ಶಾಸಕನಿಂದ ಕುದುರೆ ಕಾಲು ಮುರಿತ?

Update: 2016-03-21 16:43 GMT

ತ್ತರ ಖಾಂಡ ಸರಕಾರದ ವಿರುದ್ಧ್ದ ಪ್ರತಿಭಟಿಸುವ ಉದ್ವೇಗದಲ್ಲಿ, ಶಾಸಕರೊಬ್ಬರು ಪೊಲೀಸ್ ಕುದುರೆ ಯ ಕಾಲು ಮುರಿದಿದ್ದಾರೆ ಎನ್ನುವ ಆತಂಕಕಾರಿ ಮತ್ತು ಆಘಾ ತಕಾರಿ ಘಟನೆ, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗಿದೆ. ಬಿಜೆಪಿ ಶಾಸಕರೆಂದು ಹೇಳುವ ವ್ಯಕ್ತಿ ಯೊಬ್ಬರು ಭಾರೀ ಆವೇಶದಲ್ಲಿ ಕುದುರೆಯನ್ನು ಬಡಿಗೆಯಿಂದ ಹೊಡೆಯುವ ದೃಶ್ಯಾವಳಿಯನ್ನು ಕಳೆದ ಕೆಲವು ದಿನಗಳಿಂದ ಸುದ್ದಿವಾಹಿನಿಯವರು ಪದೇ ಪದೇ ತೋರಿಸುತ್ತಿದ್ದಾರೆ. ಕುದುರೆಯನ್ನು ಅಮಾನುಷವಾಗಿ ಹೊಡೆಯುವ ಹಿಂದಿನ ಕಾರಣ ಏನೇ ಇರಲಿ, ಅಮಾನವೀಯವಾಗಿ ಬಡಿಯುವ ಈ ಕರುಳು ಹಿಂಡುವ ದೃಶ್ಯವನ್ನು ದೇಶಾದ್ಯಂತ ಪ್ರಜ್ಞಾವಂತರು ಜಾತಿ, ಮತ ಮತ್ತು ಪಂಥಗಳ ಭೇದವಿಲ್ಲದೇ ಖಂಡಿಸಿದ್ದಾರೆ.

ಹಿಂಸೆಯನ್ನು ಯಾರೂ ಮತ್ತು ಯಾವ ಧರ್ಮವೂ ಒಪ್ಪುವುದಿಲ್ಲ. ಅದರಲ್ಲೂ ನಮ್ಮ ಸಮಾಜ ಮೂಕ ಪ್ರಾಣಿಗಳ ಮೇಲಿನ ಹಿಂಸೆ ಮತ್ತು ದೌರ್ಜನ್ಯವನ್ನು ಕೆಟ್ಟ ಕನಸಿನಲ್ಲೂ ಸಹಿಸುವುದಿಲ್ಲ. ಈ ಘಟನೆ ಮಾಧ್ಯಮದಲ್ಲಿ ಪ್ರಸಾರವಾದ ತಕ್ಷಣ, ಆ ಪಕ್ಷದ ವರಿಷ್ಠರು ಆ ಶಾಸಕನ ವಿರುದ್ಧ್ದ ಕ್ರಮ ತೆಗೆದು ಕೊಳ್ಳಬೇಕಾಗಿತ್ತು. ಆದರೆ, ಅಂಗೈ ಹುಣ್ಣಿಗೆ ಕನ್ನಡಿ ಕೇಳುವಂತೆ ಸಂಬಂಧಪಟ್ಟ ಪಕ್ಷದ ಪದಾಕಾರಿಗಳಿಂದ ವರದಿಗಾಗಿ ಕಾಯ್ದಿದ್ದು, ಅಕ್ಷಮ್ಯ ಅಪರಾಧ. ಹಾಗೆಯೇ ಕೆಲವರು ಇವರ ದುಷ್ಕೃತ್ಯವನ್ನು ಮೌನವಾಗಿ ಮತ್ತು ತಾಂತ್ರಿಕವಾಗಿ ಸಮರ್ಥಿಸಿ ಕೊಳ್ಳುವುದು ಇನ್ನೊಂದು ಅಪರಾಧ. ನ್ಯೂಸ್ ಚಾನೆಲ್ ಮೇಲೆ ಬಂದ ಅವರ ಕುಟುಂಬದವರು ಅವರನ್ನು ಸಮರ್ಥಿ ಸಿಕೊಳ್ಳುವುದು ಇನ್ನೊಂದು ಮಹಾ ದುರಂತ. ಸಾಮಾಜಿಕ ಜಾಲತಾಣದ ಒತ್ತಡ ಮತ್ತು ಕೇಂದ್ರ ಮಂತ್ರಿ ಮತ್ತು ಪ್ರಾಣಿ ದಯಾ ಸಂಘದ ಮೇನಕಾ ಗಾಂ ಧ್ವನಿ ಎತ್ತಿದಾಗಲೇ ಅವರನ್ನು ಬಂಸಿದ್ದು ಮತ್ತು ಅವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದು. ಈ ಪ್ರಕರಣ ಕೊನೆಗೆ ಹೇಗೆ ಮುಗಿಯುತ್ತದೆ, ಈ ಶಾಸಕನಿಗೆ ಶಿಕ್ಷೆಯಾಗಬಹುದೇ, ಯಾವಾಗ ಪ್ರಕರಣ ಅಂತ್ಯ ಕಾಣಬಹುದು ಎನ್ನುವುದು ಮಿಲಿಯನ್ ಡಾಲರ ಪ್ರಶ್ನೆ. ಜನರ ಜ್ಞಾಪಕ ಶಕ್ತಿ ತೀರಾ ಸಣ್ಣದಾಗಿದ್ದು,ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಹೊತ್ತಿಗೆ ಜನರು ಮರೆತಿರುತ್ತಾರೆ ಮತ್ತು ದುರುಳರು ತಮ್ಮ ಅಟ್ಟಹಾಸವನ್ನು ಮುಂದುವರಿಸುತ್ತಾರೆ. ಇಂತಹ ಪ್ರಹಸನಗಳಿಗೆ ನಮ್ಮ ದೇಶದಲ್ಲಿ ದೀರ್ಘ ಇತಿಹಾಸವಿದೆ.

ನಮ್ಮ ಕೆಲವು ಜನಪ್ರತಿನಿಗಳ ಅಟ್ಟ ಹಾಸವನ್ನು ನೋಡಿ ದಾಗ ಅರವತ್ತರ ದಶಕದ ಚಲನಚಿತ್ರ ಹಾಡು ‘‘ಯಾರು ಏನು ಮಾಡುವರು?ನಮಗೆ ಯಾರು ಏನು ಮಾಡುವರು’’ ನೆನಪಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ಜನಪ್ರತಿನಿಗಳು ತಾವು ಈ ನೆಲದ ಕಾಯ್ದೆ ಕಾನೂನು, ನೀತಿ ನಿಯಮಾವಳಿಗಳಿಗೆ ಅತೀತರು, ತಾವು ಮಾಡಿದ್ದೇ ಸರಿ?ತಾವು ಹೋಗಿದ್ದೇ ದಾರಿ ಎಂದು ನಡೆದುಕೊಳ್ಳುತ್ತಾರೆ. ಜನಪ್ರತಿನಿಗಳ ಮುಂದೆ ಎಲ್ಲರೂ ಮತ್ತು ಎಲ್ಲವೂ ನಶ್ವರ ಎನ್ನುವ ಅವರ ಚಿಂತನಾ ಲಹರಿಗೆ ಸಾಕಷ್ಟು ಉದಾಹರಣೆ ಗಳಿವೆ. ಹಾಗೆ ಒಮ್ಮೆ ಜನಪ್ರತಿನಿಯಾದರೆ ಕೊನೆಯವರೆಗೂ ಜನಪ್ರತಿನಿ ಎಂದು ಗಟ್ಟಿಯಾಗಿ ಭಾವಿಸುತ್ತಾರೆ. ಇಂಗ್ಲೆಂಡ್‌ನಲ್ಲಿ ಇರುವ King Can Do No Wrong  ಎನ್ನುವಂತೆ ಭಾರತದಲ್ಲಿ ರಾಜಕಾರಿಣಿಗಳು ಮುಖ್ಯವಾಗಿ ಜನಪ್ರತಿನಿಧಿಗಳು can do no wrong ಎನ್ನುವಂತಾಗಿದೆ.

ಜನಪ್ರತಿನಿಗಳ ಇಂತಹ ನಡತೆ ಕೇವಲ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಇವುಗಳನ್ನು ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಕಾಣಬಹುದು. ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಶಿವಸೇನೆ, ತೃಣಮೂಲ ಕಾಂಗ್ರೆಸ್‌ಗಳಲ್ಲಿ ಇಂತಹ ಉದಾಹರಣೆಗಳು ಸಾಕಷ್ಟಿವೆ. ಯಾವ ಪಕ್ಷವೂ ಈ ನಿಟ್ಟಿನಲ್ಲಿ ತನ್ನನ್ನು ತಾನು ಬೆನ್ನು ಚಪ್ಪರಿಸಿಕೊಳ್ಳುವಂತಿಲ್ಲ. ಇವರು ಆಡಳಿತ ಪಕ್ಷಕ್ಕೆ ಸೇರಿದವರಾದರೆ, ಇಂತಹ ಚಟುವಟಿಕೆಗಳು ಸ್ವಲ್ಪ ಹೆಚ್ಚಾಗಿ ಕಾಣುತ್ತಿದ್ದು, ಆಡಳಿತ ಪಕ್ಷದವರು ಎನ್ನುವ ಅಭಯ ಹಸ್ತ ಅವರನ್ನುಕಾಪಾಡುತ್ತದೆ. ಇದಕ್ಕೂ ಮಿಗಿಲಾಗಿ ಆಡಳಿತ ಪಕ್ಷದ ಬಹುಮತ ಢೋಲಾಯಮಾನದಲ್ಲಿ ಇದ್ದರೆ, ಆ ಪಕ್ಷ ಇವರ ಇಂತಹ ಹುಚ್ಚಾಟಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಬಿಜೆಪಿ ದೇಶದಲ್ಲಿ ದೇವರು, ಧರ್ಮ, ಆಚಾರ-ವಿಚಾರ, ನಾಡು- ನುಡಿ, ಸಂಸ್ಕೃತಿ, ಪಾಪ- ಪುಣ್ಯ ಗಳ ಗುತ್ತಿಗೆ ತೆಗೆದುಕೊಂಡವರಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದು, ಅಂತಹ ಪಕ್ಷದಿಂದ ಈ ರೀತಿಯ ನಡವಳಿಕೆ ಕಂಡುಬಂದರೆ ಜನಸಾಮಾನ್ಯರು ಪ್ರಶ್ನಿಸುತ್ತಾರೆ ಮತ್ತು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಪಕ್ಷದವರೂ ಹೀಗಾ ಎಂದು ಉದ್ಗಾರ ಎತ್ತುತ್ತಾರೆ.

ಇತ್ತೀಚಿನ ಕೆಲವು ಸಮೀಕ್ಷೆಗಳ ಪ್ರಕಾರ ಮೋದಿ ವರ್ಚಸ್ಸು ಕ್ಷೀಣಿಸುತ್ತಿದೆ. ಮೋದಿ ಅಲೆ ಸುಂಟರಗಾಳಿ ಸುಳಿಗಾಳಿಯಾ ಗಿದೆ. ಅವರ ಕೆಲವು ಆರ್ಥಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಹೆಜ್ಜೆಗಳನ್ನು ಜನಸಾಮಾನ್ಯರು ಒಪ್ಪುತ್ತಿಲ್ಲ. ಕೆಲವು ಸಹವರ್ತಿ ಸಂಘಟನೆಗಳ ಮೇಲೆ ಮತ್ತು ಕೆಲವು ನೇತಾರರ ಮೇಲೆ ಹಿಡಿತ ವಿಲ್ಲ ಎನ್ನುವ ಆಭಿಪ್ರಾಯವೂ ಇದೆ. ಈ ಸಂದಿಗ್ಧದಲ್ಲಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ತನ್ನ ಶಾಸಕನಿಂದ ನಡೆದಿದೆ ಎಂದು ಹೇಳಲಾದ ಘಟನೆಯನ್ನು ಸರಿಯಾಗಿ ನಿಭಾಯಿಸದೇ ತನ್ನ ವರ್ಚಸ್ಸನ್ನು ತಾನೇ ಕಡಿಮೆ ಮಾಡಿ ಕೊಂಡಿತು. ತಾನು party with difference ಎಂದು ದೃಢೀಕರಿಸಲು ದೊರೆತ ಅವಕಾಶವನ್ನು ಕೈಯಾರೆ ಚೆಲ್ಲಿಕೊಂಡಿ ತು. ಅವರ ದೃಷ್ಟಿಯಲ್ಲಿ ಇದೊಂದು ಸಾಮಾನ್ಯ ಘಟನೆ ಇರಬಹುದು. ಆದರೆ, ಜನರು ಇಂದು ರಾಜಕೀಯವಾಗಿ ಜಾಗೃತರಾಗಿದ್ದಾರೆ. ಪ್ರತಿಯೊಂದು ಘಟನೆಯನ್ನೂ ಸೂಕ್ಷ್ಮ ವಾಗಿ ಗಮನಿಸಿ, ವಿಶ್ಲೇಶಿಸಿ, ತಮ್ಮ ಸಮಯಕ್ಕಾಗಿ ಕಾಯುತ್ತಾರೆ. ಮೊದಲಿನಂತೆ taken for granted ಇರದೇ, ಯಾಕೆ ಮತ್ತು ಹೇಗೆ ಹೆಚ್ಚು ಪ್ರಸ್ತುತವಾಗುತ್ತಿದೆ. ಜನರ ರಾಜಕೀಯ ಪ್ರಜ್ಞೆ ಹೆಚ್ಚುತ್ತಿದೆ. ಜನತೆಗೆ ಯಾರೂ ಮತ್ತು ಯಾವ ರಾಜಕೀಯ ಪಕ್ಷವೂ ಅನಿವಾರ್ಯವಾಗಿ ಉಳಿದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮತ್ತು ಸಾಧನೆ ಮಾನದಂಡವಾಗಿ ಕಾಣುತ್ತಿದೆ. ರಾಜಕೀಯದಲ್ಲಿ ಒಮ್ಮೆ ವರ್ಚಸ್ಸನ್ನು ಕಳೆದುಕೊಂಡರೆ ಮರಳಿ ಗಳಿಸುವುದು ಕಷ್ಟ. ಕುದುರೆ ಕಾಲು ಮುರಿದ ಶಾಸಕ ಮತ್ತು ಅವನ ಅನುಯಾಯಿಗಳು ಇನ್ನೂ ಭಾರತದಲ್ಲಿ ಸವಕಲು ಹಿಡಿದ, ತನ್ನವಿರುದ್ದದ ಪಿತೂರಿ, ಷಡ್ಯಂತ್ರ ಮತ್ತು ತನ್ನ ಜನಪ್ರಿಯ ಕಾರ್ಯಗಳನ್ನು ಸಹಿಸದವರ ಕುತಂತ್ರ ಎನ್ನುವ ರೆಕಾರ್ಡ್ ತಿರುಗಿಸುತ್ತಿದ್ದಾರೆ. ಈ ವಿತಂಡವಾದವನ್ನು ಬಿಟ್ಟು ತನ್ನಿಂದ ಯಾವುದೋ ಆವೇಶದಲ್ಲಿ ಮತ್ತು ಹುಚ್ಚು ಉತ್ಸಾಹದಲ್ಲಿ ತಪ್ಪಾಗಿದೆ ಎಂದು ಇನ್ನೂ ಜನಪ್ರಿಯರಾಗುತ್ತಿದ್ದರು. ಆದರೆ, ಭಾರತದ ರಾಜಕೀಯದಲ್ಲಿ ತಪ್ಪೊಪ್ಪಿಕೊಳ್ಳುವ ಪರಂಪರೆ ಇಲ್ಲ. ನಮ್ಮ ದೇಶದಲ್ಲಿ, ಮುಖ್ಯವಾಗಿ ರಾಜಕಾರಣಿಗಳಿಗೆ ಇದು ನಿಷಿದ್ಧವಾದ ಪ್ರಕ್ರಿಯೆ. ಶಿಕ್ಷೆಯಾಗಿ ಗಲ್ಲಿನ ಮೇಲಿರುವಾಗಲೂ ತಾನು ನಿರಪರಾ ಎಂದು ಬಡಬಡಿಸುತ್ತಾರೆ. ಅವಕಾಶ ಕೊಟ್ಟರೆ ಮುಂದಿನ ನ್ಯಾಯಾಲಯದಲ್ಲಿ ಸಾಬೀತುಪಡಿಸುವು ದಾಗಿ ಕೂಗುತ್ತಾರೆ. ಟೆನಿಸ್ ತಾರೆ ಶರಪೋವಾ ತಪ್ಪೆಸಗಿದರು. ಆದರೆ, ಅದನ್ನು ಒಪ್ಪಿಕೊಂಡು ಇನ್ನೂ ಜನಪ್ರಿಯರಾದರು. ಈ ದೊಡ್ಡತನ ಭಾರತದಲ್ಲಿ ಬರೀ ಕನಸು ಮಾತ್ರ. ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಅಪರಾಗಳು ಮೊದ-ಮೊದಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಆದರೆ, ಕೊನೆಗೆ ಸತ್ಯವನ್ನು ಹೊರಗೆಡಹಿ ತಪ್ಪನ್ನು ಒಪ್ಪಿಕೊಂಡು ತಮ್ಮ ಹೃದಯವನ್ನು ಹಗುರಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಾಗಿದೆ.

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News