ಅಸ್ಸಾಮ್ ನಲ್ಲಿ ಅರಳಿದ ಕಮಲ
Update: 2016-05-19 08:29 GMT
ದಿಸ್ಪುರ್ , ಮೇ19: ಅಸ್ಸಾಂ ನಲ್ಲಿ ಕಮಲ ಅರಳಿದೆ. ಇದೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿರುವುದು ಖಚಿತವಾಗಿದೆ. ಬಿಜೆಪಿ 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ,ಆಡಳಿತ ಪಕ್ಷ ಕಾಂಗ್ರೆಸ್ 25 ಸ್ಥಾನಗಳಲ್ಲಿ ಮಾತ್ರ ಮುಂದಿದೆ. ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದ ಎ ಐ ಡಿ ಯು ಎಫ್ ಕೇವಲ 12 ಸ್ಥಾನಗಳಲ್ಲಿ ಮುಂದಿದೆ.
ಈ ಮೂಲಕ ಬಿಜೆಪಿಯ ಸರ್ಬಾನಂದ ಸೋನೋವಾಲ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಖ ಖಚಿತವಾಗಿದೆ. ಈ ಮೂಲಕ ಪ್ರಧಾನಿ ನರೆಂದ್ರ ಮೋದಿ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಗೆಲುವಿನ ನಗೆ ಬೀರಿದ್ದಾರೆ.