಲ್ಡರ್‌ಗಳ ಹಿತಕ್ಕೆ ಕೆಲಸ ಮಾಡುತ್ತಿದೆ ಎಂದು ಟೀಕೆ ಹರಿಸಿದ್ದಾರೆ.

ಹಾಗಿದ್ದೂ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿ ಸುವಲ್ಲಿ ಸರಕಾರವು ಕೆಲವು ಶರತ್ತುಗಳನ್ನು ಹಾಕಿದೆ. ಈಗಾಗಲೇ ಥಾಣೆ ಕ್ಷೇತ್ರದ ದಿಘಾ ಪರಿಸರದಲ್ಲಿ 99 ಅನಕೃತ ಕಟ್ಟಡಗಳ ವಿಷಯ ತೀವ್ರ ಚರ್ಚೆ ಎಬ್ಬಿಸಿದೆ. ಥಾಣೆ, ವಸಾ, ವಿರಾರ್ ಸಹಿತ ಪಿಂಪ್ರಿ ಚಿಂಚ್‌ವಾಡಾದಲ್ಲಿ 65 ಸಾವಿರ ಅನಕೃತ ಕಟ್ಟಡಗಳಿವೆ ಎಂದು ವರದಿಯಾಗಿದೆ. ಇದ ನ್ನೆಲ್ಲ ಗಮನಿಸಿ ಜೂನ್ 2014 ರಂದು ಸರಕಾರವು ಒಂದು ಸಮಿತಿ ರಚಿಸಿ ವರದಿಯನ್ನು ಸಲ್ಲಿಸಲು ಹೇಳಿತ್ತು. ಸಮಿತಿಯ ಆ ವರದಿ ಆಧಾರದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನುತ್ತಾರೆ ಮುಂಬೈ ಬಿಜೆಪಿ ಅಧ್ಯಕ್ಷ ಎಡ್ವಕೇಟ್ ಆಶೀಷ್ ಶೇಲಾರ್.

ಪೊಲೀಸರಿಗೆ ಸಂಬಳದ ಪರದಾಟ

ಮಾರ್ಚ್ ಅಂದರೆ ಆರ್ಥಿಕ ವರ್ಷದ ಕೊನೆಯ ತಿಂಗಳು. ಸರಕಾರಿ ವಿಭಾಗದ ವರಿಗೂ ತೀವ್ರ ಕೆಲಸ. ಮುಂಬೈಯ ಸುರಕ್ಷೆಯಲ್ಲಿ ತೊಡಗಿಸಿಕೊಂಡ ಅಕಾಂಶ ಪೊಲೀಸರಿಗೆ ಮಾರ್ಚ್ ತಿಂಗಳಲ್ಲಿ ಅರ್ಧ ಮುಗಿದರೂ ಫೆಬ್ರವರಿ ತಿಂಗಳ ವೇತನ ಸಿಗದಿರುವ ಅಂಶ ಬೆಳಕಿಗೆ ಬಂದಿದೆ. ಹಾಗೂ ಪೊಲೀಸರಲ್ಲಿ ತೀವ್ರ ಬೇಸರವೂ ಮೂಡಿಸಿತು.

ಆದರೆ ಪೊಲೀಸ್ ಅಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಬೆಲೆಏರಿಕೆ ಭತ್ತೆ ಮತ್ತು ಇನ್ನಿತರ ಭತ್ತೆಗಳು ಹಾಗೂ ಅಂತರಗಳ ಮೊತ್ತ ವೇತನದಲ್ಲಿ ಸೇರಿಸಬೇಕಾಗಿದ್ದು ಆ ಕೆಲಸ ಪೂರ್ಣಗೊಳ್ಳದೆ ಇದ್ದುದರಿಂದ ಕೆಲವು ಸಿಬ್ಬಂದಿಗೆ ವೇತನ ತಡವಾಯಿತು ಎಂದಿದ್ದಾರೆ.

ಮುಂಬೈ ಪೊಲೀಸರಿಗೆ ಪ್ರತೀ ತಿಂಗಳ ಮೊದಲ ತಾರೀಕಿಗೆ ಯಾವುದೇ ಪರಿಸ್ಥಿತಿಯಲ್ಲೂ ವೇತನವನ್ನು ನೀಡುವಂತೆ ಆದೇಶವನ್ನು ಮೂರು ವರ್ಷದ ಮೊದಲು ಆಗಿನ ಕಾಂಗ್ರೆಸ್ ಎನ್.ಸಿ.ಪಿ. ಸರಕಾರದ ಗೃಹ ವಿಭಾಗವು ನೀಡಿತ್ತು. ಆದರೆ ಈ ಆದೇಶ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದೆ.

ಬುರ್ಖಾದ ಹೆಸರು ಹಾಳುಮಾಡುತ್ತಿರುವುದಕ್ಕೆ ತಡೆ....

ಮುಂಬೈಯಲ್ಲೀಗ ಬುರ್ಖಾದ ನೆಪದಲ್ಲಿ ಸಮಾಜದಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ನಡೆಸುತ್ತಿರುವ ಪ್ರಕರಣ ಗಳಿಂದ ರೋಸಿ ಹೋಗಿರುವ ಆಲ್ ಮಹಾರಾಷ್ಟ್ರ ಮುಸ್ಲಿಮ್ ಗ್ರೂಪ್‌ನ ಹಾಜಿ ಮುಹಮ್ಮದ್ ಇಲಿಯಾಸ್ ಕಾದ್ರಿ ಅವರು ಕೆಲವು ಸ್ಥಳಗಳಲ್ಲಿ ಬುರ್ಕಾಕ್ಕೆ ನಿಷೇಧ ಹೇರುವಂತೆ ಮುಂಬೈ ಪೊಲೀಸರಿಗೆ ಪತ್ರ ಬರೆದಿರುವುದು ವರದಿಯಾಗಿದೆ. ಹಾಜಿ ಮುಹಮ್ಮದ್ ಇಲಿಯಾಸ್ ಕಾದ್ರಿ ಅವರ ಹೊರತಾಗಿ ಗೌಸಿಯಾ ಕಮಿಟಿಯ ಮುಹಮ್ಮದ್ ಹುಸೈನ್ ಖಾನ್ ಕೂಡಾ ಪಿಕ್ನಿಕ್ ಸ್ಪಾಟ್, ಹೊಟೇಲ್, ಲಾಡ್ಜ್, ಸಮುದ್ರ ತೀರಗಳಂತಹ ಕೆಲವು ಸ್ಥಳಗಳಲ್ಲಿ ಬುರ್ಖಾಕ್ಕೆ ಬ್ಯಾನ್ ಹಾಕುವಂತೆ ಆಗ್ರಹಿಸಿದ್ದಾರೆ. ಅವರು ಹೇಳುವಂತೆ ಇಂದು ಮುಸ್ಲಿಂ ಮಹಿಳೆಯರ ಹೊರತಾಗಿ ಮುಸ್ಲಿಮೇತರರೂ ಕೆಲವರು ಬುರ್ಖಾವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅನೇಕ ಕಡೆ ಬುರ್ಖಾ ಹಾಕಿದ ಹೆಣ್ಣು ಮತ್ತು ಗಂಡುಗಳನ್ನು ಪೊಲೀಸರು ಬಂಸಿದ ಪ್ರಕರಣಗಳಲ್ಲಿ ಆ ಬುರ್ಖಾ ಹಾಕಿದ ಮಹಿಳೆ ಮುಸ್ಲಿಂ ಆಗಿರುವುದಿಲ್ಲ. ಲವರ್ಸ್ ಸ್ಪಾಟ್‌ಗಳಲ್ಲಿ ತಮ್ಮ ಗುರುತು ಸಿಗಬಾರದು ಎಂದು ಬುರ್ಖಾ ಹಾಕಿ ಬರುತ್ತಿರುವ ಘಟನೆಗಳಿಂದ ರೋಸಿ ಹೋಗಿ ಅಲ್ಲೆಲ್ಲ ಬುರ್ಖಾ ಬ್ಯಾನ್ ಮಾಡುವಂತೆ ಇದೀಗ ಆಮ್ ಜನತಾ ಸಾಮಾಜಿಕ ಸೇವಾ ಸಂಘದ ಅಧ್ಯಕ್ಷರಾದ ಹಾಜ್‌ರಾ ಖಾನ್ ಕೂಡಾ ಬೆಂಬಲಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಸೆಲಿ ಸ್ಟಿಕ್‌ಗೆ ನಿಷೇಧ

ಮುಂಬೈಯ ಕ್ರಿಕೆಟ್ ಪ್ರೇಮಿಗಳಿಗೆ ಈ ಸಮಯ ವಿಶ್ವ ಟಿ-20 ಯ ಜ್ವರ ತಲೆಗೇರುತ್ತಾ ಇದೆ. ಮಾರ್ಚ್ 16 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವ ಟಿ-20ಯ ಸೂಪರ್ ರೌಂಡ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಈ ಸಂದರ್ಭದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂ.ಸಿ.ಎ) ಕೆಲವೊಂದು ಸೂಚನೆಗಳನ್ನು ತಿಳಿಸಿತ್ತು. ಯುವ ಪೀಳಿಗೆಯಲ್ಲಿ ಬಹು ಪ್ರಖ್ಯಾತಿಯ ಸೆಲಿಸ್ಟಿಕ್ ಸ್ಟೇಡಿಯಂಗೆ ಒಯ್ಯಲು ನಿಷೇಸಿತ್ತು. ಇದರ ಜೊತೆ ಗುಟ್ಕಾ, ಪಾನ್, ಸಿಗರೇಟ್ ಡ್ರಿಂಕ್ಸ್ ಬಾಟಲಿಗಳು, ಪಾರಂಪರಿಕ ಶಸ.... ಹೀಗೆಲ್ಲ ವಸ್ತುಗಳನ್ನು ಒಳತರಲು ನಿಷೇಸಿತ್ತು.

ಎಪ್ರಿಲ್‌ನಲ್ಲಿ ಜರಗುವ ಮೇಯರ್ ಪರಿಷತ್‌ನಲ್ಲಿ ಮಹಾರಾಷ್ಟ್ರದ ಎಲ್ಲಾ ಮೇಯರ್‌ಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿ ಗೌರವಧನ ಹೆಚ್ಚಿಸುವ ಜೊತೆಗೆ ತಮ್ಮ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವದ ಜೊತೆಗೆ ನಡೆಸುವಂತೆ ಬೇಡಿಕೆ ಇರಿಸಲಿದ್ದಾರೆ. ಅವರು ಹೇಳುವಂತೆ ಯಾವ ರೀತಿಯ ಗೌರವ ಮೇಯರ್ ಆದ ನಂತರ ಸಿಗುವುದೋ ಅದೇ ರೀತಿಯ ಗೌರವ ತಮ್ಮ ಅಂತ್ಯ ಸಂಸ್ಕಾರದಲ್ಲೂ ಸಿಗಬೇಕಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News