ಕೇರಳದಲ್ಲಿ ಬಿಜೆಪಿಗೆ ಅಚ್ಛೇ ದಿನ್ ಸೋಲೇ ಗೆಲುವಿನ ಸೋಪಾನ : ಓ ರಾಜಗೋಪಾಲ್ ಜಯಭೇರಿ
Update: 2016-05-19 06:37 GMT
ತಿರುವನಂತಪುರಮ್ , ಮೇ 19 : ಕೇರಳದಲ್ಲಿ ಕೊನೆಗೂ ಬಿಜೆಪಿ ಅಸೆಂಬ್ಲಿ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ನೆಮ್ಮಮ್ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಓ . ರಾಜಗೋಪಾಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಡರಂಗದ ಅಭ್ಯರ್ಥಿಗಿಂತ ಎಂಟು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಹಿರಿಯ ನಾಯಕ ಕೇರಳದ ಅಸೆಂಬ್ಲಿ ಪ್ರವೇಶಿಸುವ ಅವಕಾಶ ಪಡೆಯಲಿದ್ದಾರೆ.