ಅಯೋಧ್ಯೆಯಲ್ಲಿ ಬಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಾರಂಭ

Update: 2016-05-23 06:47 GMT

ಅಯೋಧ್ಯೆ,ಮೇ 23: ಉತ್ತರ ಪ್ರದೇಶದಲ್ಲಿ ಬಜರಂಗದಳ ತನ್ನ ಕಾರ್ಯಕರ್ತರಿಗೆ ರೈಫಲ್ ಚಲಾಯಿಸಲು, ತಲವಾರು ಪ್ರಯೋಗ ಮತ್ತು ಲಾಠಿ ಚಲಾಯಿಸುವ ತರಬೇತಿ ಪ್ರಾರಂಭಿಸಿದೆ. ಹಿಂದೂಗಳಿಗೆ ಅವರ ಸಹೋದರರಲ್ಲದವರಿಂದ ಸುರಕ್ಷಿತವಾಗಿರಲು ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಸಂಘಟನೆಯು ಹೇಳಿಕೊಂಡಿದೆ.

ಟ್ರೈನಿಂಗ್ ಕ್ಯಾಂಪ್ ಅಯೋಧ್ಯೆಯಲ್ಲಿ ಏರ್ಪಡಿಸಲಾಗಿದೆ. ಇಂತಹ ಕ್ಯಾಂಪ್‌ಗಳನ್ನು ಜೂನ್‌ನಲ್ಲಿ ಸುಲ್ತಾನ್‌ಪುರ, ಪಿಲಿಬಿತ್,ನೋಯ್ಡ ಹಾಗೂ ಫತೇಪುರದಲ್ಲಿಯೂ ನಡೆಸಲಾಗುವುದು. ಈ ಸಂಘಟನೆಯು ವಿಶ್ವಹಿಂದೂ ಪರಿಷತ್‌ನ ಯೂತ್ ವಿಂಗ್ ಆಗಿದೆ.ಈ ಸಂಘಟನೆಯ ವಿರುದ್ಧ ದಂಗೆ ಮತ್ತು ಹಿಂಸೆ ಹರಡಿದ ಆರೋಪವಿದೆ. ಆದರೆ ಬಜರಂಗದಳ ಅಸ್ತ್ರ ಪ್ರಯೋಗದ ಟ್ರೈನಿಂಗ್‌ನ್ನು ಹಲವು ವರ್ಷಗಳಿಂದ ಏರ್ಪಡಿಸುತ್ತಿದೆ. ಇದಕ್ಕಿಂತ ಮೊದಲು 2002ರಲ್ಲಿ ಅಯೋಧ್ಯೆಯಲ್ಲಿ ಆಯುಧ ತರಬೇತಿಯನ್ನುನಡೆಸಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News